ಎಲ್ಐಸಿಯ ಈ ಯೋಜನೆಯಲ್ಲಿ ಕೇವಲ 29 ರೂಪಾಯಿಗಳನ್ನು ಹೂಡಿಕೆ ಮಾಡಿ ಪಡೆಯಬಹುದು 4 ಲಕ್ಷ ರೂಪಾಯಿ

Fri, 17 Dec 2021-2:26 pm,

ಮಹಿಳೆಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಎಲ್‌ಐಸಿಯ ಈ ಪಾಲಿಸಿಯನ್ನು ತಂದಿದೆ. ಈ ಯೋಜನೆಯ ಹೆಸರು ಎಲ್ಐಸಿ ಆಧಾರ್ ಶಿಲಾ ಯೋಜನೆ. ಎಲ್ಐಸಿಯ ಈ ಯೋಜನೆಯಡಿ, 8 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಹೂಡಿಕೆ ಮಾಡಬಹುದು. 

ಬುದ್ಧಿವಂತಿಕೆಯಿಂದ ಬಳಸಿದರೆ, ಈ ಯೋಜನೆಯಿಂದ ನೀವು ಲಕ್ಷ ರೂಪಾಯಿಗಳನ್ನು ಪಡೆಯಬಹುದು. ಪ್ರತಿದಿನ ಕೇವಲ 29 ರೂಪಾಯಿಗಳನ್ನು ಉಳಿಸುವ ಮೂಲಕ 4 ಲಕ್ಷದವರೆಗೆ ಹಣ ಪಡೆಯಬಹುದು.   

LIC ಯ ಆಧಾರ್ ಶಿಲಾ ಯೋಜನೆಯು ತನ್ನ ಗ್ರಾಹಕರಿಗೆ ಭದ್ರತೆ ಮತ್ತು ಉಳಿತಾಯ ಎರಡನ್ನೂ ನೀಡುತ್ತದೆ. ಆದರೆ ಆಧಾರ್ ಕಾರ್ಡ್ ಮಾಡಿದ ಮಹಿಳೆಯರು ಮಾತ್ರ ಇದರ ಲಾಭ ಪಡೆಯಬಹುದು. ಮೆಚ್ಯುರಿತಿ ನಂತರ  ಪಾಲಿಸಿದಾರನು ಹಣವನ್ನು ಪಡೆಯುತ್ತಾನೆ. ಎಲ್ಐಸಿಯ ಈ ಯೋಜನೆಯು ಪಾಲಿಸಿದಾರರಿಗೆ ಮತ್ತು ಅವರ ಮರಣದ ನಂತರ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ಒದಗಿಸುತ್ತದೆ.  

ಎಲ್ಐಸಿ ಆಧಾರ್ ಶಿಲಾ ಯೋಜನೆಯಡಿ ಕನಿಷ್ಠ 75000 ರೂ  ಮತ್ತು ಗರಿಷ್ಠ 3 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಈ ಪಾಲಿಸಿಯ ಮುಕ್ತಾಯ ಅವಧಿಯು ಕನಿಷ್ಠ 10 ವರ್ಷಗಳು ಮತ್ತು ಗರಿಷ್ಠ 20 ವರ್ಷಗಳು. ಈ ಯೋಜನೆಯ ಗರಿಷ್ಠ ಮೆಚುರಿಟಿ ವಯಸ್ಸು 70 ವರ್ಷಗಳು.  ಈ ಯೋಜನೆಯ ಪ್ರೀಮಿಯಂ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಮಾಡಲಾಗುತ್ತದೆ.

ಈ ಯೋಜನೆಯನ್ನು ನೀವು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳಬಹುದು. ನೀವು 30 ವರ್ಷ ವಯಸ್ಸಿನವರಾಗಿದ್ದರೆ ಮತ್ತು 20 ವರ್ಷಗಳವರೆಗೆ ಪ್ರತಿದಿನ 29 ರೂಗಳನ್ನು ಠೇವಣಿ ಮಾಡಿದರೆ, ಮೊದಲ ವರ್ಷದಲ್ಲಿ ನಿಮ್ಮ ಒಟ್ಟು ಠೇವಣಿ 10,959 ರೂ. ಈಗ ಅದರಲ್ಲಿ ಶೇ.4.5ರಷ್ಟು ತೆರಿಗೆಯೂ ಇರಲಿದೆ. ಮುಂದಿನ ವರ್ಷದ   ಠೇವಣಿ  10,723 ರೂ. ಈ ರೀತಿಯಾಗಿ,  ಈ ಪ್ರೀಮಿಯಂಗಳನ್ನು ಪ್ರತಿ ತಿಂಗಳು, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಠೇವಣಿ ಮಾಡಬಹುದು. 20 ವರ್ಷಗಳಲ್ಲಿ 2,14,696 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ ಮತ್ತು ಮೆಚ್ಯೂರಿಟಿಯ ಸಮಯದಲ್ಲಿ  ಒಟ್ಟು 3,97,000 ರೂಪಾಯಿಗಳನ್ನು ಪಡೆಯಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link