Investment In Gold - ಚಿನ್ನದಲ್ಲಿ ಹೂಡಿಕೆ ಮಾಡಲು ಇದೆ ಸರಿಯಾದ ಸಮಯ, ಯಾವ ಆಪ್ಶನ್ ನಲ್ಲಿನ ಹೂಡಿಕೆ ಹೆಚ್ಚು ಲಾಭದಾಯಕ
ಚಿನ್ನದ ಹೂಡಿಕೆಯ ಮೇಲೆ ಹೆಚ್ಚು ಲಾಭಗಳಿಸಲು ಹಣದುಬ್ಬರದ ಮೇಲೆ ನಿಗಾ ಇಡುವುದು ತುಂಬಾ ಮುಖ್ಯವಾದ ಅಂಶವಾಗಿದೆ. ಹಣದುಬ್ಬರ ಹೆಚ್ಚುತ್ತಿದೆ ಎಂದು ನೀವು ಭಾವಿಸಿದರೆ, ನಂತರ ಚಿನ್ನದ ಮೇಲೆ ಹೂಡಿಕೆ ಮಾಡಲು ಪ್ರಾರಂಭಿಸಿ ಏಕೆಂದರೆ ಅದು ಹಣದುಬ್ಬರದ ವಿರುದ್ಧದ ಉತ್ತಮ ಲಾಭವಾಗಿದೆ. ಹಣದುಬ್ಬರದ ಪ್ರವೃತ್ತಿಯನ್ನು ನೀವು ಎಷ್ಟು ಬೇಗನೆ ಕಂಡು ಹಿಡಿಯುತ್ತೀರೋ ಅಷ್ಟು ಬೇಗ ನೀವು ಹೂಡಿಕೆಯನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಆರ್‌ಬಿಐನಿಂದ ಹೆಚ್ಚಿನ ಕರೆನ್ಸಿ ವಿತರಣೆಯನ್ನು ನೀವು ಚಿನ್ನದಲ್ಲಿ ಹೂಡಿಕೆ ಹೆಚ್ಚಿಸುವ ಸಂಕೇತವೆಂದು ಪರಿಗಣಿಸಬಹುದು. ಚಿನ್ನದ ಬೆಲೆಯ ಚಕ್ರವನ್ನು ನೀವು ಮೇಲ್ವಿಚಾರಣೆ ಮಾಡಲು ಸಾಧ್ಯವಾದರೆ ಉತ್ತಮ. ಬೀಳುವ ಬೆಲೆಯಲ್ಲಿ ಚಿನ್ನವನ್ನು ಖರೀದಿಸುವುದು ಮತ್ತು ಹೆಚ್ಚಾಗುತ್ತಿರುವ ಬೆಲೆಯಲ್ಲಿ ಮಾರಾಟ ಮಾಡುವುದು ಒಂದು ಉತ್ತಮ ತಂತ್ರವಾಗಿದೆ.
ಚಿನ್ನದಲ್ಲಿ ಮಾಡಲಾಗುವ ಯಾವುದೇ ರೀತಿಯ ಹೂಡಿಕೆ ಉತ್ತಮ ರಿಟರ್ನ್ ನೀಡುತ್ತದೆ ಎಂಬುದು ಸಾಬೀತುಪಡಿಸುತ್ತದೆ. ಆದರೂ ಕೂಡ ಗೋಲ್ಡ್ ಮ್ಯುಚವಲ್ ಪಂಡ್ ಹಾಗೂ ಗೋಲ್ಡ್ ಇಟಿಎಫ್ ಗಳಲ್ಲಿನ ಹೂಡಿಕೆಗೆ ನೀವು ಆದ್ಯತೆ ನೀಡಬಹುದು. ಗೋಲ್ಡ್ ಇಟಿಎಫ್ ಗಳು ಲಿಸ್ಟೆಡ್ ಮಾಡಲಾಗಿರುತ್ತದೆ ಮತ್ತು ಇವು ಷೇರು ವಿನಿಮಯ ಕೇಂದ್ರದಲ್ಲಿ ವ್ಯಾಪಾರ ಮಾಡುತ್ತವೆ. ಆದರೆ, ಇದಕ್ಕಾಗಿ ನೀವು ಡಿಮ್ಯಾಟ್ ಖಾತೆ ಹೊಂದಿರುವುದು ಆವಶ್ಯಕ. ಇದರಲ್ಲಿ ಹೂಡಿಕೆಗಾಗಿ ನೀವು ದಲ್ಲಾಳಿ ಶುಲ್ಕ ಪಾವತಿಸಬೇಕು. ಆದರೆ, ಈ ಶುಲ್ಕ ತುಂಬಾ ಕಡಿಮೆಯಾಗಿರುತ್ತದೆ.
ಗೋಲ್ಡ್ ಬಾರ್ ಅಥವಾ ನಾಣ್ಯಗಳಲ್ಲಿಯೂ ಕೂಡ ನೀವು ಹೂಡಿಕೆ ಮಾಡಬಹುದು. ಆಭರಣಗಳಲ್ಲಿನ ಹೂಡಿಕೆಗಿಂತ ಇದು ಉತ್ತಮ ಆದಾಯ ನೀಡುತ್ತದೆ. ಏಕೆಂದರೆ ಇದರಲ್ಲಿ ಮೇಕಿಂಗ್ ಚಾರ್ಜ್ ಶಾಮೀಲಾಗಿರುವುದಿಲ್ಲ.