Investment Tips: ಹೂಡಿಕೆಯ ಹಲವು ಪಟ್ಟು ರಿಟರ್ನ್ ಪಡೆಯಲು ಹೊಸ ವರ್ಷದಲ್ಲಿ ಈ ರೀತಿ ನಿಮ್ಮ ಹಣ ನಿರ್ವಹಿಸಿ
ಹೊಸ ವರ್ಷ ಆರಂಭಗೊಂಡಿದೆ. ಹೊಸ ವರ್ಷದಲ್ಲಿ ಹಲವು ಸಂಗತಿಗಳನ್ನು ಮಾಡಲು ಸಂಕಲ್ಪ ತೆಗೆದುಕೊಳ್ಳುತ್ತಾರೆ. ಹೀಗಿರುವಾಗ, ಹೊಸ ವರ್ಷದಲ್ಲಿ ನಿಮ್ಮ ಹಣಕಾಸಿನ ಗುರಿಯನ್ನು ಒಮ್ಮೆ ನೋಡಿಕೊಳ್ಳಿ. ಹೊಸ ವರ್ಷದಲ್ಲಿ ನಿಮ್ಮ ಹಣವನ್ನು ನಿರ್ವಹಿಸಲು ನೀವು ಬಯಸಿದರೆ, ಕೆಲವು ಹೂಡಿಕೆ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ಹಣವನ್ನು ಹಲವು ಪಟ್ಟು ಹೆಚ್ಚಿಸಬಹುದು. ಹೀಗಿರುವಾಗ ನೀವು ಕೆಲವು ಸಲಹೆಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ. ಈ ಸಲಹೆಗಳು ನಿಮಗೆ ಹಲವು ಪಟ್ಟು ಆದಾಯವನ್ನು ನೀಡಬಹುದು. ಅಂತಹ ಕೆಲವು ಸಲಹೆಗಳ ಬಗ್ಗೆ ತಿಳಿಯೋಣ.
ಬಂಡವಾಳವನ್ನು ನಿರ್ಮಿಸಿ- ಮಾರುಕಟ್ಟೆಯ ಏರಿಳಿತಗಳ ವಿರುದ್ಧ ನಿಮ್ಮ ಹೂಡಿಕೆಗಳನ್ನು ರಕ್ಷಿಸಲು ವೈವಿಧ್ಯೀಕರಣವು ಮುಖ್ಯವಾಗಿದೆ. ನಿಮ್ಮ ಹೂಡಿಕೆಗಳು ನಿರ್ದಿಷ್ಟ ಆಸ್ತಿ ವರ್ಗದಲ್ಲಿ ಕೇಂದ್ರೀಕೃತವಾಗಿದ್ದರೆ, ನೀವು ನಿಮ್ಮ ಸಂಪೂರ್ಣ ಬಂಡವಾಳವನ್ನು ಅಪಾಯಕ್ಕೆ ಸಿಲುಕಿಸುತ್ತೀರಿ. ಆ ಮಾರುಕಟ್ಟೆ ವಲಯವು ಹಿಂಜರಿತ ಅನುಭವಿಸಿದರೆ ನೀವು ನಷ್ಟವನ್ನು ಸಹ ಅನುಭವಿಸಬಹುದು. ಇಂತಹ ಸಂದರ್ಭದಲ್ಲಿ, ನಿಮ್ಮ ಪೋರ್ಟ್‌ಫೋಲಿಯೊದಲ್ಲಿ ವಿವಿಧ ವಲಯಗಳಲ್ಲಿ ಹೂಡಿಕೆಯನ್ನು ಶಾಮೀಲುಗೊಳಿಸಿ.
ದೀರ್ಘಾವಧಿಯ ಹೂಡಿಕೆಗಳು- ಪ್ರಬಲ ಆರ್ಥಿಕ ಭವಿಷ್ಯಕ್ಕಾಗಿ ಹೂಡಿಕೆ ಮಾಡುವ ಅತ್ಯಂತ ಯಶಸ್ವಿ ಮಾರ್ಗವೆಂದರೆ ದೀರ್ಘಾವಧಿಗೆ ನಿಮ್ಮ ಉಳಿತಾಯ ಮತ್ತು ಹೂಡಿಕೆಗಳನ್ನು ಯೋಜಿಸುವುದು. ನಿಮ್ಮ ದೀರ್ಘಾವಧಿಯ ಹಣಕಾಸಿನ ಗುರಿಗಳು ಮತ್ತು ಅಪಾಯದ ಸಹಿಷ್ಣುತೆಯನ್ನು ಗಣನೆಗೆ ತೆಗೆದುಕೊಳ್ಳುವ ಯೋಜನೆಯನ್ನು ರೂಪಿಸಿ ಮತ್ತು ವೈವಿಧ್ಯಮಯ ಸ್ವತ್ತುಗಳ ಪೋರ್ಟ್ಫೋಲಿಯೊವನ್ನು ಅದು ಹೊಂದಿರಬೇಕು ಎಂಬುದರ ಕಾಳಜಿವಹಿಸಿ. ಅಂತಹ ಯೋಜನೆಯು ಮಾರುಕಟ್ಟೆ ಬದಲಾವಣೆಗಳಿಗೆ ನಿಮ್ಮನ್ನು ಉತ್ತಮವಾಗಿ ಸಿದ್ಧಪಡಿಸುತ್ತದೆ.
ಸಾಲವನ್ನು ಕಡಿಮೆ ಮಾಡಿ- ನೀವು ಯಾವುದೇ ಬ್ಯಾಂಕ್‌ಗಳಿಂದ ಸಾಲ ಪಡೆಯಲು ನಿರ್ಧರಿಸಿದ್ದಾರೆ ಅಥವಾ ಸಾಲವನ್ನು ತೆಗೆದುಕೊಂಡಿದ್ದರೂ, ಅದನ್ನು ಈ ವರ್ಷ ಕಡಿಮೆ ಮಾಡಿ ಅಥವಾ ಮುಗಿಸಿ. ಮಧ್ಯಮ ಆದಾಯದ ಕುಟುಂಬಗಳು ಸಾಲದ ಕಾರಣದಿಂದಾಗಿ ಬಹಳಷ್ಟು ನೊಂದು ಹೋಗುತ್ತವೆ. ದಕ್ಷ ಹಣಕಾಸು ಯೋಜನೆಗಾಗಿ ಸಾಲಗಳ ಮೇಲೆ ನಿಗಾ ಇಡಲು ಮತ್ತು ಹೊರೆಯನ್ನು ಕಡಿಮೆ ಮಾಡಲು ಯಾವಾಗಲೂ ಸಲಹೆ ನೀಡಲಾಗುತ್ತದೆ.
ಬಜೆಟ್ ಮಾಡಿ- ನೀವು ಎಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು ಮತ್ತು ನಿಮ್ಮ ವೆಚ್ಚಗಳು ಎಷ್ಟು ಎಂದು ಬಜೆಟ್ ಮಾಡಿ. ಈ ಬಜೆಟ್‌ಗೆ ಅನುಗುಣವಾಗಿ ಮಾತ್ರ ಹಣವನ್ನು ಹೂಡಿಕೆ ಮಾಡಿ.