ವಾರ್ಷಿಕವಾಗಿ ಕೇವಲ 25,000. ರೂ. ಹೂಡಿಕೆ ಮೂಲಕ ಆರಂಭಿಸಿ ಈ ಸೂಪರ್‌ಹಿಟ್ ಬಿಸ್ ನೆಸ್ , ಪ್ರತಿ ತಿಂಗಳು ಗಳಿಸಿ 2 ಲಕ್ಷ ರೂ.
ಇತ್ತೀಚಿನ ದಿನಗಳಲ್ಲಿ ಮೀನು ಸಾಕಣೆಯ ವ್ಯವಹಾರವು ಬಹಳ ಜನಪ್ರಿಯವಾಗುತ್ತಿದೆ. ಸರಕಾರದ ನೆರವಿನಿಂದ ಆರಂಭವಾದ ಈ ವ್ಯಾಪಾರದಿಂದ 2 ಲಕ್ಷಕ್ಕೂ ಅಧಿಕ ಆದಾಯ ಬರುತ್ತದೆ. ಈ ವ್ಯಾಪಾರಕ್ಕಾಗಿ, ಕೇಂದ್ರ ಸರಕಾರವೂ ಹಲವು ಸೌಲಭ್ಯಗಳನ್ನು ನೀಡುತ್ತಿರುವುದು ಗಮನಿಸಬೇಕಾದ ಸಂಗತಿ.
ನೀವು ಮೀನು ಸಾಕಾಣಿಕೆ ವ್ಯವಹಾರವನ್ನು ಮಾಡುತ್ತಿದ್ದರೆ ಅಥವಾ ಅದನ್ನು ಪ್ರಾರಂಭಿಸಲು ಬಯಸಿದರೆ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು. ಇದರಿಂದ ನಿಮಗೆ ಬಂಪರ್ ಲಾಭ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಯೋಫ್ಲಾಕ್ ಟೆಕ್ನಿಕ್ ಮೀನು ಸಾಕಣೆಗೆ ಬಹಳ ಪ್ರಸಿದ್ಧವಾಗಿದೆ.
ಬಯೋಫ್ಲೋಕ್ ಟೆಕ್ನಿಕ್ ಮೂಲಕ ಮೀನು ಸಾಕಾಣಿಕೆಯ ವ್ಯವಹಾರವು ತುಂಬಾ ಸುಲಭವಾಗುತ್ತದೆ. ಇದರಲ್ಲಿ, ಮೀನುಗಳನ್ನು ದೊಡ್ಡ ತೊಟ್ಟಿಗಳಲ್ಲಿ ಹಾಕಲಾಗುತ್ತದೆ. ಈ ತೊಟ್ಟಿಗಳಿಗೆ ನೀರು ಹಾಕುವುದು, ತೆಗೆಯುವುದು, ಆಮ್ಲಜನಕ ಪೂರೈಸುವುದು ಇತ್ಯಾದಿಗಳಿಗೆ ಉತ್ತಮ ವ್ಯವಸ್ಥೆ ಮಾಡಲಾಗುತ್ತದೆ. ಬಯೋಫ್ಲೋಕ್ ಬ್ಯಾಕ್ಟೀರಿಯಾವು ಮೀನಿನ ಮಲವನ್ನು ಪ್ರೋಟೀನ್ ಆಗಿ ಪರಿವರ್ತಿಸುತ್ತದೆ. ಇದನ್ನೇ ಮೀನು ಮತ್ತೆ ತಿನ್ನುತ್ತದೆ. ಇದರಿಂದ ಮೀನಿಗೆ ನೀಡುವ ಫೀಡ್ ಖರ್ಚು ಕೂಡಾ ಕಡಿಮೆಯಾಗುತ್ತದೆ. ನೀರು ಕೊಳೆಯಾಗದಂತೆ ಇದು ತಡೆಯುತ್ತದೆ.
ಮೀನು ಸಾಕಣೆಯು ವ್ಯವಹಾರದಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಸರ್ಕಾರವೂ ಮೀನುಗಾರಿಕೆಗೆ ಉತ್ತೇಜನ ನೀಡುತ್ತಿದೆ. ಈ ಉದ್ಯಮಕ್ಕೆ ಸರ್ಕಾರದಿಂದ ಮೀನುಗಾರರಿಗೆ ವಿಮಾ ಯೋಜನೆ ಮತ್ತು ಸಹಾಯಧನವೂ ದೊರೆಯುತ್ತದೆ.