IPL 2020: ಈ ಬಾರಿಯ IPL ಉದ್ಘಾಟನಾ ಸಮಾರಂಭದಲ್ಲಿ ಈ ಐದು ಸಂಗತಿಗಳು ಕಾಣುವುದಿಲ್ಲ

Sat, 19 Sep 2020-2:08 pm,

ಐಪಿಎಲ್‌ನ 12 ನೇ ಆವೃತ್ತಿಯಂತೆ ಈ ಬಾರಿಯೂ ಕೂಡ ಉದ್ಘಾಟನಾ ಸಮಾರಂಭ ನಡೆಯುತ್ತಿಲ್ಲ.  ಆದರೆ, ಈ ಬಾರಿ ಈ ಸಮಾರಂಭವನ್ನು ಮಾಡದಿರಲು ಕಾರಣ ಮಾತ್ರ ಬದಲಾಗಿದೆ. ಕಳೆದ ಋತುವಿನಲ್ಲಿ  ಪುಲ್ವಾಮಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಆರ್ಪಿಎಫ್ ಸಿಬ್ಬಂದಿಗಳ ಮೇಲೆ ಭಯೋತ್ಪಾದಕ ದಾಳಿಯಿಂದಾಗಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿರಲಿಲ್ಲ, ಬದಲಿಗೆ ಬಿಸಿಸಿಐನ ಆಡಳಿತಾಧಿಕಾರಿಗಳ ಸಮಿತಿ (CEO) ಉದ್ಘಾಟನಾ ಸಮಾರಂಭಕ್ಕೆ ತಗಲುವ ವೆಚ್ಚವನ್ನು ಹುತಾತ್ಮರಾದ ಸಿಆರ್ಪಿಎಫ್ ಜವಾನರ ಕುಟುಂಬ ಸದಸ್ಯರಿಗೆ ನೀಡಿದ್ದರು. ಈ ಬಾರಿ, ಕರೋನಾ ವೈರಸ್‌ನಿಂದ ಸೋಂಕು ಹರಡುವುದನ್ನು ತಡೆಗಟ್ಟಲು, ಉದ್ಘಾಟನಾ ಸಮಾರಂಭಗಳನ್ನು ತೆಗೆದುಹಾಕಲಾಗಿದೆ.

13 ಆವೃತ್ತಿಗಳಲ್ಲಿ ಇದೆ ಮೊದಲ ಬಾರಿಗೆ ಬೌಂಡರಿ-ಸಿಕ್ಸರ್ ಗೆ ಕುಣಿದು ಕುಪ್ಪಳಿಸುವ ಚಿಯರ್ ಲೀಡರ್ಸ್ ಗಳು ಇರುವುದಿಲ್ಲ.  ಬ್ಯಾಟ್ಸ್ ಮ್ಯಾನ್ ಗಳ ಬೌಂಡರಿ ಹಾಗೂ ಸಿಕ್ಸರ್ ಗಳನ್ನು ನೋಡಿ ಖುಷಿಪಡುತ್ತಿದ್ದ ಪ್ರೇಕ್ಷಕರು ಅಷ್ಟೇ ಚಿಯರ್ ಲೀಡರ್ಸ್ ಗಳ ನೃತ್ಯ ವಿಕ್ಷೀಸಿ ಖುಷಿ ಪಡುತ್ತಿದ್ದರು. ಮೈದಾನದಲ್ಲಿ ಕನಿಷ್ಠ ಜನರ ಉಪಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಲೀಗ್ ಗೆ ಮೆರಗು ನೀಡಲು ಈ ಬಾರಿ ಚಿಯರ್ ಲೀಡರ್ಸ್ ಗಳು ಇರುವುದಿಲ್ಲ.

ಇದೆ ಮೊದಲ ಬಾರಿಗೆ ಮೈದಾನದಲ್ಲಿ ಪ್ರೇಕ್ಷಕರ ಡೆಸ್ಕ್ ನಿಮಗೆ ಖಾಲಿ ಕಂಗೊಳಿಸಲಿದೆ. ಬ್ಯಾಟ್ಸ್ ಮ್ಯಾನ್ ಗಳು ಹೊಡೆಯುವ ಸಿಕ್ಸರ್ ಗಳನ್ನು ಮೈದಾನದ ಹೊರಗಡೆ ನಿಂತು ಕ್ಯಾಚ್ ಮಾಡಲು ಕಾತರರಾಗಿರುವ ಪ್ರೇಕ್ಷಕರು ಈ ಬಾರಿ ಇರುವುದಿಲ್ಲ. ಇದೇ ರೀತಿ ಮೈದಾನದ ಒಳಗಡೆ ಕಾಮೆಂಟರಿ ಮಾಡಲು ತಂಡ ಕೂಡ ಇರುವುದಿಲ್ಲ. ಅವರು ಕೇವಲ ಸ್ಟುಡಿಯೋಗಳಲ್ಲಿ ಮಾತ್ರ ಇರಲಿದ್ದಾರೆ.

ಈ ಬಾರಿ ತಂಡಗಳ ಆಟಗಾರರನ್ನು ಹೊರತುಪಡಿಸಿ ತಂಡದ ಇತರೆ ತಂತ್ರಜ್ಞರು ಅಂದರೆ ವಿಡಿಯೋ ಅನಾಲಿಸ್ಟ್ ಹಾಗೂ ಇತರರು ಡ್ರೆಸಿಂಗ್ ರೂಮ್ ನಲ್ಲಿ ಕುಳಿತುಕೊಳ್ಳುವುದಿಲ್ಲ. ಅವರು ಪ್ರೇಕ್ಷಕರ ಸ್ಟಾಂಡ್ ನಲ್ಲಿಯೇ ತಮ್ಮ ವಾಸ್ತವ್ಯ ಹೂಡಲಿದ್ದಾರೆ. ಆಟಗಾರರನ್ನು ಆದಷ್ಟು ಕಡಿಮೆ ಜನರ ಸಂಪರ್ಕಕ್ಕೆ ಕೊಂಡೊಯ್ಯುವುದು ಇದರ ಹಿಂದಿನ ಉದ್ದೇಶವಾಗಿದೆ. ಹೀಗಾಗಿ ಈ ಬಾರಿ ತಂಡಗಳ ವಾರ್ ರೂಮ್ ಪ್ರತ್ಯೇಕವಾಗಿರಲಿದೆ.

ಈ ಬಾರಿ ಮಾಧ್ಯಮ ಪ್ರತಿನಿಧಿಗಳಿಗೂ ಕೂಡ ಸ್ಟೇಡಿಯಂಗೆ ಎಂಟ್ರಿ ನೀಡಲಾಗುತ್ತಿಲ್ಲ. ಆದರೆ, ತಂಡ ಪ್ರಾಕ್ಟೀಸ್ ನಲ್ಲಿ ನಿರತವಾಗಿರುವ ವೇಳೆ ಸ್ಟೇಡಿಯಂಗೆ ಪ್ರವೇಶಿಸುವ ಅನುಮತಿ ನೀಡಲಾಗಿದೆ. ಮಿಡಿಯಾ ಹಾಗೂ ತಂಡದ ಆಟಗಾರರ ನಡುವೆ ಫಿಸಿಕಲ್ ಸಂಪರ್ಕ ಇರುವುದಿಲ್ಲ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅವರು ಆಟಗಾರರ ಸಂದರ್ಶನ ಇತ್ಯಾದಿಗಳನ್ನು ಪಡೆಯಬಹುದು. ಮ್ಯಾಚ್ ಬಳಿಕ ಎಂದಿನಂತೆ ಪ್ರೆಸ್ ಕಾನ್ಫರೆನ್ಸಿಂಗ್ ನಡೆಯಲಿದೆ. ಆದರೆ ಆಟಗಾರರು ಖುದ್ದಾಗಿ ಉಪಸ್ಥಿತರಿರಲಿದ್ದಾರೆಯೇ ಅಥವಾ ಇಲ್ಲ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link