IPL 2021 Awards List: ವೈಯಕ್ತಿಕ ಪ್ರಶಸ್ತಿ ಪಡೆದ ಆಟಗಾರರ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ ನೋಡಿ

Sat, 16 Oct 2021-1:30 pm,

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫರ್ಪೆಕ್ಟ್ ಕ್ಯಾಚ್ ಆಫ್ ದಿ ಸೀಸನ್ ಪ್ರಶಸ್ತಿಯು ಪಂಜಾಬ್ ಕಿಂಗ್ಸ್ ತಂಡದ ರವಿ ಬಿಷ್ಣೋಯಿ ಪಾಲಾಗಿದೆ.    

ಪ್ರಸಕ್ತ ಋತುವಿನ ಪರ್ಪಲ್ ಕ್ಯಾಪ್ ಪ್ರಶಸ್ತಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಪಾಲಾಗಿದೆ. ಒಟ್ಟು 32 ವಿಕೆಟ್ ಪಡೆದು ಮಿಂಚಿರುವ ಹರ್ಷಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಡ್ವೇನ್‌ ಬ್ರಾವೊ ಜೊತೆಗೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇದಲ್ಲದೆ ಮೋಸ್ಟ್ ವ್ಯಾಲ್ಯುಬಲ್ ಪ್ಲೇಯರ್(ಅತಿ ಮೌಲ್ಯಯುತ ಆಟಗಾರ) ಎಂಬ ಹೆಗ್ಗಳಿಕೆಗೂ ಹರ್ಷಲ್ ಪಾತ್ರರಾಗಿದ್ದಾರೆ.

ಪ್ರಸಕ್ತ ಋತುವಿನ ಆರೆಂಜ್ ಕ್ಯಾಪ್ ಪ್ರಶಸ್ತಿಯು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಫೋಟಕ ಆಟಗಾರ ಋತುರಾಜ್ ಗಾಯಕ್ವಾಡ್ ಪಾಲಾಗಿದೆ. ಚೆನ್ನೈ ಪರ 16 ಪಂದ್ಯಗಳನ್ನು ಆಡಿದ ಋತುರಾಜ್ 1 ಶತಕ ಮತ್ತು 4 ಅರ್ಧಶತಕ ಸೇರಿದಂತೆ 635 ರನ್ ಗಳಿಸಿದ್ದಾರೆ. ಆರೆಂಜ್ ಕ್ಯಾಪ್ ಜೊತೆಗೆ ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ದೆಹಲಿ ಕ್ಯಾಪಿಟಲ್ಸ್ ತಂಡದ ಆಲ್ ರೌಂಡರ್ ಆಟಗಾರ ಶಿಮ್ರಾನ್ ಹೆಟ್ಮೆಯರ್ ಪ್ರಸಕ್ತ ಸಾಲಿನ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹೆಟ್ಮೆಯರ್ 168 ಸ್ಟ್ರೈಕ್ ರೇಟ್ ಹೊಂದಿದ್ದಾರೆ.    

ಪ್ರಸಕ್ತ ಸಾಲಿನ ಫೇರ್ ಪ್ಲೇ ಪ್ರಶಸ್ತಿಯು ಸಂಜು ಸ್ಯಾಮನ್ಸ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದೆ.

ಪ್ರಸಕ್ತ ಸಾಲಿನ ಪವರ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿಯು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ವೆಂಕಟೇಶ್ ಅಯ್ಯರ್ ಪಾಲಾಗಿದೆ.

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್.ರಾಹುಲ್ 30 ಸಿಕ್ಸರ್ ಭಾರಿಸಿದ್ದು, ಗರಿಷ್ಠ ಸಿಕ್ಸರ್ ಹೊಡೆದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.  

ದೆಹಲಿ ಕ್ಯಾಪಿಟಲ್ಸ್ ನ ಆರಂಭಿಕ ಆಟಗಾರ ಶಿಖರ್ ಧವನ್ ಪ್ರಸಕ್ತ ಸಾಲಿನಲ್ಲಿ ಅತಿಹೆಚ್ಚು ಬೌಂಡರಿ ಭಾರಿಸಿರುವ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 16 ಪಂದ್ಯಗಳಲ್ಲಿ ಧವನ್ ಬರೋಬ್ಬರಿ 63 ಬೌಂಡರಿ ಭಾರಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link