Photo Gallery: ಐಪಿಎಲ್ ಚಾಂಪಿಯನ್ ಚೆನ್ನೈ ತಂಡದ ಸಂಭ್ರಮದ ಕ್ಷಣಗಳು..!
ಕೊನೆಯಲ್ಲಿ ಕೋಲ್ಕತ್ತಾ ತಂಡದ ಪರವಾಗಿ ಲಾಕಿ ಫಾರ್ಗಿಸನ್ 18, ಹಾಗೂ ಶಿವಂ ಮಾವಿ 20 ರನ್ ಗಳಿಸಿದರೂ ಕೂಡ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಕೊನೆಗೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳನ್ನು ಮಾತ್ರ ಗಳಿಸಲಷ್ಟೇ ಸಾಧ್ಯವಾಯಿತು.
ತಂಡದ ಮೊತ್ತ 91 ರನ್ ಗಳಾಗಿದ್ದಾಗ ವೆಂಕಟೇಶ್ ವಿಕೆಟ್ ಒಪ್ಪಿಸುವುದರೊಂದಿಗೆ ಕೊಲ್ಕತ್ತಾದ ಪತನ ಆರಂಭವಾಯಿತು. ಇದಾದ ನಂತರ ಕೋಲ್ಕತ್ತಾ ತಂಡದ ವಿಕೆಟ್ ಗಳು ತಲೆಗರಲೆಯಂತೆ ಬಿದ್ದವು.
ಈ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ತಂಡವು ಉತ್ತಮ ಆರಂಭವನ್ನೇ ಪಡೆಯಿತು ಶುಬ್ಮನ್ ಗಿಲ್ (51) ಹಾಗೂ ವೆಂಕಟೇಶ್ ಅಯ್ಯರ್ (50) ರನ್ ಗಳಿಸುವ ಮೂಲಕ ಪಂದ್ಯವನ್ನು ಕೋಲ್ಕತ್ತಾದ ಪರವಾಗಿ ವಾಲುವಂತೆ ಮಾಡಿದರು.
ದುಪ್ಲೆಸಿಸ್ ಅಂತೂ ಕೇವಲ 59 ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ ಏಳು ಬೌಂಡರಿಗಳ ನೆರವಿನಿಂದಾಗಿ ಬರೋಬ್ಬರಿ 86 ರನ್ ಗಳಿಸಿದರು.ಕೊನೆಯ ಹಂತದಲ್ಲಿ ಉತ್ತಪ್ಪ ಹಾಗೂ ಮೊಯಿನ್ ಕ್ರಮವಾಗಿ 31,ಹಾಗೂ 37 ರನ್ ಗಳ ಮೂಲಕ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದರು.
ಟಾಸ್ ಗೆದ್ದು ಮೊದಲು ಕೊಲ್ಕತ್ತಾ ತಂಡವು ಕ್ಷೇತ್ರರಕ್ಷಣೆಯನ್ನು ಆಯ್ದುಕೊಂಡಿತು. ಇದೇವೇಳೆ ಮೊದಲ ಬ್ಯಾಟಿಂಗ್ ನ ಅವಕಾಶವನ್ನು ಪಡೆದುಕೊಂಡ ಚೆನ್ನೈ ತಂಡವು ಸಿಕ್ಕಿರುವ ಅವಕಾಶವನ್ನು ಚೆನ್ನೈ ತಂಡವು ಸರಿಯಾಗಿಯೇ ಬಳಸಿಕೊಂಡಿತು.ಆರಂಭದ ಆಟಗಾರ ರುತುರಾಜ್ ಗಾಯಕ್ವಾಡ್ ಹಾಗೂ ದುಪ್ಲೆಸಿಸ್ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಉತ್ತಮ ಆರಂಭವನ್ನು ಪಡೆಯಿತು