1 ಐಪಿಎಲ್, 16 ಪಂದ್ಯ, 973 ರನ್: ಯಾರಿಂದಲೂ ಟಚ್ ಮಾಡೋಕಾಗ್ತಿಲ್ಲ ವಿರಾಟ್ ಸೃಷ್ಟಿಸಿದ ಈ ದಾಖಲೆಗಳನ್ನು!
ಅತೀ ಹೆಚ್ಚು ವೀಕ್ಷಣೆಗಳನ್ನು ಪಡೆಯುವ ಕ್ರಿಕೆಟ್ ಸ್ವರೂಪ ಅಂದರೆ ಅದು ಐಪಿಎಲ್ ಕ್ರಿಕೆಟ್ ಲೀಗ್. ಪ್ರತಿ ಕ್ರೀಡಾಋತುವಿನಲ್ಲಿ ಅದೆಷ್ಟೋ ಹೊಸ ದಾಖಲೆಗಳ ಸೃಷ್ಟಿಯಾಗುತ್ತದೆ. ಜೊತೆಗೆ ಹಳೆಯ ದಾಖಲೆಗಳು ಹಾಗೇ ಉಳಿಯುತ್ತವೆ. ಐಪಿಎಲ್ ಇತಿಹಾಸದಲ್ಲಿ ಅಂತಹ ಹಲವು ದಾಖಲೆಗಳನ್ನು ಮಾಡಲಾಗಿದೆ. ಅದರ ಬಗ್ಗೆ ಊಹಿಸಿಕೊಳ್ಳುವುದು ತುಂಬಾ ಕಷ್ಟ.
ಸದ್ಯ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಡುತ್ತಿರುವ ಭಾರತದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈಗ ಶಾಂತವಾಗಿದ್ದರೂ ಸಹ ಅವರ ಬ್ಯಾಟಿಂಗ್ ಶೈಲಿ ಅಬ್ಬರದಿಂದ ಕೂಡಿರುತ್ತದೆ. 2016 ರ ಐಪಿಎಲ್‌ನಲ್ಲಿ ವಿರಾಟ್ ಹೇಳತೀರದ ಸಾಧನೆಯನ್ನು ಮಾಡಿದ್ದರು. ಒಂದೇ ಋತುವಿನಲ್ಲಿ ಅವರು ಅನೇಕ ದಾಖಲೆಗಳನ್ನು ಸೃಷ್ಟಿಸಿದ್ದರು.
ಐಪಿಎಲ್’ನ ಒಂದು ಸೀಸನ್‌ನಲ್ಲಿ ವಿರಾಟ್ ಮಾಡಿದ್ದ ಈ ಸಾಧನೆಯನ್ನು ಇಡೀ ವರ್ಷದಲ್ಲಿ ಯಾವೊಬ್ಬ ಆಟಗಾರ ಕೂಡ ಮಾಡಲು ಸಾಧ್ಯವಾಗಿರಲಿಲ್ಲ. 2016 ರ ಐಪಿಎಲ್’ನಲ್ಲಿ ವಿರಾಟ್ 4 ತ್ವರಿತ ಶತಕಗಳನ್ನು ಬಾರಿಸಿದ್ದರು. ಇದು ವಿರಾಟ್ ಹೆಸರಿನಲ್ಲಿರುವ ವಿಶೇಷ ದಾಖಲೆಯಾಗಿದೆ.
2016 ರ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ನಡುವೆ ಪಾಲುದಾರಿಕೆ ಇತ್ತು. ಇದು ಈ ಟೂರ್ನಿಯ ಇತಿಹಾಸದಲ್ಲೇ ಅತಿ ದೊಡ್ಡ ಜೊತೆಯಾಟವಾಗಿದೆ. ಈ ಪಂದ್ಯದಲ್ಲಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದರು. ಇವರಿಬ್ಬರ ನಡುವೆ 229 ರನ್‌ಗಳ ದೊಡ್ಡ ಜೊತೆಯಾಟವಿದ್ದು, ಇದುವರೆಗೂ ಯಾರಿಂದಲೂ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.
ವಿರಾಟ್ ಕೊಹ್ಲಿ 2016ರ ಐಪಿಎಲ್‌ನಲ್ಲಿ ಆಡಿದ 16 ಪಂದ್ಯಗಳಲ್ಲಿ 81.08 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಯಾವುದೇ ಆಟಗಾರನಿಗೆ ಇಷ್ಟು ವೇಗದಲ್ಲಿ ರನ್ ಗಳಿಸುವುದು ಸುಲಭವಲ್ಲ. ಆದರೆ ಅದನ್ನು ವಿರಾಟ್ ಕೊಹ್ಲಿ ಮಾಡಿದ್ದಾರೆ. ಇದು ಸ್ವತಃ ಒಂದು ದಾಖಲೆಯಾಗಿದೆ.
ಐಪಿಎಲ್‌ನ ಒಂದು ಸೀಸನ್’ನಲ್ಲಿ ಕೊಹ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು. ಇದು ಐಪಿಎಲ್‌ನ ಒಂದು ಋತುವಿನಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಅತಿ ಹೆಚ್ಚು ರನ್ ಆಗಿದೆ. ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಯಾವುದೇ ಆಟಗಾರ 800 ರನ್‌ಗಳನ್ನು ತಲುಪಿಲ್ಲ. ಹಾಗಾಗಿ ಈ ದಾಖಲೆ ಮುರಿಯುವುದು ಅಸಾಧ್ಯ ಎನಿಸುತ್ತಿದೆ.