IPL 2025: ಕೆಎಲ್‌ ರಾಹುಲ್‌ RCB ಸೇರ್ಪಡೆ ಸೀಕ್ರೇಟ್‌ ರಿವೀಲ್..‌ ಸುಳಿವು‌ ಕೊಟ್ಟ ಫ್ರಾಂಚೈಸಿ!

Tue, 01 Oct 2024-1:15 pm,

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಬಿಸಿ) ತನ್ನ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವನ್ನು ಪೋಸ್ಟ್ ಮಾಡಿದೆ.

ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಾಯಕ ಕೆಎಲ್ ರಾಹುಲ್ ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ ಎಂಬ ಚರ್ಚೆ ಹುಟ್ಟಿಕೊಂಡಿದೆ.   

ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಸಾಮಾಜಿಕ ಮಾಧ್ಯಮದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಟಿವಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಫೋಟೋವೊಂದನ್ನು ಪೋಸ್ಟ್‌ ಮಾಡಿದೆ.  

ಈ ಫೋಟೋ ಕೊಹ್ಲಿ ಮತ್ತು ರಾಹುಲ್ ನಡುವೆ ನಡೆಯುತ್ತಿರುವ ಜೊತೆಯಾಟವಾಗಿದೆ. ಈ ಪೋಸ್ಟ್ ನಂತರ, ಕೆಎಲ್ ರಾಹುಲ್ ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಬಹುದು ಎಂಬ ಊಹಾಪೋಹಗಳು ಪ್ರಾರಂಭವಾದವು.  

ಐಪಿಎಲ್ 2024 ರಲ್ಲಿ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ರಾಹುಲ್ ನಡುವೆ ಕೆಲವು ವಿಷಯದ ಬಗ್ಗೆ ತೀವ್ರ ವಾಗ್ವಾದ ನಡೆಯಿತು. ಈ ವಿಡಿಯೋ ವೈರಲ್‌ ಆಗಿತ್ತು.

ಈ ವಿಡಿಯೋ ಬಳಿಕ ಕರ್ನಾಟಕದವರೇ ಆದ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೇಂಟ್ಸ್ ತೊರೆದು RCB ಪರ ಆಡಬೇಕೆಂಬ ಮಾತುಗಳು ಶುರುವಾದವು. 

ರಾಯಲ್ ಚಾಲೆಂಜರ್ಸ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಕೆಎಲ್ ರಾಹುಲ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಹಿನ್ನೆಲೆ ಅವರು RCB ಗೆ ಬಂದರೆ ತಂಡದ ಬಲ ಹೆಚ್ಚಲಿದೆ.

ಇದೀಗ ಆರ್‌ಸಿಬಿಯ ಪೋಸ್ಟ್‌ ಕೆಎಲ್‌ ರಾಹುಲ್‌ ಬೆಂಗಳೂರು ತಂಡ ಸೇರುವ ಮುನ್ಸೂಚನೆಯೇ ಎಂದು ನೆಟ್ಟಿಗರು ತಲೆಕೆಸಿಕೊಂಡಿದ್ದಾರೆ. 

ಕೆಎಲ್ ರಾಹುಲ್ ಅವರು 2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೂಲಕವೇ ಐಪಿಎಲ್‌ಗೆ ಎಂಟ್ರಿ ಕೊಟ್ಟರು.   

ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 19 ಪಂದ್ಯಗಳನ್ನು ಆಡಿದ್ದಾರೆ. ಈ 19 ಪಂದ್ಯಗಳಲ್ಲಿ 145.30 ಸ್ಟ್ರೈಕ್ ರೇಟ್‌ನಲ್ಲಿ 417 ರನ್ ಗಳಿಸಿದ್ದಾರೆ. ಇದರಲ್ಲಿ 4 ಅರ್ಧ ಶತಕಗಳೂ ಸೇರಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link