KKR ತೊರೆಯಲಿದ್ದಾರೆ ರಿಂಕು ಸಿಂಗ್‌..! ʻಈʼ ತಂಡದ ಪರ ಆಡುವ ಬಯಕೆ ಹೊರಹಾಕಿದ ಸ್ಟಾರ್‌ ಬ್ಯಾಟ್ಸ್‌ಮೆನ್‌

Mon, 19 Aug 2024-12:19 pm,

ಐಪಿಎಲ್‌ 2025 ನ ಮೆಗಾ ಹರಾಜು ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಇದಕ್ಕೂ ಮುನ್ನವೇ ಯಾವ ಆಟಗಾರ ಯಾವ ತಂಡ ಸೇರಲಿದ್ದಾರೆ ಎನ್ನು ಚರ್ಚೆಗಳು ಶುರುವಾಗಿದ್ದು, ಈ ಭಾರಿಯ ಐಪಿಎಲ್‌ನಲ್ಲಿ ಭಾರಿ ಬದಲಾವಣೆಗಳನ್ನು ಕಾಣುವುದು ಖಚಿತ ಎಂದೆ ಹೇಳಬಹುದು.

ಟೀಂ ಇಂಡಿಯಾದ ಸ್ಟಾರ್‌ ಆಟಗಾರ ರಿಂಕು ಸಿಂಗ್‌ ಈ ಮುಂಚೆ KKR ತಂಡದ ಪರ ಆಡುತ್ತಿದ್ದರು. ಆದರೆ ಇದೀಗ ರಿಂಕು ಸಿಂಗ್‌ ಬೇರೆ ತಂಡ ಸೇರು ಬಯಕೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.  

ರಿಂಕು ಸಿಂಗ್‌ ತಮ್ಮ ಸ್ಪಟಕ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿರುವುದು ಗೊತ್ತೇ ಇದೆ. ಇದೀಗ ಇಂತಹ ಆಟಗಾರ ಕೆಕೆಆರ್‌ ತಂಡವನ್ನು ತೊರೆಯಲಿದ್ದಾರೆ ಎನ್ನು ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.  

ಸದ್ಯ ಐಪಿಎಲ್‌ ಸೀಸನ್‌ ಸಮೀಪಿಸುತ್ತಿದೆ. ಕೆಕೆಆರ್‌ ತಂಡ ರಿಂಕು ಸಿಂಗ್‌ ಅವರನ್ನು ಕೈ ಬಿಡಲಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದ್ದು. ಇದರ ಬೆನ್ನಲ್ಲೆ ರಿಂಕು ಸಿಂಗ್‌ ಈ ವದಂತಿಗಲಿಗೆ ಪ್ರತಿಕ್ರಿಯೆ ನೀಡಿದ್ದಾರೆ.  

ಸಂದರ್ಶನವೊಂದರಲ್ಲಿ ಮಾತನಾಡಿದ ರಿಂಕು ಸಿಂಗ್‌ ಕೆಕೆಆರ್‌ ತಂಡ ತಮ್ಮನ್ನು ಕೈ ಬಿಟ್ಟರೆ ನಾನು ಬೇರೆ ತಂಡದಲ್ಲಿ ಆಡಲು ಬಯಸುತ್ತೇನೆ ಎಂದು ತಮ್ಮ ಬಯಕೆಯನ್ನು ವ್ಯಕ್ತ ಪಡೆಸಿದ್ದಾರೆ.  

ಈ ಕುರಿತು ಮಾತನಾಡಿರುವ ರಿಂಕು ಸಿಂಗ್‌ ತಮ್ಮ ಕನಸಿನ ತಂಡ ಯಾವುದು, ತಾವು ಯಾವ ತಂಡದಲ್ಲಿ ಆಡಲು ಬಯಸುತ್ತಾರೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ.  

2017ರಲ್ಲಿ ಪಾಂಜಾಬ್‌ ಕಿಂಗ್ಸ್‌ ತಂಡದ ಮೂಲಕ ಐಪಿಎಲ್‌ಗೆ ಎಂಟಿ ಕೊಟ್ಟ ಅವರನ್ನು 2018ರಲ್ಲಿ ಕೆಕೆಆರ್‌ ತಂಡ ಖರೀದಿಸಿತ್ತು.  

ಸ್ಪೋರ್ಟ್ಸ್ ಟಾಕ್‌ಗೆ ನೀಡಿದ ಸಂದರ್ಶನದಲ್ಲಿ, ರಿಂಕು ಅವರು ಹರಾಜಿನಲ್ಲಿ ಲಭ್ಯವಿದ್ದರೆ RCB ಪರ ಆಡಲು ಬಯಸುವುದಾಗಿ ಹೇಳಿದ್ದಾರೆ.  

"ನನ್ನನ್ನು ಕೆಕೆಆರ್ ಬಿಡುಗಡೆ ಮಾಡಿದರೆ, ನಾನು ಆರ್‌ಸಿಬಿಗಾಗಿ ಆಡಲು ಇಷ್ಟಪಡುತ್ತೇನೆ ಏಕೆಂದರೆ ವಿರಾಟ್ ಕೊಹ್ಲಿ ಅದರ ಭಾಗವಾಗಿದ್ದಾರೆ" ಎಂದು ರಿಂಕು ಸಿಂಗ್‌ ಹೇಳಿದ್ದಾರೆ.   

ಈ ಹೇಳಿಕೆ ಅಭಿಮಾನಿಗಳಲ್ಲಿ ಹುಮ್ಮಸ್ಸು ಹುಟ್ಟಿಸಿದ್ದು, ತಂಡದ ಮಾಲೀಕರು ಕೂಡ ಇವರ ಹೇಳಿಕೆ ಮೇಲೆ ಕಣ್ಣಿಟ್ಟಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link