IPL Auction 2022: ಐಪಿಎಲ್ ಹರಾಜಿನಲ್ಲಿ ಈ ಭಾರತೀಯ ಆಟಗಾರರ ಮೇಲೆ ಹರಿಯಲಿದೆ ಹಣದ ಹೊಳೆ

Thu, 09 Dec 2021-5:36 pm,

ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಈ ಹರಾಜಿನ ಅತ್ಯಂತ ದುಬಾರಿ ಆಟಗಾರರಾಗಿ ಹೊರಹೊಮ್ಮಬಹುದು.  ಲಕ್ನೋ ತಂಡವು ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಮಾಡುವ ಸಾಧ್ಯತೆ ಇದೆ. ಐಪಿಎಲ್ 2022 ಮೆಗಾ ಹರಾಜಿನಲ್ಲಿ  ಅಹಮದಾಬಾದ್ ಮತ್ತು ಲಕ್ನೋ ಎರಡು ಹೊಸ ತಂಡಗಳು  ಪದಾರ್ಪಣೆ ಮಾಡಲಿವೆ. ಎರಡೂ ತಂಡಗಳು ತಮ್ಮ ತಮ್ಮ ತಂಡಗಳಿಗೆ ನಾಯಕನನ್ನು ಹುಡುಕುತ್ತಿವೆ. (ಫೋಟೋ ಮೂಲ- ಟ್ವಿಟರ್)

ದೆಹಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ದೆಹಲಿ ತಂಡ ರಿಲೀಸ್ ಮಾಡಿದೆ. ಮಾಧ್ಯಮಗಳ ವರದಿಯ ಪ್ರಕಾರ, ಮುಂಬೈ ಇಂಡಿಯನ್ಸ್ ಕಣ್ಣು ಅಯ್ಯರ್ ಮೇಲಿದೆ. ಅಯ್ಯರ್ ಮುಂಬೈ ಮೂಲದವರು. ಈ ಹಿನ್ನೆಲೆಯಲ್ಲಿ ಈ ಆಟಗಾರನನ್ನು ಮ ತಂಡಕ್ಕೆ ಸೇರಿಸಲು ಮುಂಬೈ ಇಂಡಿಯನ್ಸ್ ಕೋಟ್ಯಂತರ ರೂಪಾಯಿ ಖರ್ಚು ಮಾಡಬಹುದು. (ಫೋಟೋ ಮೂಲ- ಟ್ವಿಟರ್)

ಟೀಂ ಇಂಡಿಯಾ ಪರ ಆಡಿದ್ದ ಶಿಖರ್ ಧವನ್ ಕಳೆದ ಋತುವಿನವರೆಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. ಅವರು ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ಇದಾದ ಬಳಿಕವೂ ಡೆಲ್ಲಿ ತಂಡ ಅವರನ್ನು ಉಳಿಸಿಕೊಳ್ಳಲಿಲ್ಲ. ಧವನ್ ಅವರು ಹೈದರಾಬಾದ್ ತಂಡದ ನಾಯಕರೂ ಆಗಿದ್ದಾರೆ.  ಶಿಖರ್ ಧವನ್ ಅವರನ್ನು ಖರೀದಿಸಲು ಹಲವು ತಂಡಗಳ ನಡುವೆ ಪೈಪೋಟಿ ಏರ್ಪಡಲಿದೆ. (ಫೋಟೋ ಮೂಲ- ಟ್ವಿಟರ್)

ತಮ್ಮ ಬಲಿಷ್ಠ ಬ್ಯಾಟಿಂಗ್ ಮೂಲಕ ಮುಂಬೈ ಇಂಡಿಯನ್ಸ್ ಗೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿರುವ ಹಾರ್ದಿಕ್ ಪಾಂಡ್ಯ ಮೇಲೆ ಹಲವು ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಹಾರ್ದಿಕ್ ಮುಂಬೈ ಪರ ಐಪಿಎಲ್ ಆಡುತ್ತಿದ್ದಾರೆ. ಆದರೆ ಈ ಬಾರಿ ತಂಡ ಅವರನ್ನು ತಂಡ ಬಿಡುಗಡೆ ಮಾಡಿದೆ. (ಫೋಟೋ ಮೂಲ- ಟ್ವಿಟರ್)

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಯುಜುವೇಂದ್ರ ಚಹಾಲ್ ಅವರನ್ನು ಉಳಿಸಿಕೊಂಡಿಲ್ಲ. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ (15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ) ಮತ್ತು ಮೊಹಮ್ಮದ್ ಸಿರಾಜ್ (7 ಕೋಟಿ) ಉಳಿಸಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಹಲವು ತಂಡಗಳ ಕಣ್ಣು ಚಹಾಲ್ ಮೇಲೆಯೇ ಇರಲಿದೆ. (ಫೋಟೋ ಮೂಲ- ಟ್ವಿಟರ್)

ಹಲವು ಫ್ರಾಂಚೈಸಿಗಳು ಮುಂಬೈ ಇಂಡಿಯನ್ಸ್‌ಗಾಗಿ ಆಡುತ್ತಿರುವ ರಾಹುಲ್ ಚಹಾರ್‌ನ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಎರಡು ಸೀಸನ್‌ಗಳಿಂದ ರಾಹುಲ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. (ಫೋಟೋ ಮೂಲ- ಟ್ವಿಟರ್)

ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತಿರುವ ದೀಪಕ್ ಚಹಾರ್ ಕೂಡ ಈ ಹರಾಜಿನಲ್ಲಿ ಗಮನಾರ್ಹ ಮೊತ್ತವನ್ನು ಪಡೆಯಬಹುದು. (ಫೋಟೋ ಮೂಲ- ಟ್ವಿಟರ್)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link