IPL : ಚೆನ್ನೈ ಬೀಚ್ ನಲ್ಲಿ ಐಪಿಎಲ್ ಟ್ರೋಫಿ ಜೊತೆ ಪೋಸ್ ನೀಡಿದ ಶ್ರೇಯಸ್ ಅಯ್ಯರ್ ಹಾಗೂ ಪ್ಯಾಟ್ ಕಮ್ಮಿನ್ಸ್!!

Sun, 26 May 2024-12:35 pm,

ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ಹೈದರಬಾದ್ ತಂಡದ ನಾಯಕ  ಶ್ರೇಯಸ್ ಅಯ್ಯರ್ ಮತ್ತು ಪ್ಯಾಟ್ ಕಮ್ಮಿನ್ಸ್ ಚೆನ್ನೈ ಬೀಚ್ ನಲ್ಲಿ ಐಪಿಎಲ್ ಟ್ರೋಫಿಯೊಂದಿಗೆ ಪೋಸ್ ನೀಡಿರುವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು,  ಆಟೋಗಳಲ್ಲಿ ಪ್ರಯಾಣಿಸುವಾಗ ಶ್ರೇಯಸ್ ಅಯ್ಯರ್ ಮತ್ತು ಪ್ಯಾಟ್ ಕಮ್ಮಿನ್ಸ್ ತಮಾಷೆ ಮಾಡಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಅಂತಿಮ ಹಣಾಹಣಿ ಸಮೀಪಿಸುತ್ತಿದ್ದಂತೆ, ನಿರೀಕ್ಷೆ ಮುಗಿಲು ಮುಟ್ಟಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ತಂಡದ ನಾಯಕರಾದ ಶ್ರೇಯಸ್ ಅಯ್ಯರ್ ಮತ್ತು ಪ್ಯಾಟ್ ಕಮ್ಮಿನ್ಸ್ ಚೆನ್ನೈನ ಬೀಚ್‌ಗೆ ಭೇಟಿ ನೀಡುವ ಮೂಲಕ ಉತ್ಸಾಹವನ್ನು ಹೆಚ್ಚಿಸಿದರು. ಇಬ್ಬರೂ ಆಟೋಗಳಲ್ಲಿ ಪ್ರಯಾಣಿಸುವಾಗ ತಮಾಷೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಮತ್ತು ಐಪಿಎಲ್ ಟ್ರೋಫಿಯೊಂದಿಗೆ ಪೋಸ್ ನೀಡಿದ್ದಾರೆ. 

ಐಪಿಎಲ್‌ನ ಅಧಿಕೃತ ಹ್ಯಾಂಡಲ್‌ನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಶ್ರೇಯಸ್ ಅಯ್ಯರ್ ಮತ್ತು ಪ್ಯಾಟ್ ಕಮ್ಮಿನ್ಸ್ ಆಟೋ ಒಳಗೆ ಹೋಗುವುದನ್ನು ತೋರಿಸುತ್ತದೆ

ಇಂದು ಮೇ 26 ರಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದು 1.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ್ದು ಮತ್ತು ಸಂಖ್ಯೆಗಳು ಹೆಚ್ಚುತ್ತಲೇಯಿವೆ. ಪೋಸ್ಟ್ ಹಲವಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಸಹ ಪಡೆದುಕೊಂಡಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link