Indian Railways: ಪ್ರಯಾಣಿಕರು ಈಗ ಸ್ಲೀಪರ್ ಕೋಚ್‌ಗೆ ಟಿಕೆಟ್ ಬುಕ್ ಮಾಡಿ ಎಸಿ ಕೋಚ್‌ನಲ್ಲಿ ಪ್ರಯಾಣಿಸಬಹುದು!
ರೈಲ್ವೆ ಪ್ರಯಾಣಿಕರು ಈಗ ಸ್ಲೀಪರ್ ಕೋಚ್ ಟಿಕೆಟ್ ಬುಕ್ ಮಾಡಿ ಎಸಿ ಕೋಚ್‌ನಲ್ಲಿ ಪ್ರಯಾಣಿಸಬಹುದು. ಇದಕ್ಕಾಗಿ, ರೈಲ್ವೇಯ ಆಟೋ ಅಪ್ಗ್ರೇಡ್ ಸ್ಕೀಮ್/ ಸ್ವಯಂ ಉನ್ನತೀಕರಣ ಯೋಜನೆ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ವಾಸ್ತವವಾಗಿ, ಭಾರತೀಯ ರೈಲ್ವೆ ಸ್ವಂತ ಲಾಭಕ್ಕಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ರೈಲಿನಲ್ಲಿ ಯಾವುದೇ ಸೀಟು ಖಾಲಿ ಉಳಿಯದಂತೆ ನೋಡಿಕೊಳ್ಳಲು ಈ ಸೌಲಭ್ಯವನ್ನು ಆರಂಭಿಸಲಾಗಿದೆ. ಆದರೂ, ಇದು ಗ್ರಾಹಕರಿಗೂ ಕೂಡ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಸಾಮಾನ್ಯವಾಗಿ ಬಹುತೇಕ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್ ಹೊರತುಪಡಿಸಿ, ಎಸಿ ಥರ್ಡ್ ಕ್ಲಾಸ್ ಕೋಚ್ ಬಹುತೇಕ ಭರ್ತಿಯಾಗುತ್ತದೆ. ಆದರೆ, ಎಸಿ ಫಸ್ಟ್ ಕ್ಲಾಸ್ ಮತ್ತು ಎಸಿ ಸೆಕೆಂಡ್ ಕ್ಲಾಸ್‌ನಲ್ಲಿ ಸೀಟುಗಳು ಭರ್ತಿಯಾಗುವುದಿಲ್ಲ. ಈ ಬರ್ತ್‌ಗಳು ದುಬಾರಿಯಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಆದರೆ, ಈ ಕೋಚ್‌ಗಳು ಭರ್ತಿಯಾಗದ ಕಾರಣ ರೈಲ್ವೆ ಭಾರೀ ನಷ್ಟವನ್ನು ಅನುಭವಿಸಿದೆ.
ಭಾರತೀಯ ರೈಲ್ವೆ ಈ ನಷ್ಟವನ್ನು ತಪ್ಪಿಸಲು ರೈಲ್ವೆ ಆಟೋ ಅಪ್‌ಗ್ರೇಡ್ ಯೋಜನೆ ಎಂಬ ಯೋಸ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಸ್ಲೀಪರ್ ಕೋಚ್ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರು ಮೇಲ್ವರ್ಗದ ಯಾವುದೇ ಬರ್ತ್ (ಎಸಿ 1, ಎಸಿ 2, ಎಸಿ 3) ಗೆ ಟಿಕೆಟ್‌ಗಳನ್ನು ನವೀಕರಿಸಬಹುದಾಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ರೈಲ್ವೆ ಟಿಕೆಟ್ ಬುಕಿಂಗ್ ಸಮಯದಲ್ಲಿ, ನಿಮ್ಮ ಟಿಕೆಟ್‌ನಲ್ಲಿ ಆಟೋ ಅಪ್‌ಗ್ರೇಡ್ ಪಡೆಯಲು ನೀವು ಬಯಸುತ್ತೀರಾ ಎಂದು ರೈಲ್ವೆ ಕೇಳುತ್ತದೆ. ನೀವು ಹೌದು ಎಂಬ ಆಯ್ಕೆಯನ್ನು ಆರಿಸಿದ್ದರೆ ಮಾತ್ರ ನಿಮ್ಮ ಟಿಕೆಟ್ ಅನ್ನು ಅಪ್‌ಗ್ರೇಡ್ ಮಾಡಲಾಗುತ್ತದೆ. ಇಲ್ಲದಿದ್ದರೆ, ಇದರ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.
ರೈಲಿನ ಫಸ್ಟ್ ಎಸಿಯಲ್ಲಿ 6 ಸೀಟುಗಳು ಮತ್ತು ಸೆಕೆಂಡ್ ಎಸಿಯಲ್ಲಿ 3 ಸೀಟುಗಳು ಖಾಲಿ ಇರುತ್ತವೆ ಎಂದು ಭಾವಿಶೋಣ. ಕೆಲವು ಸೆಕೆಂಡ್ ಎಸಿ ಪ್ರಯಾಣಿಕರ ಟಿಕೆಟ್‌ಗಳನ್ನು ಅಪ್‌ಗ್ರೇಡ್ ಮಾಡಲಾಗುತ್ತದೆ ಮತ್ತು ಅವುಗಳನ್ನು ಫಸ್ಟ್ ಎಸಿಗೆ ಹಾಕಲಾಗುತ್ತದೆ. ಥರ್ಡ್ ಎಸಿಯ ಪ್ರಯಾಣಿಕರನ್ನು ಅಪ್‌ಗ್ರೇಡ್ ಮಾಡುವ ಮೂಲಕ ಅವರಿಗೆ ಸೆಕೆಂಡ್ ಎಸಿಯಲ್ಲಿ ಟಿಕೆಟ್ ನೀಡಿದರೆ, ಸ್ಲೀಪರ್ ಕೋಚ್ ಟಿಕೆಟ್ ಬುಕಿಂಗ್ ಮಾಡಿ ವೇಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರು ಥರ್ಡ್ ಎಸಿಯಲ್ಲಿ ಸೀಟು ಪಡೆಯುತ್ತಾರೆ.