Coronavirus ರೋಗಿಗಳಿಗೆ 10 ಸೆಕೆಂಡುಗಳ ಕಾಲ ಉಸಿರಾಟ ತಡೆಹಿಡಿಯಲು ಸಾಧ್ಯವಿಲ್ಲವೇ? WHO ಹೇಳಿದ್ದೇನು?
ಒಬ್ಬ ವ್ಯಕ್ತಿಯು 10 ಸೆಕೆಂಡುಗಳ ಕಾಲ ಉಸಿರಾಟವನ್ನು ತಡೆ ಹಿಡಿದರೆ ಅವನಿಗೆ ಕರೋನಾ ವೈರಸ್ ಕಾಯಿಲೆ ಬಂದಿಲ್ಲ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ವೇಗವಾಗಿ ಹರಡುತ್ತಿದೆ.
ಕರೋನವನ್ನು 10 ಸೆಕೆಂಡುಗಳಲ್ಲಿ ಪರೀಕ್ಷಿಸಲಾಗುತ್ತಿದೆ ಎಂಬ ವದಂತಿ ಬಗ್ಗೆ ತಿಳಿಸಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಕರೋನದ ಸಾಮಾನ್ಯ ಲಕ್ಷಣಗಳು ಒಣ ಕೆಮ್ಮು, ಜ್ವರ ಮತ್ತು ಆಯಾಸ ಎಂದು ಹೇಳಿದರು. ಕರೋನಾದಿಂದ ಬಳಲುತ್ತಿರುವ ಕೆಲವು ಜನರಲ್ಲಿಯೂ ನ್ಯುಮೋನಿಯಾದ ಲಕ್ಷಣಗಳು ಕಂಡುಬರುತ್ತವೆ. ಒಬ್ಬ ವ್ಯಕ್ತಿಗೆ ಕರೋನಾ ವೈರಸ್ ಇದೆಯೋ? ಇಲ್ಲವೋ? ಎಂಬುದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗಳಿಂದ ಮಾತ್ರ ಕಂಡುಹಿಡಿಯಬಹುದು. 10 ಸೆಕೆಂಡುಗಳ ಕಾಲ ಉಸಿರಾಟವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಕರೋನಾವನ್ನು ಪರೀಕ್ಷಿಸಲಾಗುತ್ತದೆ ಎಂಬ ಅಂಶವು ಸುಳ್ಳು.
ನಿಮ್ಮ ಉಸಿರಾಟವನ್ನು 10 ಸೆಕೆಂಡುಗಳ ಕಾಲ ತಡೆಹಿಡಿದ ನಂತರ ನೀವು ಕೆಮ್ಮದಿದ್ದರೆ, ನೀವು ಕರೋನಾದಿಂದ ಸೋಂಕಿಗೆ ಒಳಗಾಗುವುದಿಲ್ಲ ಎಂದು ಇದರ ಅರ್ಥವಲ್ಲ ಎಂದು WHO ಹೇಳಿದೆ.
ಕರೋನಾ ವೈರಸ್ ಗಾಳಿಯ ಮೂಲಕ ಹರಡುವುದಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದನ್ನು WHO ಖಚಿತಪಡಿಸಿದೆ.
ವ್ಯಕ್ತಿಯ ಮೂಗು ಮತ್ತು ಬಾಯಿಯಿಂದ ಸೀನುವಾಗ ಹೊರಬರುವ ಹನಿಗಳು 1 ಮೀಟರ್ ವರೆಗೆ ನುಸುಳಬಹುದು, ಆದ್ದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮುಖ್ಯ. ಹಾಗಾಗಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ.