ರುದ್ರಾಕ್ಷಿಯನ್ನು ಕೈಯಲ್ಲಿ ಧರಿಸುವುದು ಒಳ್ಳೆಯದೇ?
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ರುದ್ರಾಕ್ಷಿ ಶಿವನಿಗೆ ಸಂಬಂಧಿಸಿದೆ. ಒಂದು ಹಣ್ಣಿನ ಬೀಜವಾಗಿರುವ ರುದ್ರಾಕ್ಷಿಯೂ ರುದ್ರ ಮತ್ತು ಅಕ್ಷದಿಂದ ರೂಪುಗೊಂಡ ಸಂಸ್ಕೃತದ ಪದವಾಗಿದೆ.
ಸಾಕ್ಷಾತ್ ಶಿವನ ಸ್ವರೂಪ ಎಂತಲೇ ನಂಬಲಾಗಿರುವ ರುದ್ರಾಕ್ಷಿಯನ್ನು ಜಪಮಾಲೆಯಾಗಿ ಬಳಸಲಾಗುತ್ತದೆ. ಮಾತ್ರವಲ್ಲ, ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಇದನ್ನು ಧರಿಸಲಾಗುತ್ತದೆ.
ಕೆಲವರು ರುದ್ರಾಕ್ಷಿಯನ್ನು ಕೊರಳಿಗೆ ಧರಿಸಿದರೆ, ಇನ್ನೂ ಕೆಲವರು ಇದನ್ನು ಕಂಕಣವಾಗಿ ಕೈಯಲ್ಲಿ ಧರಿಸುತ್ತಾರೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ರುದ್ರಾಕ್ಷಿಯನ್ನು ಕೈಯಲ್ಲಿ ಧರಿಸುವುದರಿಂದಲೂ ಹಲವು ಪ್ರಯೋಜನಗಳಿವೆ. ಅವುಗಳೆಂದರೆ...
ರುದ್ರಾಕ್ಷಿ ಧಾರಣೆಯಿಂದ ಕಣ್ಣುಗಳು, ಮೂಲೆಗ್ಲೌ, ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ರಕ್ಷಣೆ ದೊರೆಯುತ್ತದೆ ಎಂಬುದು ನಂಬಿಕೆ.
ರುದ್ರಾಕ್ಷಿಯನ್ನು ಕಂಕಣವಾಗಿ ಧರಿಸುವುದರಿಂದ ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ರುದ್ರಾಕ್ಷಿಯನ್ನು ಕೈಯಲ್ಲಿ ಧರಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಅದೃಷ್ಟವೇ ಬದಲಾಗುತ್ತದೆ ಎಂಬ ನಂಬಿಕೆಯಿದೆ.
ರುದ್ರಾಕ್ಷಿಯನ್ನು ಕಂಕಣವಾಗಿ ಧರಿಸುವುದರಿಂದ ಜೀವನದಲ್ಲಿ ಯಶಸ್ಸಿನ ಹಾದಿ ತೆರೆಯುತ್ತದೆ ಎಂದು ನಂಬಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.