ಅಪ್ಪಿ ತಪ್ಪಿಯೂ ನಿಮ್ಮ ಸಂಗಾತಿಗೆ ಈ ರೀತಿ `ಲಿಪ್ ಕಿಸ್` ಮಾಡಬೇಡಿ..! ಕಾಮಿಡಿ ಅಲ್ಲ ಬ್ರೋ ಇದು ನಿಜ..
ಪ್ರೀತಿ ಪರಿಭಾಷೆ ಕಿಸ್.. ಸಂಗಾತಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪದಗಳೇ ಇಲ್ಲವಾದಾಗ ಉದ್ಭವಿಸುವ "ಮುತ್ತು" ಒಂದು ಭಾವನೆ ರೂಪ.. ಅಂದಹಾಗೆ ಕಿಸ್ ನೀಡಲು ಕೆಲವೊಂದಿಷ್ಟು ನಿಯಮಗಳೂ ಇವೆ.. ಹಾಗಾಗಿ ಈ ಕೆಳಗೆ ನೀಡಿರುವ ಸಮಸ್ಯೆ ಹೊಂದಿರುವ ಜನರು ಅಪ್ಪಿ ತಪ್ಪಿಯೂ ಸಂಗಾತಿಗೆ ಮುತ್ತಿಕ್ಕ ಬೇಡಿ..
ನಿಮಗೆ ಬಾಯಿಯ ಸುತ್ತ ಅಥವಾ ಗಲ್ಲದ ಬಳಿ ಶೀತ ಹುಣ್ಣುಗಳಾಗಿದ್ದರೆ ಸಂಗಾತಿನ್ನು ಚುಂಬಿಸಿದರೆ ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ (HSV-1) ಸೋಂಕಿನ ಅಪಾಯ ಹೆಚ್ಚಾಗುತ್ತದೆ.
ಈ ಸೋಂಕಿಗೆ ಒಳಗಾದವರ ತುಟಿಗಳ ಸುತ್ತಲೂ ಕಿವು ತುಂಬಿದ ಶೀತ ಹುಣ್ಣುಗಳಾಗಿರುತ್ತವೆ. ಅವು ಬಿಳಿ ಗುಳ್ಳೆಗಳಂತೆ ಕಾಣುತ್ತವೆ.
ಈ ಹುಣ್ಣುಗಳು ಸಾಮಾನ್ಯವಾಗಿ ಎರಡು ಮೂರು ವಾರಗಳಲ್ಲಿ ವಾಸಿಯಾಗುತ್ತವೆ. ಗಾಯಗಳ ಜೊತೆಗೆ ಸೋಂಕು ಮಾಯವಾಗುತ್ತದೆ.
ಆದರೂ, HSV-1 ನಿಂದ ಉಂಟಾಗುವ ಈ ಹುಣ್ಣುಗಳು ಒಬ್ಬರಿಂದ ಒಬ್ಬರಿಗೆ ಬಹುಬೇಗನೇ ಹರಡುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ.
ಈ ರೋಗದ ವೈರಸ್ ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ವಿಶೇಷವಾಗಿ ಚುಂಬಿಸುವಾಗ ಹರಡುತ್ತದೆ.
ಈ ಶೀತ ಹುಣ್ಣಿನ ದ್ರವ ವೈರಸ್‌ನಿಂದ ತುಂಬಿರುತ್ತದೆ. ಆಗ ಆ ವ್ಯಕ್ತಿ ಆರೋಗ್ಯವಂತ ಸಂಗಾತಿಯನ್ನು ಚುಂಬಿಸಿದಾಗ, ವೈರಸ್ ಹರಡುತ್ತದೆ.
ಸೋಂಕಿತ ವ್ಯಕ್ತಿಯ ಬಾಯಿಯಲ್ಲಿರುವ ಲಾಲಾರಸದ ಮೂಲಕವೂ ಈ ವೈರಸ್ ಸಂಗಾತಿಗೆ ಹರಡುತ್ತದೆ. ಚರ್ಮದ ಸಂಪರ್ಕದ ಮೂಲಕವೂ ಹರಡುವ ಅಪಾಯವಿದೆ..
ಈ ಹುಣ್ಣು ಒಡೆಯುದಾಗ ಹೊರಬರುವ ದ್ರವದಲ್ಲಿಯೂ ವೈರಸ್ ಇರುತ್ತದೆ.. ಅದಕ್ಕಾಗಿಯೇ ನೀವು ಒಂದೇ ಗಾಜು, ಟವೆಲ್ ಅಥವಾ ರೇಜರ್ ಬಳಸಬಾರದು.
ಈ ಹುಣ್ಣಿನಿಂದ ಬಳಲುತ್ತಿರುವ ವ್ಯಕ್ತಿಯನ್ನು ಚುಂಬಿಸಬೇಡಿ. ಹತ್ತಿರವಾಗುವುದೂ ಒಳ್ಳೆಯದಲ್ಲ. ಲಿಪ್ ಬಾಮ್, ಗ್ಲಾಸ್, ಟವೆಲ್ ಅಥವಾ ರೇಜರ್‌ನಂತಹ ಅವರ ವಸ್ತುಗಳನ್ನು ಮುಟ್ಟಬೇಡಿ.. ನಿಮ್ಮ ವಸ್ತುಗಳನ್ನೂ ಕೊಡಬೇಡಿ..
ಮುಖ್ಯವಾಗಿ ಅವರ ಮುಖವನ್ನು ಮುಟ್ಟಿದ ನಂತರ ಕೈ ತೊಳೆಯುವುದು ವೈರಸ್ ಅನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಸೋಂಕು ಇರುವವರು ವೈದ್ಯರ ಸಲಹೆಯಂತೆ ಆ್ಯಂಟಿ ವೈರಸ್ ಔಷಧಗಳನ್ನು ಬಳಸಿ.. ಹುಣ್ಣುಗಳ ತೀವ್ರತೆಯನ್ನು ಕಡಿಮೆ ಮಾಡಲು ಮತ್ತು ಅವು ಮರುಕಳಿಸದಂತೆ ತಡೆಯಬಹುದು.