Silver Foil in Sweets: ಸಿಹಿತಿಂಡಿಗಳ ಮೇಲಿರುವ ಬೆಳ್ಳಿಯ ಲೇಪನ ಮಾಂಸಹಾರಿಯೇ?
ಸಾಮಾನ್ಯವಾಗಿ ಬೇಕರಿಗಳಿಂದ ಸಿಹಿತಿಂಡಿಗಳನ್ನು ಖರೀದಿಸುವಾಗ ಗಮನಿಸಿರುತ್ತೀರಿ. ಕೆಲವೊಂದು ತಿಂಡಿಗಳ ಮೇಲೆ ಸುಂದರವಾದ ಬೆಳ್ಳಿಯ ಲೇಪನವನ್ನು ಮಾಡಿರುತ್ತಾರೆ. ಆದರೆ ಕೆಲವರು ಇದನ್ನು ಮಾಂಸದಿಂದ ತಯಾರಿಸಲಾಗುತ್ತದೆ ಎಂದು ಹೇಳುತ್ತಾರೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂದು ತಿಳಿದುಕೊಳ್ಳೋಣ.
ಬೆಳ್ಳಿ ಲೇಪನವನ್ನು ಜೈವಿಕ ಸಕ್ರಿಯವಲ್ಲದ ಬೆಳ್ಳಿಯ ತುಂಡುಗಳನ್ನು ಹಾಕುವ ಮೂಲಕ ತಯಾರಿಸಲಾಗುತ್ತದೆ. ಬಳಿಕ ಅದನ್ನು ಪೇಪರ್’ಗಳ ನಡುವೆ ಇರಿಸಲಾಗುತ್ತದೆ.
ಈ ಬೆಳ್ಳಿಯ ಲೇಪನವು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಆರೋಗ್ಯಕ್ಕೆ ಉತ್ತಮವಾಗಿದ್ದು ಶುದ್ಧ, ತಿನ್ನಬಹುದಾದ ವಸ್ತುವಾಗಿದೆ.
ಈ ಬೆಳ್ಳಿಯ ಲೇಪನ ಶುದ್ಧವೇ ಎಂದು ಪರಿಶೀಲಿಸಲು, ನಿಮ್ಮ ಬೆರಳುಗಳಿಂದ ಉಜ್ಜಿಲು ಪ್ರಯತ್ನಿಸಿ. ಆಗ ತಕ್ಷಣ ತುಂಡುಗಳಾಗಿ ಒಡೆದರೆ, ಅದು ಶುದ್ಧ ಎಂಬರ್ಥವನ್ನು ನೀಡುತ್ತದೆ. ತುಂಡಾಗದಿದ್ದರೆ ಅಲ್ಯೂಮಿನಿಯಂ ಅನ್ನು ಅದರಲ್ಲಿ ಬೆರೆಸಲಾಗಿದೆ ಎಂಬರ್ಥವನ್ನು ನೀಡುತ್ತದೆ.
ಬೆಳ್ಳಿಯ ಲೇಪನದಲ್ಲಿ ಕಲಬೆರಕೆ ಇದೆಯೇ ಇಲ್ಲವೇ ಎಂದು ಪರೀಕ್ಷಿಸಲು ಅದರ ಸಣ್ಣ ತುಂಡಿಗೆ ಬೆಂಕಿ ಹಚ್ಚಿ. ಅದು ಸಣ್ಣ ಚೆಂಡಾಗಿ ಮಾರ್ಪಟ್ಟರೆ ಕಲಬೆರಕೆ ಇಲ್ಲ ಎಂದು ಅರ್ಥ.
2016 ರಲ್ಲಿ, ಎಫ್ ಎಸ್ ಎಸ್ ಎ ಐ ಪ್ರಾಣಿ ಬಳಕೆಯನ್ನು ನಿಷೇಧಿಸಿತು. ಅಂದಿನಿಂದ ಬೆಳ್ಳಿಯ ಲೇಪನದಲ್ಲಿ ನಾನ್-ವೆಜ್ ಬಳಸಲಾಗುತ್ತಿಲ್ಲ. ಈಗ ನೀವು ಯಾವುದೇ ಸಂಶಯವಿಲ್ಲದೆ ಸಿಹಿತಿಂಡಿಗಳನ್ನು ಸೇವಿಸಬಹುದು.