ಲೆಹಂಗಾ ತೊಟ್ಟು ನವಿಲಂತೆ ನಲಿದ ಸುಂದರಿ..!ಅಣ್ಣನ ಮದುವೆಯಲ್ಲಿ ಕಣ್ಮನ ಸೆಳೆದಳು ಕೋಟ್ಯಾಧಿಪತಿ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಂಗೀತ ಮತ್ತು ಹಲ್ದಿ ಉತ್ಸವಗಳಲ್ಲಿ ಭಾಗವಹಿಸುವ ಮೂಲಕ ಸಂಭ್ರಮದ ಮೆರುಗು ಹೆಚ್ಚಿಸುತ್ತಿದ್ದಾರೆ.
ಅಂಬಾನಿ ಪುತ್ರಿ ಇಶಾ ಅಂಬಾನಿ ಅನಂತ್ - ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ತಮ್ಮ ವಿಶಿಷ್ಟವಾದ ಉಡುಪಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಳೆದ ರಾತ್ರಿ, ಅನಂತ್ - ರಾಧಿಕಾ ಅವರ ಹಲ್ದಿ ಸಮಾರಂಭದಲ್ಲಿ ಅವರು ಕಸ್ಟಮ್ ಹಾರ್ಟ್ ಕಸೂತಿ ಲೆಹೆಂಗಾವನ್ನು ಧರಿಸಿದ್ದರು.
ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಕಸೂತಿಯ ತೋಳಿಲ್ಲದ ಜಾಕೆಟ್, ವರ್ಣರಂಜಿತ ಟಸೆಲ್ ಅಲಂಕಾರಗಳು, ಹೃದಯ ಆಕಾರದ ಕಸೂತಿ ವಿನ್ಯಾಸಗಳೊಂದಿಗೆ ಇಶಾ ಲೆಹೆಂಗಾವನ್ನು ಧರಿಸಿದ್ದರು.
ಲೆಹಂಗದ ಜೊತೆಗೆ ಇಶಾ ಅಲಂಕರಿಸಿದ ಬಳೆಗಳು, ಕಿವಿಯೋಲೆಗಳು ಮತ್ತು ಉಂಗುರವನ್ನು ಧರಿಸಿದ್ದರು. ಇಶಾ ಅವರ ಬಣ್ಣಬಣ್ಣದ ಉಡುಗೆ ಎಲ್ಲರನ್ನು ಬೆರಗುಗೊಳಿಸಿತು.
ಇಶಾ ಹಲ್ದಿ ಆಚರಣೆಗಳಿಗಾಗಿ ಕಸ್ಟಮೈಸ್ ಮಾಡಿದ ಲೆಹೆಂಗಾ ಸೆಟ್ ಅನ್ನು ಧರಿಸಿದ್ದರೆ, ಲೆಹೆಂಗಾ ಸೆಟ್‌ನ ಆವೃತ್ತಿಯು ತೋರಣಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇದನ್ನು ದಿಲ್ ರಂಗ್ ಜೀವಾ ಲೆಹೆಂಗಾ ಸೆಟ್ ಎಂದು ಕರೆಯಲಾಗುತ್ತದೆ. ಈ ಲೆಹೆಂಗಾ ಸೆಟ್ ಬೆಲೆ ರೂ. 1,35,000 ಎಂದು ವರದಿಯಾಗಿದೆ.