ಜಿಮ್‌ನಲ್ಲಿ ಪ್ರೀತಿ, 14 ವರ್ಷದ ಬಳಿಕ ಪತಿಗೆ ಡಿವೋರ್ಸ್..‌ 18 ವರ್ಷದವಳಿದ್ದಾಗಲೇ ಕಿರುಕಳಕ್ಕೆ ಬಲಿಯಾಗಿದ್ದರು ಈ ಖ್ಯಾತ ನಟಿ !

Fri, 20 Sep 2024-3:00 pm,

ಬಾಲಿವುಡ್ ನಟಿ ಇಶಾ ಕೊಪ್ಪಿಕರ್ ವೈಯಕ್ತಿಕ ಜೀವನ ಸಾಕಷ್ಟು ಸುದ್ದಿಯಾಗಿತ್ತು. ಜಿಮ್‌ನಲ್ಲಿ ಹುಟ್ಟಿದ ಪ್ರೀತಿ, 14 ವರ್ಷದ ಬಳಿಕ ಆದ ಡಿವೋರ್ಸ್‌ ಮತ್ತು ಕಾಸ್ಟಿಂಗ್‌ ಕೌಚ್‌ ವಿಚಾರಗಳು ಸಾಕಷ್ಟು ಸದ್ದು ಮಾಡಿವೆ.

ಇಶಾ ಕೊಪ್ಪಿಕರ್‌ ದಕ್ಷಿಣ ಭಾರತದ ಖ್ಯಾತ ನಟಿ. ಈಕೆ ಕನ್ನಡದಲ್ಲಿಯೂ ಸಿನಿಮಾ ಮಾಡಿದ್ದಾರೆ. ಇಶಾ ಮೊದಲ ಬಾರಿಗೆ ಟಿಮ್ಮಿ ನಾರಂಗ್‌ ಅವರನ್ನು ಜಿಮ್‌ನಲ್ಲಿ ಭೇಟಿಯಾದರು. 

ಟಿಮ್ಮಿ ನಾರಂಗ್‌ ಮೊದಲ ನೋಟದಲ್ಲೇ ಇಶಾ ಪ್ರೀತಿಯಲ್ಲಿ ಬಿದ್ದರು. ಮೊದಲ ಭೇಟಿಯಲ್ಲೇ ಇಬ್ಬರೂ ನಂಬರ್‌ ವಿನಿಮಯ ಮಾಡಿಕೊಂಡು ಫೋನ್‌ನಲ್ಲಿ ಮಾತನಾಡಲು ಆರಂಭಿಸಿದ್ದರು.

ಇಶಾ ಮತ್ತು ಟಿಮ್ಮಿ ನಾರಂಗ್‌ ಫೋನಿನಲ್ಲಿ ಮಾತನಾಡುತ್ತಲೇ ಒಳ್ಳೆಯ ಸ್ನೇಹಿತರಾದರು. ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 2009 ರಲ್ಲಿ ವಿವಾಹವಾದರು. ಮದುವೆಯ ನಂತರ ಚಿತ್ರರಂಗದಿಂದ ದೂರವಾದರು.

ಇಶಾ ಕೊಪ್ಪಿಕರ್‌ ಮತ್ತು ಟಿಮ್ಮಿ ನಾರಂಗ್‌ ದುವೆಯಾಗಿ 14 ವರ್ಷಗಳ ಬಳಿಕ ಡಿವೋರ್ಸ್‌ ಪಡೆದರು. ಆ ಬಳಿಕ ಇಶಾ ಕೊಪ್ಪಿಕರ್‌ ಮತ್ತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. 

ಇದಲ್ಲದೇ ಇಶಾ ಕೊಪ್ಪಿಕರ್‌ ಕಾಸ್ಟಿಂಗ್ ಕೌಚ್ ಬಗ್ಗೆಸಹ ಒಂದೊಮ್ಮೆ ಹೇಳಿಕೊಂಡಿದ್ದರು. ನಟಿ ಇಶಾ ಕೊಪ್ಪಿಕರ್ ಕಾಸ್ಟಿಂಗ್ ಕೌಚ್ ವಿಚಾರವನ್ನು ಬಹಿರಂಗಪಡಿಸಿದ್ದರು. 18 ರಿಂದ 23 ನೇ ವಯಸ್ಸಿನಲ್ಲಿ ಕಾಸ್ಟಿಂಗ್ ಕೌಚ್ ಅನುಭವಿಸಿರುವುದನ್ನು ಹೇಳಿದ್ದರು. 

ಇಶಾ ಕೊಪ್ಪಿಕರ್ 'ಫಿಜಾ' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಲ್ಲದೇ ಬಾಲಿವುಡ್ ನಲ್ಲಿ ಐಟಂ ಸಾಂಗ್ ಕೂಡ ಮಾಡಿದ್ದಾರೆ. 

ಒಮ್ಮೆ 18 ವರ್ಷದವಳಿದ್ದಾಗ ನಟರೊಬ್ಬರು ಕಾಸ್ಟಿಂಗ್ ಕೌಚ್‌ಗಾಗಿ ತನ್ನನ್ನು ಸಂಪರ್ಕಿಸಿದ್ದರು ಎಂದು ಇಶಾ ಪಾಡ್‌ಕಾಸ್ಟ್‌ ಒಂದರಲ್ಲಿ ಹೇಳಿದ್ದರು. ಕೆಲಸ ಪಡೆಯಲು ನಟರೊಂದಿಗೆ ಸ್ನೇಹದಿಂದ ಇರಬೇಕು ಎಂದಿದ್ದರಂತೆ. 

23ನೇ ವಯಸ್ಸಿನಲ್ಲಿ ಎರಡನೇ ಬಾರಿ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದೇನೆ ಎಂದು ಇಶಾ ಕೊಪ್ಪಿಕರ್ ಹೇಳಿದ್ದಾರೆ. ಎ-ಲಿಸ್ಟರ್ ನಟರೊಬ್ಬರು ತಮ್ಮನ್ನು ಏಕಾಂಗಿಯಾಗಿ ಭೇಟಿಯಾಗಲು ಕೇಳಿದ್ದರು. ಆಗ 23 ವರ್ಷದವಳಿದ್ದೆ ಎಂದು ನಟಿ ಹೇಳಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link