Bigg Boss First Contestant: ಈ ಬಾರಿ ʻಬಿಗ್ ಬಾಸ್‌ʼ ಮನೆ ಸೇರಲಿದ್ದಾರೆ ʻಸೂರ್ಯವಂಶʼ ಸಿನಿಮಾ ಖ್ಯಾತಿಯ ನಟಿ !?

Mon, 26 Aug 2024-5:36 pm,

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಇನ್ನೇನು ಕೆಲವೇ ವಾರಗಳಲ್ಲಿ ಆರಂಭವಾಗಲಿದೆ. ಈ ಬಾರಿ ಬಿಗ್‌ ಬಾಸ್‌ ಮನೆಗೆ ಖ್ಯಾತ ನಟಿಯೊಬ್ಬರು ಬರಬಹುದೆಂಬ ನಿರೀಕ್ಷೆ ಮೂಡಿದೆ. 

ಸೂರ್ಯವಂಶ ಸಿನಿಮಾದ ಮೂಲಕ ಖ್ಯಾತರಾದ ನಟಿ ಇಶಾ ಕೊಪ್ಪಿಕರ್‌ ಬಿಗ್‌ ಬಾಸ್‌  ಸ್ಪರ್ಧಿಯಾಗಬಹುದು ಎನ್ನಲಾಗುತ್ತಿದೆ. 

ಇಶಾ ಕೊಪ್ಪಿಕರ್ ಬಿಗ್ ಬಾಸ್‌ ಗೆ ಬರುತ್ತಿರುವುದು ಒಂದು ಹಂತಕ್ಕೆ ಸತ್ಯವೂ ಇರಬಹುದು ಎನ್ನಲಾಗುತ್ತಿದೆ. 

ಆದರೆ ಇಶಾ ಕೊಪ್ಪಿಕರ್ ಬರುತ್ತಿರುವುದು ಬಿಗ್ ಬಾಸ್‌ ಕನ್ನಡ ಸೀಸನ್ 11 ಗೆ ಅಲ್ಲ. 

ಬಿಗ್ ಬಾಸ್‌ ಹಿಂದಿ ಸೀಸನ್ 18 ಕ್ಕೆ ಸ್ಪರ್ಧಿಯಾಗಿ ಎಂಟ್ರಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಮೂಲತಃ ಮುಂಬೈನವರಾದ ಇಶಾ ಕೊಪ್ಪಿಕರ್ ದಕ್ಷಿಣ ಭಾರತದಲ್ಲಿ ಹೆಚ್ಚು ಫೇಮಸ್‌ ಆದವರು. 

ಸೂರ್ಯವಂಶ, ಹೂ ಅಂತಿಯಾ ಉಹೂ ಅಂತಿಯಾ, ಓ ನನ್ನ ನಲ್ಲೆ, ಕವಚ ಹೀಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಇಶಾ ಕೊಪ್ಪಿಕರ್ ನಟಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link