ಟೀಂ ಇಂಡಿಯಾ ಸ್ಟಾರ್ ಯುವ ಆಟಗಾರನ ಕೆರಿಯರ್ ಅಂತ್ಯ.. ಬಾಲ್ ಟ್ಯಾಂಪರಿಂಗ್ ಕಾರಣದಿಂದ ಆಟಗಾರ ತಂಡದಿಂದ ನಿಷೇಧ..?!
Ishan Kishan Ball Tampering: ಭಾರತದ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದು ಭಾರತ-ಎ ಪ್ರತಿನಿಧಿಸುತ್ತಿದ್ದು, ಯುವ ಆಟಗಾರ ಸದ್ಯ ದೊಡ್ಡ ವಿವಾದ ಒಂದರಲ್ಲಿ ಸಿಲುಕಿದ್ದಾರೆ.
ಭಾರತ-ಎ ಮತ್ತು ಆಸ್ಟ್ರೇಲಿಯ-ಎ ನಡುವಿನ ಪಂದ್ಯದ ವೇಳೆ ಇಶಾನ್ ಅವರು ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದ್ದು, ಇದರಿಂದಾಗಿ ಅವರು ನಿಷೇಧದ ಭೀತಿಯಲ್ಲಿದ್ದಾರೆ.
ಭಾರತ-ಎ ಮತ್ತು ಆಸ್ಟ್ರೇಲಿಯಾ-ಎ ನಡುವಿನ ಅನಧಿಕೃತ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಭಾರತದ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ.
ಸ್ಥಳೀಯ ಮಾಧ್ಯಮಗಳ ಪ್ರಕಾರ, ಇಶಾನ್ ಕಿಶನ್ ಅವರು ಚೆಂಡನ್ನು ಬದಲಾಯಿಸುವ ಬಗ್ಗೆ ಮೈದಾನದ ಅಂಪೈರ್‌ಗಳೊಂದಿಗೆ ವಾದಿಸಿದ್ದರು, ಈ ಕಾರಣದಿಂದಾಗಿ ಅವರನ್ನು ನಿಷೇಧಿಸಬಹುದು ಎಂದು ವರದಿಯಾಗಿದೆ.
ಅಂಪೈರ್‌ಗಳು ಚೆಂಡನ್ನು ಬದಲಾಯಿಸಿದ್ದರಿಂದ ಪಂದ್ಯದ ನಾಲ್ಕನೇ ದಿನದಾಟ ತಡವಾಗಿ ಆರಂಭವಾಯಿತು. ಚೆಂಡಿನ ಮೇಲೆ ಗೀರುಗಳ ಗುರುತುಗಳಿವೆ ಎಂದು ಅವರು ದೂರಿದ್ದು, ಅಂಪೈರ್‌ಗಳೊಂದಿಗೆ ಈ ಕಾರಣದಿಂದಾಗಿ ಅವರು ವಾಗ್ವಾದ ನಡೆಸಿದರು.
ಈ ಕುರಿತು ಭಾರತ ಎ ತಂಡದ ಆಟಗಾರರು ಅಂಪೈರ್‌ಗಳ ಜತೆ ವಾಗ್ವಾದಕ್ಕಿಳಿದಿರುವುದು ಕಂಡುಬಂದಿತು. ಏತನ್ಮಧ್ಯೆ, ಮೈದಾನದ ಅಂಪೈರ್ ಶಾನ್ ಕ್ರೇಗ್ ಅವರು ಚೆಂಡಿನ ಮೇಲಿನ ಗೆರೆಗಳಿಗೆ ಕಾರನ ಭಾರತ ತಂಡವೇ ಎಂದು ದೂರಿದರು.
ವರದಿಗಳ ಪ್ರಕಾರ ಅಂಪೈರ್ " ನೀವು ಚೆಂಡನ್ನು ಸ್ಕ್ರ್ಯಾಚ್ ಮಾಡಿದ್ದೀರಿ. ನಾವು ಚೆಂಡನ್ನು ಬದಲಾಯಿಸಿದ್ದೇವೆ. ಈ ಬಗ್ಗೆ ಹೆಚ್ಚಿನ ಚರ್ಚೆ ಬೇಕಿಲ್ಲ. ಪಂದ್ಯವನ್ನು ಪ್ರಾರಂಭಿಸೋಣ, ಇದು ಚರ್ಚೆಯ ವಿಷಯವಲ್ಲ". ಎಂದಿದ್ದಾರೆ.
ಇದಕ್ಕೆ ಇಶಾನ್ ಕಿಶನ್ ನೀಡಿದ ಉತ್ತರದಿಂದ ಕಾರಣದಿಂದ, ಅಂಪೈರ್ ಕೋಪಗೊಂಡಿದ್ದು, " ನೀವು ಮಾಡಿದ ತಪ್ಪಿಗಾಗಿ ನಾವು ಚೆಂಡನ್ನು ಬದಲಾಯಿಸಿದ್ದೇವೆ, ಅದ್ದರಿಂದ ನIೌು ಇದರ ವಿಷಯವಾಗಿ ದಂಡ ಕಟ್ಟಾಗಬೇಕಾಗುತ್ತದೆ" ಎಂದಿದ್ದಾರೆ.
ಬಾಲ್ ಟ್ಯಾಂಪರಿಂಗ್ ಬಗ್ಗೆ ಅಂಪೈರ್‌ಗಳು ಎಷ್ಟು ಗಂಭೀರವಾಗಿದ್ದಾರೆ ಎಂಬುದು ಪಂದ್ಯದ ನಂತರ ತಿಳಿಯಲಿದೆ. ಇದರಲ್ಲಿ ಭಾರತೀಯ ಆಟಗಾರರು ತಪ್ಪಿತಸ್ಥರು ಎಂದು ಕಂಡುಬಂದರೆ, ಕ್ರಿಕೆಟ್ ಆಸ್ಟ್ರೇಲಿಯಾದ ನೀತಿ ಸಂಹಿತೆಯ ಪ್ರಕಾರ ಅವರನ್ನೂ ನಿಷೇಧಿಸಬಹುದು.