ಟೀಂ ಇಂಡಿಯಾ ದಿಗ್ಗಜ ಇಶಾಂತ್‌ ಶರ್ಮಾ ಪತ್ನಿಯೂ ಸ್ಟಾರ್‌ ಆಟಗಾರ್ತಿ! ಪತಿಯಂತೆ ಭಾರತದ ಕೀರ್ತಿಪತಾಕೆ ಎತ್ತಿಹಿಡಿದ ಪ್ಲೇಯರ್...‌ ಯಾರೆಂದು ಗೊತ್ತಾಯ್ತ?

Mon, 02 Sep 2024-1:53 pm,

ಇಶಾಂತ್ ಶರ್ಮಾ... ಭಾರತದ ಅತ್ಯಂತ ವೇಗದ ಬೌಲರ್‌ʼಗಳಲ್ಲಿ ಒಬ್ಬರು. 2007 ರಲ್ಲಿ ಬಾಂಗ್ಲಾದೇಶ ವಿರುದ್ಧ ಮೀರ್‌ಪುರದಲ್ಲಿ ಟೆಸ್ಟ್ ಪಂದ್ಯದೊಂದಿಗೆ ತಮ್ಮ ಅಂತರಾಷ್ಟ್ರೀಯ ಪ್ರಯಾಣ ಪ್ರಾರಂಭಿಸಿದ ಇಶಾಂತ್, ಅಂದಿನಿಂದ 105 ಟೆಸ್ಟ್, 80 ODI ಮತ್ತು 14 T20I ಗಳನ್ನು ಆಡಿದ್ದಾರೆ. ಇದರಲ್ಲಿ ಕ್ರಮವಾಗಿ 311, 115, ಮತ್ತು 8 ವಿಕೆಟ್‌ʼಗಳನ್ನು ಪಡೆದಿದ್ದಾರೆ. ಅಂದಹಾಗೆ ಭಾರತದ ಪರ ಅತಿ ಹೆಚ್ಚು ಅಂತರಾಷ್ಟ್ರೀಯ ವಿಕೆಟ್‌ಗಳನ್ನು (434) ಗಳಿಸಿ 9ನೇ ಸ್ಥಾನದಲ್ಲಿದ್ದಾರೆ.

 

ಇಶಾಂತ್ ತನ್ನ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಗಿ 2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದ್ದರು. 2024 ರ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ. ತಮ್ಮ ಕೊನೆಯ T20I ಪಂದ್ಯವನ್ನು 2013 ರಲ್ಲಿ ಆಡಿದ್ದರು.

 

2 ಸೆಪ್ಟೆಂಬರ್ 1988 ರಂದು ದೆಹಲಿಯಲ್ಲಿ ಜನಿಸಿದ ಇಶಾಂತ್, ಪ್ರತಿಮಾ ಸಿಂಗ್ ಎಂಬವರನ್ನು 2016 ರಲ್ಲಿ ವಿವಾಹವಾದರು. ಇನ್ನು ಅವರ ಪತ್ನಿ ಪ್ರತಿಮಾ ಸಿಂಗ್ ಭಾರತೀಯ ಮಹಿಳಾ ರಾಷ್ಟ್ರೀಯ ಬ್ಯಾಸ್ಕೆಟ್‌ʼಬಾಲ್ ತಂಡದ ಸದಸ್ಯರಾಗಿದ್ದಾರೆ.

 

ಫೆಬ್ರವರಿ 6, 1990 ರಂದು ವಾರಣಾಸಿಯ ಶಿವಪುರ ಪ್ರದೇಶದಲ್ಲಿ ಸೋಲಂಕಿ ಅಗ್ನಿವಂಶಿ ರಜಪೂತ ಕುಟುಂಬದಲ್ಲಿ ಜನಿಸಿದ ಪ್ರತಿಮಾ, ರಾಷ್ಟ್ರೀಯ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡದಲ್ಲಿ ಭಾರತದ ಪರ ಆಡುತ್ತಿದ್ದಾರೆ. 2016 ರಲ್ಲಿ ಮದುವೆಯಾಗುವ ಮೊದಲು ಇಶಾಂತ್ ಮತ್ತು ಪ್ರತಿಮಾ ಸುಮಾರು ಐದು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು.

 

2003ರಿಂದ ಉತ್ತರ ಪ್ರದೇಶದಲ್ಲಿ ಆಡಲು ಪ್ರಾರಂಭಿಸಿದ ಪ್ರತಿಮಾ, 2006 ರಲ್ಲಿ ಜೂನಿಯರ್ ಭಾರತೀಯ ತಂಡದಲ್ಲಿ ಸ್ಥಾನ ಪಡೆದರು. ಅದಾದ ನಂತರ 2008 ರಲ್ಲಿ ಜೂನಿಯರ್ ಇಂಡಿಯನ್ ಗರ್ಲ್ಸ್ ತಂಡದ ನಾಯಕಿಯಾದರು. ಅವರ ನಾಯಕತ್ವದಲ್ಲಿ, ದೆಹಲಿಯು ರಾಜಸ್ಥಾನದ ಭಿಲ್ವಾರದಲ್ಲಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಂತಹ ಹಲವಾರು ಪದಕಗಳನ್ನು ಗೆದ್ದುಕೊಂಡಿತು.

 

2010 ರಲ್ಲಿ ಕೇರಳದ ಕೊಟ್ಟಾಯಂನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ದೆಹಲಿ ವಿಶ್ವವಿದ್ಯಾಲಯದ ತಂಡವನ್ನು ಮುನ್ನಡೆಸಿದರು. ಅಲ್ಲಿಯೂ ಚಿನ್ನದ ಪದಕವನ್ನು ಪಡೆದರು. ನೆಲ್ಲೂರಿನಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾನಿಲಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ದೆಹಲಿ ವಿಶ್ವವಿದ್ಯಾನಿಲಯವು ಚಿನ್ನದ ಪದಕವನ್ನು ಪಡೆದುಕೊಂಡಾಗ ಅವರು ಉಪನಾಯಕರಾಗಿದ್ದರು.

 

ಅಲ್ಲಿ ಅವರು ತಮ್ಮ ಸಹೋದರಿ ಆಕಾಂಕ್ಷಾ ಸಿಂಗ್ ಅವರೊಂದಿಗೆ ಜಂಟಿ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅನೇಕ 'ಅತ್ಯುತ್ತಮ ಆಟಗಾರ್ತಿ' ಪ್ರಶಸ್ತಿಗಳನ್ನು ಪಡೆದ ಪ್ರತಿಮಾ, 2013 ರಲ್ಲಿ ಮೊದಲ 3 * 3 FIBA ​​ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರಕ್ಕೆ ಚಿನ್ನದ ಪದಕವನ್ನು ಖಚಿತಪಡಿಸಿದ್ದರು.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link