ಕೇವಲ 10 ರನ್‌ಗೆ ಇಡೀ ತಂಡವೇ ಆಲೌಟ್..! 7 ಬ್ಯಾಟ್ಸ್‌ಮನ್ಸ್ ಶೂನ್ಯಕ್ಕೆ ಔಟ್...! ಕ್ರಿಕೆಟ್ ಇತಿಹಾಸದಲ್ಲೇ ಇಷ್ಟೊಂದು ಕೆಟ್ಟ ದಾಖಲೆ ಬರೆದ ತಂಡ ಯಾವುದು ಗೊತ್ತೇ?
ಸ್ಪೇನ್‌ನಲ್ಲಿ ನಡೆದ ಘಟನೆಯಿದು. ಐಲ್ ಆಫ್ ಮ್ಯಾನ್ ದೇಶದ ತಂಡ ಟಿ-20 ಕ್ರಿಕೆಟ್ʼನಲ್ಲಿ ಅತಿ ಕಡಿಮೆ ಸ್ಕೋರ್ ಮಾಡಿ ಅತ್ಯಂತ ಕಳಪೆ ದಾಖಲೆ ಮಾಡಿದೆ.
ಇದೇ ವರ್ಷದ ಫೆಬ್ರವರಿ 26 ರಂದು, ಸ್ಪೇನ್ ವಿರುದ್ಧದ 6 T20 ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ, ಇಡೀ ತಂಡವು 8.4 ಓವರ್‌ಗಳಲ್ಲಿ ಕೇವಲ 10 ರನ್‌ಗಳಿಗೆ ಕುಸಿದಿತ್ತು.
ಈ ಅಲ್ಪ ಗುರಿ ಬೆನ್ನತ್ತಲು ಬಂದ ಸ್ಪೇನ್ 0.2 ಓವರ್ʼಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಸರಣಿಯನ್ನು ಸ್ಪೇನ್ 5-0 ಅಂತರದಿಂದ ಗೆದ್ದುಕೊಂಡಿತು.
ಸಿಡ್ನಿ ಥಂಡರ್ ಈ ಹಿಂದೆ ಟಿ-20 ಕ್ರಿಕೆಟ್ʼನಲ್ಲಿ ಕಡಿಮೆ ರನ್ ಗಳಿಸಿದ ದಾಖಲೆಯನ್ನು ಬಿಗ್ ಬ್ಯಾಷ್ ಲೀಗ್ʼನಲ್ಲಿ ಮಾಡಿತ್ತು. 2022-23 ಋತುವಿನಲ್ಲಿ, ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧ ಸಿಡ್ನಿ ತಂಡವು 15 ರನ್ʼಗಳಿಗೆ ಔಟಾಗಿತ್ತು. ಆದರೆ ಆ ಬಳಿಕ ಐಲ್ ಆಫ್ ಮ್ಯಾನ್ ದೇಶದ ತಂಡ ಇಂತಹ ಕಳಪೆ ದಾಖಲೆಯನ್ನು ಬರೆದಿದೆ.
ಇದಷ್ಟೇ ಅಲ್ಲದೆ, ಐಲ್ ಆಫ್ ಮ್ಯಾನ್ ತಂಡದ 7 ಬ್ಯಾಟ್ಸ್‌ಮನ್‌ಗಳು ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಜೋಸೆಫ್ ಬರೋಸ್ ಎಂಬ ಕ್ರಿಕೆಟಿಗನಷ್ಟೇ ಗರಿಷ್ಠ 4 ರನ್ ಗಳಿಸಿದರು.
ಇನ್ನು ಸ್ಪೇನ್‌ನ ಅತ್ಯಂತ ಯಶಸ್ವಿ ಬೌಲರ್ ಅತೀಫ್ ಮಹಮೂದ್ 4 ಓವರ್‌ಗಳಲ್ಲಿ 6 ರನ್ ನೀಡಿ 4 ವಿಕೆಟ್ ಪಡೆದರು. ಇವರಲ್ಲದೆ ಮೊಹಮ್ಮದ್ ಕಮ್ರಾನ್ 3 ಹಾಗೂ ಲೋರ್ನ್ ಬರ್ನ್ಸ್ 2 ವಿಕೆಟ್ ಪಡೆದಿದ್ದರು.