Israel-Hamas War: 10 ದಿನಗಳಲ್ಲಿ ಹಮಾಸ್‌ನ 6 ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನುಕೊಂದ ಇಸ್ರೇಲ್!
ಇಂದಿಗೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಪ್ರಾರಂಭವಾಗಿ 10 ದಿನವಾಯಿತು. ಅ.7ರಂದು ಪ್ಯಾಲೆಸ್ಟೈನ್ ಆರ್ಮ್ಸ್ ಗ್ರೂಪ್ ಹಮಾಸ್ ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ರಾಕೆಟ್ ದಾಳಿಯ ಸರಣಿ ಪ್ರಾರಂಭಿಸಿದಾಗ ಈ ಯುದ್ಧ ಪ್ರಾರಂಭವಾಯಿತು. ದಾಳಿಯ ಹೊಣೆಯನ್ನು ಹಮಾಸ್ ವಹಿಸಿಕೊಂಡಿದೆ ಮತ್ತು ಇದನ್ನು ಇಸ್ರೇಲ್ ವಿರುದ್ಧ ಮಿಲಿಟರಿ ಕ್ರಮ ಎಂದು ಕರೆದಿದೆ. ಇದರ ನಂತರ ಏನಾಯಿತು ಎಂದು ಇಡೀ ಜಗತ್ತೇ ನೋಡಿದೆ.
ಹಮಾಸ್ ಮೇಲೆ ಇಸ್ರೇಲ್ ಪ್ರಬಲ ಪ್ರತಿದಾಳಿ ನಡೆಸಿದೆ. ಈ ಯುದ್ಧದಲ್ಲಿ ಎರಡೂ ಕಡೆಯಿಂದ ಜನರ ಜೀವಗಳು ಹೋಗುತ್ತಿವೆ. ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಂಡಿದ್ದು, ಲೆಕ್ಕಕ್ಕೆ ಸಿಗದಷ್ಟು ಜನರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಈ ಎಲ್ಲದರ ನಡುವೆ ಇಸ್ರೇಲಿ ಸೇನೆಯು ಹಮಾಸ್ ನ 6 ಕಮಾಂಡರ್ಗಳನ್ನು ಕೊಂದಿದೆ.
ಮಾಧ್ಯಮ ವರದಿಗಳ ಪ್ರಕಾರ ಇಸ್ರೇಲ್ 6 ಮೋಸ್ಟ್ ವಾಟೆಂಡ್ ಕಮಾಂಡರ್‌ಗಳನ್ನು ಮುಗಿಸಿದೆ. ಇಸ್ರೇಲಿ ಸೇನೆಯು ಹಮಾಸ್‌ನ ನುಖ್ಬಾ ಜಬಲ್ಯ ಆಕ್ರಮಣ ಕಂಪನಿಯ ಸದಸ್ಯನಾಗಿದ್ದ ಅಲಿ ಖಾದಿಯನ್ನು ಕೊಂದಿರುವುದಾಗಿ ಹೇಳಿದೆ. ಅದೇ ರೀತಿ ಅವರು ಹಮಾಸ್‌ನ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥರಾಗಿದ್ದ ಜಕರಿಯಾ ಅಬು ಮಾಮರ್‌ನನ್ನೂ ಸಹ ಕೊಂದಿರುವುದಾಗಿ ತಿಳಿಸಿದ್ದಾರೆ.
ನುಖ್ಬಾ ಖಾನ್ ಯೂನಿಸ್ ಅಸಾಲ್ಟ್ ಕಂಪನಿಯ ಕಮಾಂಡರ್ ಆಗಿದ್ದ 3ನೇ ಭಯೋತ್ಪಾದಕ ಬಿಲಾಲ್ ಅಲ್ ಖದ್ರಾನನ್ನು ಕೊಂದಿರುವುದಾಗಿ ಇಸ್ರೇಲಿ ಸೇನೆಯು ತಿಳಿಸಿದೆ. ಇದಲ್ಲದೇ ಇಸ್ರೇಲಿ ಪಡೆಗಳ ವೈಮಾನಿಕ ದಾಳಿಯಲ್ಲಿ ಹತನಾದ 4ನೇ ಹಮಾಸ್ ಕಮಾಂಡರ್‍ನ ಹೆಸರು ಮುಯೆತ್ತಾಜ್ ಈದ್.
ಅದೇ ರೀತಿ ಇಸ್ರೇಲ್ ಸೇನೆಯು ಗಾಜಾದಲ್ಲಿ ಹಮಾಸ್ ಸರ್ಕಾರದ ಹಣಕಾಸು ಸಚಿವ ಜಾಯ್ದ್ ಅಬು ಅವರನ್ನು ಕೊಂದಿರುವುದಾಗಿ ತಿಳಿಸಿದ್ದಾರೆ. ನಂತರ ಇಸ್ರೇಲ್ ಹಮಾಸ್‌ನ 6ನೇ ಕಮಾಂಡರ್ ಮೆರಾದ್ ಅಬುವನ್ನು ಸಹ ಕೊಂದಿರುವುದಾಗಿ ತಿಳಿಸಿದೆ.