ಮನೆಯ ದಕ್ಷಿಣ ದಿಕ್ಕಿನಲ್ಲಿ ಈ ವಸ್ತುಗಳನ್ನು ತಪ್ಪಿಯೂ ಇಡಬೇಡಿ, ಬಡತನ ವಕ್ಕರಿಸುವುದು; ಕಷ್ಟ ತಪ್ಪಿದ್ದೇ ಅಲ್ಲ !
ವಾಸ್ತು ಶಾಸ್ತ್ರದಲ್ಲಿ ಮನೆಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಗೃಹೋಪಕರಣಗಳನ್ನು ಇಡಲು ಕೆಲವು ನಿಯಮಗಳನ್ನು ಹಾಕಲಾಗಿದೆ. .
ತುಳಸಿಗೆ ಅತ್ಯಂತ ಪವಿತ್ರ ಸಸ್ಯ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಋಣಾತ್ಮಕತೆ ಶುರುವಾಗುತ್ತದೆ. ಇದರಿಂದ ಮನೆಯ ಸುಖ ಶಾಂತಿ ಹಾಳಾಗುತ್ತದೆ.
ಶೂ ಮತ್ತು ಚಪ್ಪಲಿಯನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಇದರಿಂದ ಕುಟುಂಬ ಸದಸ್ಯರು ಪಿತೃ ದೋಷಕ್ಕೆ ಬಲಿಯಾಗುವರು.
ಮನೆಯ ದಕ್ಷಿಣ ದಿಕ್ಕಿನಲ್ಲಿ ದೇವರಮನೆ ಇರಬಾರದು. ದಕ್ಷಿಣ ದಿಕ್ಕಿನಲ್ಲಿ ಪೂಜಾ ಕೋಣೆಯನ್ನು ಹೊಂದಿರುವುದು ಅತ್ಯಂತ ಅಶುಭ. ಈ ಕಾರಣದಿಂದಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ.
ಎಲೆಕ್ಟ್ರಾನಿಕ್ ವಸ್ತುಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಇದರಿಂದ ಕೆಟ್ಟ ಫಲಿತಾಂಶವನ್ನೂ ಪಡೆಯುತ್ತೀರಿ.
ವಾಸ್ತು ಪ್ರಕಾರ ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿಗೆ ದೀಪ ಹಚ್ಚಬಾರದು. ಇದರಿಂದ ಕುಟುಂಬ ಸದಸ್ಯರ ಸಮಸ್ಯೆಗಳು ಹೆಚ್ಚಾಗತೊಡಗುತ್ತವೆ. ವಾಸ್ತು ಪ್ರಕಾರ ದೀಪವನ್ನು ಬೆಳಗಿಸಲು ಸರಿಯಾದ ದಿಕ್ಕು ಉತ್ತರವಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.