ಇಲ್ಲಿ ಮೃತ ವ್ಯಕ್ತಿಗಳೊಂದಿಗೆ ಶಾಸ್ತ್ರ ಬದ್ಧವಾಗಿ ನೆರವೇರುತ್ತದೆ ಮದುವೆ..!
ಹೌದು, ಫ್ರಾನ್ಸ್‌ನಲ್ಲಿ ಇಂತಹ ವಿವಾಹಗಳಿಗೆ ಯಾವುದೇ ನಿರ್ಬಂಧವಿಲ್ಲ . ಇಲ್ಲಿ ಮೃತ ವ್ಯಕ್ತಿಗಳನ್ನು ಮದುವೆಯಾಗಲು ಕಾನೂನಿನಲ್ಲೂ ಅವಕಾಶವಿದೆ. ಆದರೆ ಮೃತ ವ್ಯಕ್ತಿಯನ್ನು ಮದುವೆಯಾಗುವ ಉದ್ದೇಶದ ಹಿಂದೆ ಪ್ರಬಲವಾದ ಕಾರಣವಿರಬೇಕು. ಹಾಗಿದ್ದಲ್ಲಿ ಮಾತ್ರ ರಾಷ್ಟ್ರಪತಿಗಳು ಈ ಮದುವೆಗೆ ಅನುಮತಿ ನೀಡುತ್ತಾರೆ.
ಫ್ರೆಂಚ್ ಕಾನೂನಿನ ಪ್ರಕಾರ, 1950 ರ ದಶಕದಲ್ಲಿ ಜಾರಿಗೆ ಬಂದ ಕಾನೂನಿನ ಪ್ರಕಾರ, ತಮ್ಮ ಪ್ರೇಯಸಿ ಅಥವಾ ಪ್ರಿಯಕರ ಮೃತಪಟ್ಟರೆ, ಅವರ ಸಾವಿನ ನಂತರ ಅವರನ್ನು ಮದುವೆಯಾಗಲು ಫ್ರಾನ್ಸ್ ನಲ್ಲಿ ಅವಕಾಶವಿದೆ. ಮೃತ ಪ್ರೇಯಸಿ ಅಥವಾ ಪ್ರಿಯಕರನನ್ನು ಕಾನೂನುಬದ್ಧವಾಗಿ ಮದುವೆಯಾಗಬಹುದು. ಆದರೆ ಮದುವೆಗೂ ಮುನ್ನ ರಾಷ್ಟ್ರಪತಿಗಳ ಅನುಮತಿ ಪಡೆಯುವುದು ಅನಿವಾರ್ಯ.
ಮದುವೆ ಸಮಾರಂಭದ ವೇಳೆ, ಮೃತ ವ್ಯಕ್ತಿಯ ಫೋಟೋವನ್ನು ಜೊತೆಯಲ್ಲಿ ಇರಿಸಲಾಗುತ್ತದೆ. ಫೋಟೋವನ್ನು ಜೊತೆಯಲ್ಲಿರಿಸಿಕೊಂಡೇ ಎಲ್ಲಾ ವಿಧಿವಿಧಾನಗಳನ್ನು ನೆರವೆರಿಸಲಾಗುತ್ತದೆ.
ಮೃತ ವ್ಯಕ್ತಿಯೊಂದಿಗೆ ವಿವಾಹವಾಗಲು ಇಚ್ಛಿಸುವ ವ್ಯಕ್ತಿ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೃತ ವ್ಯಕ್ತಿಯನ್ನು ಮದುವೆಯಾದ ಬಳಿಕ ಮೃತ ವ್ಯಕ್ತಿಯ ಆಸ್ತಿಯ ಮೇಲೆ ಯಾವುದೇ ಅಧಿಕಾರ ಇರುವುದಿಲ್ಲ.
ಮೃತ ವ್ಯಕ್ತಿಯನ್ನು ಮದುವೆಯಾಗಲು ಅನುಮತಿ ಕೋರಿ ಪ್ರತಿ ವರ್ಷ ಸರ್ಕಾರದ ಮುಂದೆ ಸಾವಿರಾರು ಅರ್ಜಿಗಳು ಬರುತ್ತವೆ. ಬಂದಿರುವ ಎಲ್ಲಾ ಅರ್ಜಿಗಳಿಗೂ ಸರ್ಕಾರ ಅನುಮತಿ ನೀಡುವುದಿಲ್ಲ. ಮೊದಲೇ ಹೇಳಿದಂತೆ ಪ್ರಬಲವಾದ ಕಾರಣವಿದ್ದರೆ ಮಾತ್ರ ಈ ಮದುವೆಗೆ ಅವಕಾಶ ನೀಡಲಾಗುತ್ತದೆ