ಶರೀರದ ಈ ಅಂಗಗಳನ್ನು ಸ್ವಚ್ಛವಾಗಿಡದಿದ್ದಲ್ಲಿ ರೋಗಗಳ ಅಪಾಯ ತಪ್ಪಿದ್ದಲ್ಲ
ಹೆಚ್ಚಿನ ಜನರು ತಮ್ಮ ಹೊಕ್ಕುಳಿನ ಸ್ವಚ್ಛತೆಗೆ ಗಮನ ಕೊಡುವುದಿಲ್ಲ. ಸ್ನಾನ ಮಾಡುವಾಗ ಖಂಡಿತವಾಗಿಯೂ ಹೊಕ್ಕುಳನ್ನು ಸ್ವಚ್ಛ ಗೊಳಿಸಬೇಕು. ಹೊಕ್ಕುಳವು ದೇಹದಲ್ಲಿ ಬ್ಯಾಕ್ಟೀರಿಯಾ ಸುಲಭವಾಗಿ ಬೆಳೆಯಲು ಅನುಕೂಲವಾಗುವಂಥಹ ಸ್ಥಳವಾಗಿದೆ. ಅದಕ್ಕಾಗಿಯೇ ಹೊಕ್ಕುಳನ್ನು ಸ್ವಚ್ಛಗೊಳಿಸುವುದುನ್ನು ಖಚಿತಪಡಿಸಿಕೊಳ್ಳಿ. (ಫೋಟೋ - Pexels)
ಕಿವಿಗಳ ಹಿಂಬದಿ ರೋಗಾಣುಗಳ ಬೆಳವಣಿಗೆಗೆ ಸಹ ಅನುಕೂಲಕರವಾಗಿದೆ. ಈ ಸ್ಥಳವನ್ನು ಕೂಡಾ ಸರಿಯಾಗಿ ಸ್ವಚ್ಛಗೊಳಿಸಬೇಕು. ಕಿವಿಯ ಹಿಂಬದಿ ಸರಿಯಾಗಿ ಸ್ವಚ್ಛವಾಗದಿದ್ದರೆ ಕೆಟ್ಟ ವಾಸನೆ ಕೂಡಾ ಬರುತ್ತದೆ. ಹಾಗಾಗಿ ಕಿವಿಯ ಹಿಂಬದಿ ಚೆನ್ನಾಗಿ ಸ್ವಚ್ಛಗೊಳಿಸಿ, ತೇವಾಂಶ ಕೂಡಾ ನಿಲ್ಲದಂತೆ ನೋಡಿಕೊಳ್ಳಬೇಕು. (ಫೋಟೋ - Pexels)
ವ್ಯಾಯಾಮ ಮಾಡಿದಾಗಲೆಲ್ಲಾ ದೇಹದಿಂದ ಬೆವರು ಹೊರಬರುತ್ತದೆ. ಈ ಬೆವರು ತೊಡೆಯ ಮೇಲಿನ ಭಾಗದಲ್ಲಿ ಸಂಗ್ರಹವಾಗುತ್ತದೆ. ಇದು ತುರಿಕೆಗೆ ಕಾರಣವಾಗಬಹುದು. ದೇಹದ ಈ ಭಾಗವನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಈ ಭಾಗವು ಸೂಕ್ಷ್ಮವಾಗಿದ್ದು, ವಿಶೇಷ ಕಾಳಜಿ ವಹಿಸಬೇಕು. (ಫೋಟೋ - Pexels)
ಹಲ್ಲಿನ ನೈರ್ಮಲ್ಯದ ಬಗ್ಗೆ ಹೇಳುವುದಾದರೆ, ದಿನಕ್ಕೆ ಎರಡು ಬಾರಿ ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು. ಹಲ್ಲುಗಳನ್ನು ಹೊರತುಪಡಿಸಿ, ನಾಲಿಗೆಯನ್ನು ಸಹ ಸ್ವಚ್ಛಗೊಳಿಸುವುದು ಅವಶ್ಯಕ. ನಾಲಿಗೆಯಲ್ಲಿ ಅನೇಕ ರೇಖೆಗಳು ಮತ್ತು ಉಬ್ಬುಗಳಿವೆ. ಇದರಲ್ಲಿ ಬ್ಯಾಕ್ಟೀರಿಯಾಗಳು ಅಡಗಿಕೊಳ್ಳುತ್ತವೆ. ಈ ಕಾರಣದಿಂದಾಗಿ ಬಾಯಿ ವಾಸನೆ ಬರಲು ಪ್ರಾರಂಭವಾಗುತ್ತದೆ. ಅದಕ್ಕಾಗಿಯೇ ನಾಲಿಗೆಯನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. (ಫೋಟೋ - Pexels)
ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ನಾವು ದಿನಕ್ಕೆ ಹಲವಾರು ಬಾರಿ ಕೈ ತೊಳೆದುಕೊಳ್ಳುತ್ತೇವೆ. ಆದರೆ ಉಗುರುಗಳ ಕೆಳಗಿರುವ ಕೊಳೆಯನ್ನು ಸ್ವಚ್ಛಗೊಳಿಸಲು ಮರೆಯುತ್ತೇವೆ. ಉಗುರುಗಳ ಕೆಳಗೆ ಕೊಳೆ ಸೇರಿಕೊಮಡರೆ, ಬ್ಯಾಕ್ಟಿರಿಯಾಗಳು ಕೂಡಾ ಮನೆ ಮಾಡಿರುತ್ತವೆ. ಇದು ನಾವು ಆಹಾರ ಸೇವಿಸುವಾಗ ನಮ್ಮ ದೇಹ ಕೂಡಾ ಸೇರಬಹುದು. (ಫೋಟೋ - Pexels)