ಐ.ಟಿ.ಎಫ್ ಕಲಬುರಗಿ ಓಪನ್‌ ಟೂರ್ನಿ: ಸಿಂಗಲ್ಸ್ ಕಿರೀಟ ಗೆದ್ದ ಭಾರತದ ರಾಮಕುಮಾರ್

Mon, 04 Dec 2023-7:07 am,

ಬಾಲ್ ಬಾಯ್ಸ್ ಗೆ 25 ಸಾವಿರ ನಗದು ಬಹುಮಾನ:

ಟೂರ್ನಿಯುದ್ದಕ್ಕು ಶಿಸ್ತಿನಿಂದ ಕಾರ್ಯನಿರ್ವಹಿಸಿದ ಬಾಲ್‌ ಬಾಯ್ಸ್ ಕಾರ್ಯಕ್ಕೆ ವ್ಯಾಪಕ‌ಮೆಚ್ಚುಗೆ ವ್ಯಕ್ತವಾಯಿತು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಆಟಗಾರರು ಒಟ್ಟಾರೆಯಾಗಿ 25 ಸಾವಿರ ನಗದು ಬಹುಮಾನ ಬಾಲ್ ಬಾಯ್ಸ್ ಗೆ ಘೋಷಣೆ ಮಾಡಿದ್ದು, ನಗದು ಹಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಾಲ್ ಬಾಯ್ಸ್ ಗಳಿಗೆ‌ ನೀಡಿ ಶುಭ ಕೋರಿದರು

ಬಾಲ್ ಬಾಯ್ಸ್ ಗೆ 25 ಸಾವಿರ ನಗದು ಬಹುಮಾನ:

ಟೂರ್ನಿಯುದ್ದಕ್ಕು ಶಿಸ್ತಿನಿಂದ ಕಾರ್ಯನಿರ್ವಹಿಸಿದ ಬಾಲ್‌ ಬಾಯ್ಸ್ ಕಾರ್ಯಕ್ಕೆ ವ್ಯಾಪಕ‌ಮೆಚ್ಚುಗೆ ವ್ಯಕ್ತವಾಯಿತು. ಕ್ರೀಡಾಕೂಟದಲ್ಲಿ ಭಾಗವಹಿಸಿದ ಆಟಗಾರರು ಒಟ್ಟಾರೆಯಾಗಿ 25 ಸಾವಿರ ನಗದು ಬಹುಮಾನ ಬಾಲ್ ಬಾಯ್ಸ್ ಗೆ ಘೋಷಣೆ ಮಾಡಿದ್ದು, ನಗದು ಹಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಾಲ್ ಬಾಯ್ಸ್ ಗಳಿಗೆ‌ ನೀಡಿ ಶುಭ ಕೋರಿದರು

ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 6-2; 6-1 ನೇರ ಸೆಟ್ ನಿಂದ ಅದ್ವಿತಿಯ ಗೆಲುವು ಸಾಧಿಸಿ ಸಿಂಗಲ್ಸ್ ಕಿರೀಟ ತನ್ನ‌ ಮುಡಿಗೇರಿಸಿದ ಭಾರತದ ರಾಮಕುಮಾರ ರಾಮನಾಥನ ಅವರಿಗೆ US $ 3600 ಚೆಕ್, ಟ್ರೋಫಿ ಮತ್ತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟ ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ಅವರಿಗೆ US $ 2120 ಚೆಕ್ ಮತ್ತು ಟ್ರೋಫಿಯನ್ನು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರದಾನ ಮಾಡಿದರು.

ಕಳೆದೊಂದು ವಾರದಿಂದ‌ ನಡೆಯುತ್ತಿರುವ ಟೆನಿಸ್ ಹಬ್ಬದ ಫೈನಲ್ ಪಂದ್ಯ ರಜೆ ದಿನವಾದ ಭಾನುವಾರ ಇದ್ದ ಕಾರಣ ಸಹಜವಾಗಿ ಕ್ರೀಡಾಂಗಣ ಪ್ರೇಕ್ಷಕರಿಂದ ತುಂಬಿ ತುಳುಕಿತು. ಪ್ರತಿ ಗೇಮ್ ಆದಾಗ ಆಟಗಾರರನ್ನು ಕ್ರೀಡಾ ಮನೋಭಾವನೆಯಿಂದ ಕಲಬುರಗಿ ಜನ ಹುರಿದುಂಬಿಸಿದರು. ವಿಶೇಷವಾಗಿ ರಾಮನಾಥನ್ ಅವರ ಶ್ರೇಷ್ಟ ಪ್ರದರ್ಶನವನ್ನು ಕಣ್ತುಂಬಿಕೊಂಡರು. ವಿನ್ನಿಂಗ್ ಶಾಟ್ ಹೊಡೆದ‌ ಕೂಡಲೆ ಪ್ರೇಕ್ಷಕ ವೃಂದ ಭಾರತ್ ಮಾತಾ ಕಿ ಜೈ ಎಂದು ಜಯಘೋಷ ಹಾಕಿದರು..

ಇತ್ತೀಚೆಗೆ ಧಾರವಾಡ್ ಓಪನ್, ಮುಂಬೈ ಓಪನ್ ಪ್ರಶಸ್ತಿ ಗೆದ್ದು ಬಂದ ಭಾರತದ ರಾಮಕುಮಾರ ರಾಮನಾಥನ್ ಕಲಬುರಗಿ ಓಪನ್ ಟೈಟಲ್ ಪಡೆಯುವ ಮೂಲಕ ಹ್ಯಾಟ್ರಿಕ್ ಟೈಟಲ್ ಪಡೆದುಕೊಂಡಂತಾಗಿದೆ. ಈ ಮೂಲಕ ಭವಿಷ್ಯದಲ್ಲಿ ಇನ್ನು ಎತ್ತರಕ್ಕೇರುವ ಮುನ್ಸೂಚನೆ ನೀಡಿದ್ದಾರೆ.

 

ಪಂದ್ಯದಲ್ಲಿ ಪ್ರವಾಸಿ ಆಟಗಾರನ ಮೇಲೆ ಆತಿಥೇಯ ಐದನೇ ಶ್ರೇಯಾಂಕದ ಆಟಗಾರ ತುಂಬಾ ಭಾರಿಯಾಗಿ ಪರಿಣಮಿಸಿದರು. ಮೊದಲೆ ಸೆಟ್ ನಲ್ಲಿ ಏಳನೇ ಶ್ರೆಯಾಂಕದ ಡೇವಿಡ್ ಪಿಚ್ಲರ್ 2 ಪಾಯಿಂಟ್ ಗಳಿಸಿದರೆ, ಎರಡನೇ ಸೆಟ್ ನಲ್ಲಿ ಕೇವಲ ಒಂದು ಮಾತ್ರ ಗಳಿಸಲು ಸಾಧ್ಯವಾಯಿತು. ಅಷ್ಡರ ಮಟ್ಟಿಗೆ ರಾಮಕುಮಾರ ರಾಮನಾಥನ್ ಅವರು ಅಟದ ಮೇಲೆ ಪ್ರಭುತ್ವ ಸಾರಿದರು.

ಎರಡನೇ ಸೆಟ್ ನಲ್ಲಿ ಡೇವಿಡ್‌ ಪಿಚ್ಲರ್ ನಿಂದ ಹೋರಾಟದ ಭರವಸೆ ನೀಡಿದಾದರು ಅದನ್ನು ಕಾಯ್ದುಕೊಳ್ಳಲಿಲ್ಲ. ರಾಮ್‌ಕುಮಾರ್ ವಿಭಿನ್ನ ತಂತ್ರದೊಂದಿಗೆ ದೃಢ‌ ವಿಶ್ವಾದೊಂದಿಗೆ ಮುನ್ನುಗಿದ್ದರು. ಡೇವಿಡ್ ಗೆ ಬಲವಂತವಾಗಿ ತಪ್ಪುಗಳನ್ನು ಮಾಡುವಂತೆ ಒತ್ತಾಯಿಸಿದರು. ಸ್ವತಃ ಒಂದೆರಡು ಕ್ರಾಸ್ ಕೋರ್ಟ್ ಶಾಟ್ ನಿಂದ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಭಾರತೀಯ ಡೇವಿಸ್ ಕಪ್ ತಂಡದ ಸದಸ್ಯನ ಡೌನ್ ದಿ ಲೈನ್ ವಿನ್ನರ್‌ ಶಾಟ್ ಗಳಿಗೆ ಉತ್ತರ ಕಂಡುಕೊಳ್ಳದೆ ಪ್ರವಾಸಿಗ 5ನೇ ಗೇಮ್‌ನಲ್ಲಿ ತಮ್ಮ ಸರ್ವ್ ಉಳಿಸಿಕೊಳ್ಳಲು ಹೆಣಗಾಡಿದರು. 4ನೇ ಮತ್ತು 6ನೇ ಗೇಮ್‌ನಲ್ಲಿ ಎರಡು ಬ್ರೇಕ್‌ಗಳ ಜೊತೆಗೆ ಅಂತಿಮವಾಗಿ ಏಸ್‌ನೊಂದಿಗೆ ಎದುರಾಳಿಯನ್ನು 6-1 ಸೆಟ್ ಮೂಲಕ ಕಲಬುರಗಿ ಐ.ಟಿ.ಎಫ್. ಕಿರೀಟ ಗರಿ ತಮ್ಮದಾಗಿಸಿಕೊಂಡರು.

 

ಕಿಕ್ಕಿರಿದ ಕ್ರೀಡಾಂಗಣದಲ್ಲಿ ತವರಿನ ಪ್ರೇಕ್ಷಕರ ಮುಂದೆ ಆಟವಾಡುತ್ತಿದ್ದ ರಾಮ್‌ಕುಮಾರ್ ತನ್ನ ಮೊದಲ ಸರ್ವ್‌ ಮಾಡುವ ಮೊದಲೇ ನೈತಿಕವಾಗಿ ಪ್ರೇಕ್ಷಕರಿಮದ ಬೆಂಬಲ ವ್ಯಕ್ತವಾಯಿತು. ಮೊದಲ ಐದು ಗೇಮ್‌ಗಳಲ್ಲಿ ಇಬ್ಬರೂ ಆಟಗಾರರು ತಮ್ಮ ಸರ್ವ್‌ಗಳನ್ನು ಉಳಿಸಿಕೊಂಡಿದ್ದರು. 6ನೇ ಗೇಮ್‌ನಲ್ಲಿ ರಾಮಕುಮಾರ್ ಅವರು ಡೇವಿಡ್ ಅವರ ಸರ್ವ್ ಬ್ರೆಕ್ ಮಾಡಿದರು. ತದನಂತರ ಹಿಂದುರಗಿ ನೋಡದ ಆತಿಥೇಯ ಆಟಗಾರ ಅಮೋಘ ಪ್ರದರ್ಶನ ನೀಡಿ 6-2 ರಿಂದ ಸೆಟ್ ವಶಪಡಿಸಿಕೊಂಡರು.

 

“ಬ್ಯಾಕ್ ಟು ಬ್ಯಾಕ್ ಪ್ರಶಸ್ತಿಗಳನ್ನು ಗೆಲ್ಲುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಪ್ರಸ್ತುತ ನನ್ನ ಆಟ ಚೆನ್ನಾಗಿ ಸಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ನಾನು ನನ್ನ ಅತ್ಯುತ್ತಮ ಆಟ ಪ್ರದರ್ಶನ ನೀಡಿದ್ದೇನೆ. ಇಲ್ಲಿನ ಕೋರ್ಟ್‌ಗಳು ಆರಂಭದಲ್ಲಿ ನನ್ನ ಆಟಕ್ಕೆ ಹೊಂದಿಕೆಯಾಗಲಿಲ್ಲ, ಆದರೆ ನಾನು ಬೇಗನೆ ಅದಕ್ಕೆ ಹೊಂದಿಕೊಂಡೆ" ಎಂದು ವಿಜಯದ ನಂತರ ರಾಮ್‌ಕುಮಾರ್ ಹೇಳಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link