ರಾತ್ರಿ ಊಟದಲ್ಲಿ ಈ ತರಕಾರಿ ತಿಂದರೆ ಸಾಕು.. ಬೆಳಗಾಗುವಷ್ಟರಲ್ಲೇ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ ಬ್ಲಡ್‌ ಶುಗರ್‌ !

Fri, 25 Oct 2024-7:07 pm,

Diabetes home remedy: ತೊಂಡೆಕಾಯಿಯಲ್ಲಿ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳಿದ್ದರೂ ಕೆಲವರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಜೀರ್ಣಕ್ರಿಯೆ ಸಮಸ್ಯೆ ಇರುವವರು ಮತ್ತು ಮೆದುಳಿನ ಸಮಸ್ಯೆ ಇರುವವರು ಇವುಗಳನ್ನು ತಿನ್ನಬಾರದು. 

ತೊಂಡೆಕಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

ಮೆದುಳಿಗೆ ಸಂಬಂಧಿಸಿದ ಸಮಸ್ಯೆ ಇರುವವರು ತೊಂಡೆಕಾಯಿಯನ್ನು ದಿನನಿತ್ಯ ಸೇವಿಸಿದರೆ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ. ತೊಂಡೆಕಾಯಿ ಎಲೆ, ಕಾಂಡ, ಬೇರು, ಎಲ್ಲವುಗಳಲ್ಲಿಯೂ ಔಷಧೀಯ ಗುಣಗಳಿವೆ. 

ತೊಂಡೆಕಾಯಿ ಚರ್ಮದ ಸಮಸ್ಯೆಗಳು, ದದ್ದುಗಳು, ಎಕ್ಜಿಮಾ, ಚರ್ಮದ ಒಡೆತಗಳಿಗೆ ತೊಂಡೆಕಾಯಿಯ ಎಲೆಗಳನ್ನು ಬಳಸಬಹುದು. ತೊಂಡೆಕಾಯಿ ಸೇವೆನಯಿಂದ ಚರ್ಮದ ಸಮಸ್ಯೆಗಳಿಗೆ ಮಾತ್ರವಲ್ಲ, ಜ್ವರ ಮತ್ತು ಜಾಂಡೀಸ್ ಸಹ ಗುಣವಾಗುತ್ತದೆ.

ತೊಂಡೆಕಾಯಿ ಎಲೆ ಕಷಾಯವು ಕೆಮ್ಮು ಮತ್ತು ಅಸ್ತಮಾದಿಂದ ಪರಿಹಾರವನ್ನು ನೀಡುತ್ತದೆ. ಪಿತ್ತ ಮತ್ತು ಹೊಟ್ಟೆಯಲ್ಲಿನ ಜಂತುಹುಳ ಕಡಿಮೆ ಮಾಡಲು ಇದು ಉತ್ತಮ ಔಷಧವಾಗಿದೆ. ಈ ಗಿಡದ ಎಲೆಗಳನ್ನು ಅರೆದು ಬೆಣ್ಣೆಯೊಂದಿಗೆ ಬೆರೆಸಿ ಗಾಯ, ಹುಣ್ಣು, ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತವೆ.

ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ತೊಂಡೆಕಾಯಿ ಬಹಳಷ್ಟು ಉಪಯುಕ್ತವಾಗಿದೆ. ತೊಂಡೆಕಾಯಿ ಎಲೆಗಳು ಸಹ ಡಯಾಬಿಟಿಸ್‌ಗೆ ಉತ್ತಮ ಮದ್ದು. ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಮಧುಮೇಹಿಗಳಲ್ಲದವರಿಗೂ ಇದು ಉಪಯುಕ್ತವಾಗಿದೆ.

ತೊಂಡೆಕಾಯಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಇದರಲ್ಲಿರುವ ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹವು ಗ್ಲೂಕೋಸ್ ಅನ್ನು ನಿಧಾನವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.

ರಾತ್ರಿ ಊಟದಲ್ಲಿ ತೊಂಡೆಕಾಯಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬೆಳಗಾಗುವುದರಲ್ಲಿ ನಿಯಂತ್ರಿಸುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ತಿನ್ನುವ ಬದಲು ವಾರದಲ್ಲಿ ಮೂರು ಅಥವಾ ನಾಲ್ಕು ದಿನ ತಿನ್ನುವುದು ಉತ್ತಮ.

ತೊಂಡೆಕಾಯಿ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇವು ನಮ್ಮ ದೇಹವನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದಿಂದ ರಕ್ಷಿಸುತ್ತವೆ. ಈ ಕಾಯಿ ಹೆಚ್ಚಿನ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದರಿಂದ ಸಂಧಿವಾತ ಮತ್ತು ಕೀಲು ನೋವು ಬೇಗ ಕಡಿಮೆಯಾಗುತ್ತದೆ.

ತೊಂಡೆಕಾಯಿಯಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೊಂಡೆಕಾಯಿಯಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳೂ ಇವೆ. ಇದನ್ನು ತಿನ್ನುವುದರಿಂದ ಕ್ಯಾನ್ಸರ್ ಕೋಶಗಳ ಬೆಳವಣಿಗೆ ನಿಲ್ಲುತ್ತದೆ.

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link