ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !
ಮಧುಮೇಹ ಇದ್ದಾಗ ಔಷಧಿ ತೆಗೆದುಕೊಳ್ಳುವುದಕ್ಕಿಂತ ಮುಖ್ಯವಾದುದು ನಾವು ಯಾವ ಆಹಾರ ಸೇವಿಸುತ್ತಿದ್ದೇವೆ ಎನ್ನುವುದು.ನಾವು ಸೇವಿಸುವ ಆಹಾರವೇ ರಕ್ತದಲ್ಲಿನ ಸಕ್ಕರೆಯನು ಏರುಪೇರು ಮಾಡುವುದು.
ಕೆಲವು ಆಹಾರ ಸೇವನೆ ಮಾಡಿದ ಕೂಡಲೇ ಬ್ಲಡ್ ಶುಗರ್ ಥಟ್ ಅಂತ ಇಳಿದು ಬಿಡುತ್ತದೆ.ಹೌದು ಅಂಥಹ ಒಂದು ತರಕಾರಿ ತೊಂಡೆಕಾಯಿ.
ತೊಂಡೆಕಾಯಿಯಲ್ಲಿ ಶುಗರ್ ನಿಯಂತ್ರಣಕ್ಕೆ ಸಹಾಯ ಮಾಡುವ ಎಲ್ಲಾ ಅಂಶಗಳು ಅಡಗಿವೆ.ಇದರಲ್ಲಿರುವ ಕ್ಯಾಲ್ಸಿಯಂ, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ನಾರಿನಂಶ ಶುಗರ್ ಕಂಟ್ರೋಲ್ ಮಾಡುವುದಕ್ಕೆ ಸಹಾಯ ಮಾಡುತ್ತವೆ.
ಇನ್ನು ತೊಂಡೆಕಾಯಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ತರಕಾರಿ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶಾಶ್ವತವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ತೊಂಡೆಕಾಯಿಯನ್ನು ಹೀಗೆಯೇ ತಿನ್ನಬೇಕು ಇಂತಿಷ್ಟೇ ತಿನ್ನಬೇಕು ಎನ್ನುವ ನಿಯಮವಿಲ್ಲ.ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೇಗೆ ಬೇಕಾದರೂ ಸೇವಿಸಬಹುದು. ಆದರೆ ಎಣ್ಣೆ, ಮಸಾಲೆ ಕಡಿಮೆಯಿರಬೇಕು ಅಷ್ಟೇ.
ತೊಂಡೆಕಾಯಿಯಲ್ಲಿ ಹೇರಳವಾದ ಫೈಬರ್ ಅಂಶವಿದ್ದು,ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಶುಗರ್ ಕಡಿಮೆಯಾಗಲು ಇದೂ ಒಂದು ಕಾರಣ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ