ಈ ಖ್ಯಾತ ಆ್ಯಂಕರ್‌ಗೆ ಅಪರೂಪದ ಖಾಯಿಲೆ.. ಸ್ಟೀರಾಯ್ಡ್ ಕೂಡ ಸೇವಿಸಿರುವ ನಿರೂಪಕಿ..!
ರಶ್ಮಿ ಗೌತಮ್ ವಯಸ್ಸು 36, ಇದುವರೆಗೂ ಮದುವೆಯಾಗಿಲ್ಲ. ಪ್ರೀತಿ ಅಥವಾ ಸಂಬಂಧಗಳ ಸುಳಿವೂ ಸಹ ಇಲ್ಲ. ಆದರೆ, ನಟ ಸುಡಿಗಾಳಿ ಸುಧೀರ್ ಜೊತೆ ಈಕೆಯ ಹೆಸರು ಕೇಳಿ ಬರುತ್ತಿದೆ.
ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ವದಂತಿಯೂ ಇದೆ. ಆದರೆ ಇದು ನಿಜವೇ ಎಂಬುದು ಇದುವರೆಗೂ ತಿಳಿದಿಲ್ಲ.
ಪ್ರಾಣಿ ಪ್ರಿಯೆ ರಶ್ಮಿ, ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳು, ಸಾಕುಪ್ರಾಣಿಗಳು ಮತ್ತು ಬೀದಿ ನಾಯಿಗಳ ಬಗ್ಗೆ ಆಗಾಗ ಧ್ವನಿ ಎತ್ತುತ್ತಿರುತ್ತಾರೆ.
ಅಲ್ಲದೆ, ಸಾಮಾಜಿಕವಾಗಿ ಜರುಗುವ ಅನೇಕ ಘಟನೆ, ವಿಚಾರಗಳ ಕುರಿತು ಯಾವುದೇ ಭಯವಿಲ್ಲದೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಎಂದಿಗೂ ನಕಾರಾತ್ಮಕ ಕಾಮೆಂಟ್‌ಗಳಿಗೆ ಹೆದರಿಲ್ಲ ರಶ್ಮಿ..
ಇನ್ನು ಇತ್ತೀಚಿಗೆ ರಶ್ಮಿ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಆಕೆ ‘ರುಮಟಾಯ್ಡ್ ಸಮಸ್ಯೆ’ಯಿಂದ ಬಳಲುತ್ತಿದ್ದಾಳೆ ಎಂದು ಹೇಳಲಾಗಿದೆ. ಇದು ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಬರುತ್ತದೆ ಎನ್ನಲಾಗಿದೆ..
ಈ ಸಮಸ್ಯೆಗೆ ಯಾವುದೇ ಚಿಕಿತ್ಸೆ ಇಲ್ಲ, ಆದರೆ ಜೀವನಶೈಲಿಯನ್ನು ಬದಲಾಯಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುರು.
ಆಯುರ್ವೇದ ಔಷಧಗಳನ್ನು ಬಳಸಬೇಕು. ಇತ್ತೀಚಿಗೆ ನಾನು ಈ ಕಾಯಿಲೆಗಾಗಿ ಸ್ಟೀರಾಯ್ಡ್ಗಳನ್ನು ತೆಗೆದುಕೊಂಡೆ ಎಂದು ರಶ್ಮಿ ಹೇಳಿಕೊಂಡಿದ್ದಾರೆ.
ಈ ಕಾಯಿಲೆಯಿಂದ ಬಳಲುವವರು ಒತ್ತಡ ಕಡಿಮೆ ಮಾಡಿಕೊಳ್ಳಬೇಕು, ನೆಗಟಿವಿಟಿಯಿಂದ ತುಂಬಾ ದೂರವಿರಬೇಕು, ಹಾಗಾಗಿ ರಶ್ಮಿ ಸದಾ ಪಾಸಿಟಿವ್ ಆಗಲು ಇದೇ ಕಾರಣ.
ಸಧ್ಯ ರಶ್ಮಿ ಇನ್ನೂ ಈ ಸಮಸ್ಯೆಯಿಂದ ಬಳಲುತ್ತಿದ್ದಾರಾ..? ಅಥವಾ ಇದರಿಂದ ಚೇತರಿಸಿಕೊಂಡಿದ್ದಾರೆಯೇ..? ಎಂಬುದು ಸ್ಪಷ್ಟವಾಗಿಲ್ಲ.