ಜಾಕ್ವೆಲಿನ್‌ಗೆ ಕೋರ್ಟ್‌ನಿಂದ ಸಿಹಿ ಸುದ್ದಿ: ವಿದೇಶಕ್ಕೆ ಹಾರಲಿದ್ದಾಳೆ ʼರಕ್ಕಮ್ಮʼ
ಜಾಕ್ವೆಲಿನ್ ಫೆರ್ನಾಂಡಿಸ್ ಅವರಿಗೆ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ. ನಟಿಗೆ ವಿದೇಶಕ್ಕೆ ಹೋಗದಂತೆ ದೀರ್ಘಕಾಲದವರೆಗೆ ನಿಷೇಧ ಹೇರಲಾಗಿತ್ತು. ಆದರೆ ಇದೀಗ ಅವರ ಮೇಲಿದ್ದ ನಿಷೇಧವನ್ನು ತೆಗೆದುಹಾಕಲಾಗಿದೆ. ಈ ನಿರ್ಧಾರದ ನಂತರ ಜಾಕ್ವೆಲಿನ್ ಮುಖದಲ್ಲಿ ಸಂತಸ ಮೂಡಿದೆ.
ಜಾಕ್ವೆಲಿನ್ ಫರ್ನಾಂಡೀಸ್ ಅವರು ಅಬುಧಾಬಿಯಲ್ಲಿ ನಡೆಯಲಿರುವ IIFA ಪ್ರಶಸ್ತಿ ಸಮಾರಂಭಕ್ಕೆ ಹೋಗಲು ನ್ಯಾಯಾಲಯದ ಅನುಮತಿ ಕೋರಿದ್ದರು. ವಾದ-ವಿವಾದಗಳನ್ನು ಆಲಿಸಿದ ನಂತರ ಷರತ್ತುಗಳೊಂದಿಗೆ ಮೇ 31 ರಿಂದ ಜೂನ್ 6 ರವರೆಗೆ ಜಾಕ್ವೆಲಿನ್‌ಗೆ ಅಬುಧಾಬಿಗೆ ಹೋಗಲು ನ್ಯಾಯಾಲಯ ಅನುಮತಿ ನೀಡಿದೆ. ಜಾಕ್ವೆಲಿನ್ 50 ಲಕ್ಷ ಎಫ್‌ಡಿಆರ್ ಮತ್ತು 50 ಲಕ್ಷ ರೂ ಶ್ಯೂರಿಟಿ ಮೊತ್ತವನ್ನು ಠೇವಣಿ ಇಡಬೇಕು ಎಂದು ನ್ಯಾಯಾಲಯ ಹೇಳಿದೆ.
ಈ ಷರತ್ತಿನ ಜೊತೆಗೆ ಪ್ರಯಾಣ, ವಾಸಸ್ಥಳದ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ. ಜಾಕ್ವೆಲಿನ್ ಫರ್ನಾಂಡೀಸ್ ವಾಪಸ್
ಜಾಕ್ವೆಲಿನ್ ಫರ್ನಾಂಡೀಸ್ ವಿದೇಶಕ್ಕೆ ತೆರಳಲು ಅರ್ಜಿ ಸಲ್ಲಿಸಿದ್ದನ್ನು ವಿರೋಧಿಸಿದ ಸಂಸ್ಥೆ, ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿತ್ತು. ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ 7.25 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.