ಬಿಳಿ ಕೂದಲನ್ನು ಕಪ್ಪಾಗಿಸಲು ಬೆಲ್ಲ ಮತ್ತು ಮೆಂತ್ಯ ಕಾಳು.. ಟ್ರೈ ಮಾಡಿ ನೋಡಿ ಅಚ್ಚರಿ ಪಡುವಿರಿ.!
ಸೇವಿಸುವ ಆಹಾರದಲ್ಲಿ ಪೋಷಕಾಂಶಗಳ ಕೊರತೆಯಿಂದ ಬಿಳಿ ಕೂದಲು ಬಂದರೆ, ಕೆಲವರಲ್ಲಿ ವಂಶವಾಹಿ ಕಾರಣದಿಂದ ಕೂದಲು ಬಿಳಿಯಾಗುವ ಸಾಧ್ಯತೆಗಳೂ ಇವೆ.
ನಮ್ಮಲ್ಲಿ ಅನೇಕರು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬಳಸುತ್ತಾರೆ. ಆದರೆ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ನೀವು ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಬಹುದು.
ನಿಮ್ಮ ಅಡುಗೆ ಮನೆಯಲ್ಲಿರುವ ಬೆಲ್ಲ ಮತ್ತು ಮೆಂತ್ಯ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತವೆ.
ಇವುಗಳ ಬಳಕೆಯಿಂದ ಕೂದಲು ಸಂಪೂರ್ಣವಾಗಿ ಕಪ್ಪಾಗುತ್ತವೆ. ಬೆಲ್ಲ ಮತ್ತು ಮೆಂತ್ಯ ಒಟ್ಟಿಗೆ ಬಳಸುವುದರಿಂದ ಕೂದಲು ಸುಲಭವಾಗಿ ಕಪ್ಪಾಗಲು ಪ್ರಾರಂಭಿಸುತ್ತದೆ.
ಆರೋಗ್ಯಕರ ಜೀವನಶೈಲಿ ಕೂದಲನ್ನು ಕಪ್ಪಾಗಿಸುವ ಉತ್ತಮ ವಿಧಾನ. ಬೆಲ್ಲದ ಜೊತೆಗೆ ಮೆಂತ್ಯ ಕಾಳು ತಿನ್ನುವುದರಿಂದ ಬೂದು ಕೂದಲಿನಿಂದ ಮುಕ್ತಿ ಪಡೆಯಬಹುದು.
ಮೆಂತ್ಯ ಕಾಳನ್ನು ಪುಡಿ ಮಾಡಿ ಇಟ್ಟುಕೊಳ್ಳಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಮೆಂತ್ಯದ ಪುಡಿಯೊಂದಿಗೆ ಬೆಲ್ಲವನ್ನು ಸೇವಿಸಿ. ಈ ಮನೆಮದ್ದು ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಹೊಸ ಬಿಳಿ ಕೂದಲು ರೂಪುಗೊಳ್ಳುವುದನ್ನು ತಡೆಯುತ್ತದೆ.