ಬೆಲ್ಲ ಅಡುಗೆಗೆ ಮಾತ್ರವಲ್ಲದೇ ಮುಖಕ್ಕೂ ಬಳಸಬಹುದು.. ಇದರಿಂದ ಏನಿದೆ ಪ್ರಯೋಜನ!!
)
ಸಾಮಾನ್ಯವಾಗಿ ಬೆಲ್ಲವನ್ನು ಸಿಹಿ ಪದಾರ್ಥಗಳನ್ನು ತಯಾರಿಸಲು ಬಳಸುತ್ತಾರೆ ಆದರೆ ನಿಮಗೆ ಗೊತ್ತಿರದ ಒಂದು ವಿಷಯ ಎಂದರೆ ಬೆಲ್ಲವನ್ನು ತ್ವಚೆಯ ಸಮಸ್ಯೆಗಳಿಗೆ ಸಹ ಬಳಸಬಹುದು.
)
ತಜ್ಞರು ಹೇಳುವ ಪ್ರಕಾರ ಬೆಲ್ಲವನ್ನು ಚರ್ಮದ ಸಮಸ್ಯೆ ಕಡಿಮೆ ಮಾಡಲು ಬಳಸಬಹುದು ಮತ್ತು ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
)
ಮುಖದ ಮೇಲಿನ ಕಪ್ಪು ಕಲೆಗಳನ್ನು ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ
ಬೆಲ್ಲವನ್ನು ಮುಖದ ಮೇಲಿನ ಸುಕ್ಕುಗಳು, ಗೆರೆಗಳು ಹಾಗೂ ತುರಿಕೆ ಸಮಸ್ಯೆಯನ್ನು ಇದು ಕಡಿಮೆಗೊಳಿಸುತ್ತದೆ.
ಒಂದು ಚಮಚ ಬೆಲ್ಲವನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಗೂ ನಿಂಬೆ ರಸವನ್ನು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ, ಐದು ನಿಮಿಷ ಬಿಟ್ಟು ತೊಳೆಯುವುದರಿಂದ ಮುಖ ಹೊಳೆಯುತ್ತದೆ.