Jaggery health benefits: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಲ್ಲ ತಿನ್ನುವುದರ ಪ್ರಯೋಜನ ಗೊತ್ತಾ?
ಬೆಳಗ್ಗೆ ಖಾಲಿ ಹೊಟ್ಟೆಗೆ ಬೆಲ್ಲ ತಿಂದರೆ ದೇಹದ ಎಲ್ಲಾ ಅಂಗಾಂಗಗಳು ಕ್ರಿಯಾಶೀಲವಾಗುತ್ತವೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ತಕ್ಷಣವೇ ದೂರವಾಗುತ್ತದೆ. ಬೆಲ್ಲದಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ.
ಇದು ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಸಕ್ಕರೆಗಿಂತ ಬೆಲ್ಲ ಹಾಕಿ ಮಾಡಿದ ಟೀ ಕುಡಿಯುವುದು ಆರೋಗ್ಯಕ್ಕರ ಉತ್ತಮ ಎನ್ನುತ್ತಾರೆ ತಜ್ಞರು.
ಬೆಲ್ಲವನ್ನು ತಿನ್ನುವುದು ವಾಕರಿಕೆ, ವಾಂತಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ. ಬೆಲ್ಲವನ್ನು ಯಾವಾಗ ಬೇಕಾದರೂ ತಿನ್ನಬಹುದು. ಇದು ಗಂಟಲಿನ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.
ಕೆಲವರಿಗೆ ಮೂಳೆ ಸಮಸ್ಯೆ ಮತ್ತು ಕೀಲು ನೋವು ಇರುತ್ತದೆ. ಅಂತಹವರು ಪ್ರತಿದಿನ ಬೆಲ್ಲ ತಿಂದರೆ ತುಂಬಾ ಲಾಭವಾಗುತ್ತದೆ. ಮಹಿಳೆಯರು ನಿತ್ಯವೂ ಬೆಲ್ಲ ತಿಂದರೆ ಪಿರಿಯಡ್ಸ್ ಸಮಯದಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ನೋವು ಇರುವುದಿಲ್ಲ.
ಕೆಲವರಿಗೆ ವಯಸ್ಸಿಗೆ ಮುನ್ನವೇ ಮುಖದಲ್ಲಿ ಸುಕ್ಕುಗಳು ಮತ್ತು ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಬೆಲ್ಲ ತಿಂದರೆ ಇವುಗಳಿಗೆ ಪರಿಹಾರ ಸಿಗುವುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.