ಜಾನ್ವಿ ಕಪೂರ್ ಧರಿಸಿರುವ ಆಭರಣದ ಬೆಲೆ ಎಷ್ಟು ಕೋಟಿ ಗೊತ್ತಾ? ಬೆಲೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತಿರ
Jahnvi kapoor: ಗೌರವ್ ಗುಪ್ತಾ ಕಸ್ಟಮ್ ಗೌನ್‌ನಲ್ಲಿ ಐಐಎಫ್‌ಎ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ ಜಾಹ್ನವಿ ಕಪೂರ್ ಚಿನ್ನದ ದೇವತೆಯಂತೆ ಕಾಣುತ್ತಿದ್ದರು. ಈ ಸಮಾರಂಭಕ್ಕೆ ಜಾಹ್ನವಿ ತೊಟ್ಟಿದ್ದ ಆಭರಣದ ಬೆಲೆ ತಿಳಿದರೆ ಬೆಚ್ಚಿ ಬೀಳುತ್ತೀರಿ.
ಅಬುಧಾಬಿಯಲ್ಲಿ ನಡೆದ ಇಂಟರ್‌ನ್ಯಾಶನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (ಐಐಎಫ್‌ಎ) ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ ಅನೇಕ ಸೆಲೆಬ್ರಿಟಿಗಳಲ್ಲಿ ಜಾನ್ವಿ ಕಪೂರ್ ಕೂಡ ಸೇರಿದ್ದಾರೆ. ರೆಡ್ ಕಾರ್ಪೆಟ್ ಕಾರ್ಯಕ್ರಮಕ್ಕಾಗಿ ಈ ಹಾಟ್ ಬೆಡಗಿ ಗೋಲ್ಡನ್ ಗೌರವ್ ಗುಪ್ತಾ ಗೌನ್ ಧರಿಸಿದ್ದರು. ಬಲ್ಗೇರಿ ಬ್ರಾಂಡ್‌ನಿಂದ ಐಷಾರಾಮಿ ಆಭರಣಗಳನ್ನು ಧರಿಸಿದ್ದರು.
ಜಾನ್ವಿ 2024 ರ IIFA ಪ್ರಶಸ್ತಿಗಳಿಗಾಗಿ ತನ್ನ ಗೋಲ್ಡನ್ ಲುಕ್‌ನ ಫೋಟೋಗಳನ್ನು Instagram ನಲ್ಲಿ "ಗೋಲ್ಡನ್" ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ನಟಿ ತನ್ನ ಗೋಲ್ಡ್ ಕಲರ್ ಡ್ರೆಸ್‌ನೊಂದಿಗೆ, ವರ್ಣರಂಜಿತ ವಜ್ರಗಳಿಂದ ಕೂಡಿದ ಚಿನ್ನದ ಚೋಕರ್ ನೆಕ್ಲೇಸ್, ಹಾಗೂ ವೈಪರ್ ಕಿವಿಯೋಲೆಗಳು ಮತ್ತು ವಜ್ರದ ಉಂಗುರಗಳು ಸೇರಿದಂತೆ ಬಲ್ಗರಿ ಆಭರಣಗಳೊಂದಿಗೆ ಜಾನ್ವಿ ಬೆರಗುಗೊಳಿಸಿದರು .
18 ಕ್ಯಾರೆಟ್ ಗುಲಾಬಿ ಚಿನ್ನದ ಕಿವಿಯೋಲೆಗಳು ಪೂರ್ಣ ಪೇವ್ ಡೈಮಂಡ್‌ಗಳಿಂದ ಕೂಡಿದ್ದು ಅಕ್ಷರಶಃ 8,80,000 ರೂ. ಈ ಆಭರಣಗಳು ಬಲ್ಗೇರಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ನಟಿ ಜಾನ್ಹವಿ ಈ ಸಮಾರಂಭಕ್ಕೆ ಧರಿಸಿದ್ದ ಚೋಕರ್ ನೆಕ್ಲೇಸ್ ರೂ.8,00,00,000 ಮೌಲ್ಯದ್ದಾಗಿದೆ. ಇನ್ನೂ ಈ ಆಭರಣದ ಬೆಲೆಯನ್ನು ಕೇಳಿದ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.