ವರ್ಷಕ್ಕೆ ಒಂದೇ ಬಾರಿ ಸಿಗುವ ಈ ಹಣ್ಣು ಕಣ್ಣಿನ ಆರೋಗ್ಯಕ್ಕೆ ಸಂಜೀವಿನಿಯಿದ್ದಂತೆ... ತಿಂದರೆ ಎಷ್ಟೇ ಕಣ್ಣು ಮಂಜಾಗುತ್ತಿದ್ದರೂ ಶಾರ್ಪ್ ಆಗುತ್ತೆ! ಕನ್ನಡಕ ಬೇಡವೇ ಬೇಡ
ಕೊರೊನಾ ಬಳಿಕ ಅನೇಕ ಕಣ್ಣಿನ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ವರದಿಯ ಪ್ರಕಾರ, ಕೊರೊನಾ ನಂತರ 28 ಕೋಟಿ ಜನರ ದೃಷ್ಟಿ ದುರ್ಬಲವಾಗಿದೆ. ದಿನಕ್ಕೆ 6 ಗಂಟೆಗಳಿಗಿಂತ ಹೆಚ್ಚು ಕಾಲ ಗ್ಯಾಜೆಟ್ʼಗಳನ್ನು ಬಳಸುವುದರಿಂದ ಕಣ್ಣಿನ ಸಮಸ್ಯೆಗಳು ಉಂಟಾಗುತ್ತಿವೆ. ಇದರಲ್ಲಿ 10-15 ವರ್ಷದ ಮಕ್ಕಳು ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ವರದಿ ಬಹಿರಂಗಪಡಿಸಿವೆ.
ಇನ್ನು ಕಣ್ಣುಗಳು ಆರೋಗ್ಯವಾಗಿರಲು ಮತ್ತು ಕಣ್ಣಿನ ಸಂಬಂಧಿತ ಪ್ರತಿಯೊಂದು ಸಮಸ್ಯೆಯನ್ನು ತೊಡೆದುಹಾಕಲು, ನೀವು ಹಲವಾರು ರೀತಿಯ ಔಷಧಿಗಳನ್ನು ತೆಗೆದುಕೊಳ್ಳುತ್ತಿರಬಹುದು. ಆದರೆ ಇದರ ಬದಲಾಗಿ ಕೆಲವೊಂದು ಹಣ್ಣುಗಳನ್ನು ಸೇವಿಸುವ ಮೂಲಕ ದೃಷ್ಟಿಯನ್ನು ಸುಧಾರಿಸಬಹುದು.
ಜಾವಾ ಪ್ಲಮ್, ಜಾಮೂನ್ ಫ್ರೂಟ್ ಎಂದೆಲ್ಲಾ ಕರೆಯಲ್ಪಡುವ ಈ ಹಣ್ಣನ್ನು ಆಡುಭಾಷೆಯಲ್ಲಿ ನೇರಳೆ ಹಣ್ಣೆಂದು ಕರೆಯಲಾಗುತ್ತದೆ. ಇದು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ.
ನೇರಳೆ ಹಣ್ಣಿನಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುವ ಅಂಶಗಳಿವೆ. ಜೊತೆಗೆ ಕಣ್ಣುಗಳನ್ನು ಆರೋಗ್ಯವಾಗಿಡಲು ಮತ್ತು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಈ ರೀತಿ ಸೇವಿಸಿದರೆ ಫಲಿತಾಂಶ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.
ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್‌ಗಳು ಮತ್ತು ಆಂಟಿಆಕ್ಸಿಡೆಂಟ್ʼಗಳಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ಇದು ಹೆಚ್ಚಿನ ಪ್ರಮಾಣದ ಕ್ಯಾರೋಟಿನ್ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ, ಇದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ನೇರಳೆ ಹಣ್ಣು ಸೀಸನಲ್ ಫ್ರೂಟ್ ಆಗಿದ್ದು, ಬೆಳೆಯುವ ಸಂದರ್ಭದಲ್ಲಿ ಸೇವಿಸಿದರೆ ಅದರ ಪ್ರಭಾವ ವರುಷಗಳ ಕಾಲ ಹಾಗೇ ಇರುತ್ತದೆ. ಇನ್ನು ಇದಕ್ಕೆ ದಾಳಿಂಬೆ, ಬೀಟ್ರೂಟ್, ಕ್ಯಾರೆಟ್ ಅನ್ನು ಸಣ್ಣ ಪ್ರಮಾಣದಲ್ಲಿ ತೆಗೆದುಕೊಂಡು ಅವುಗಳನ್ನು ಗ್ರೈಂಡರ್ʼನಲ್ಲಿ ಹಾಕಿ ರುಬ್ಬಿ ಜ್ಯೂಸ್ ಮಾಡಿಯೂ ಕುಡಿಯಬಹುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.