Janaki Jayanti 2024: ಸೀತಾ ಜಯಂತಿಯಂದು ಈ ಒಂದು ಕೆಲಸ ಮಾಡಿದ್ರೆ ನಿಮ್ಮ ಮನೆಗೆ ಅದೃಷ್ಟ ಬರುತ್ತದೆ!
ಜಾನಕಿ ಜಯಂತಿಯನ್ನು ಫಾಲ್ಗುಣ ಮಾಸದಲ್ಲಿ ಆಚರಿಸಲಾಗುತ್ತದೆ. ಈ ದಿನ ಸೀತಾ ದೇವಿಯು ರಾಜ ಜನಕನ ಮಗಳಾಗಿ ಜನಿಸಿದಳು. ತಾಯಿ ಸೀತೆ ಭೂಮಿಯ ಮಗಳು, ಅವಳು ಭೂಮಿಯಿಂದ ಜನ್ಮ ತಾಳಿದಳು.
ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಜಾನಕಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಜಾನಕಿ ಜಯಂತಿಯನ್ನು ಮಾರ್ಚ್ 4ರ ಸೋಮವಾರದಂದು ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ ಫಾಲ್ಗುಣ ಕೃಷ್ಣಪಕ್ಷದ ಅಷ್ಟಮಿ ತಿಥಿಯು ಮಾರ್ಚ್ 3ರರಂದು ಬೆಳಗ್ಗೆ 8.44ರಿಂದ ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 4ರಂದು ಬೆಳಗ್ಗೆ 8.49ರವರೆಗೆ ಇರುತ್ತದೆ. ಹುಟ್ಟಿದ ದಿನಾಂಕದ ಪ್ರಕಾರ ಸೀತಾ ಜಯಂತಿಯನ್ನು ಮಾರ್ಚ್ 4ರಂದು ಆಚರಿಸಲಾಗುತ್ತದೆ. ಜಾನಕಿ ಜಯಂತಿಯಂದು ಸೀತಾ ಮಾತೆಯನ್ನು ಪೂಜಿಸಲು ಮಾರ್ಚ್ 4ರಂದು ಬೆಳಗ್ಗೆ 9.38ರಿಂದ 11.05ರವರೆಗೆ ಶುಭ ಮುಹೂರ್ತವಿರುತ್ತದೆ.
ಸೀತಾ ದೇವಿಯು ತಾಯಿ ಲಕ್ಷ್ಮಿದೇವಿಯ ಅವತಾರವೆಂದು ಹೇಳಲಾಗುತ್ತದೆ. ಜಾನಕಿ ಜಯಂತಿಯಂದು ಸೀತಾದೇವಿಯನ್ನು ಪೂಜಿಸುವುದರಿಂದ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಅಲ್ಲದೆ ಜಾನಕಿ ಜಯಂತಿಯ ದಿನದಂದು ವಿವಾಹಿತ ಸ್ತ್ರೀಯರು ಮದುವೆಯ ವಸ್ತುಗಳನ್ನು ದಾನ ಮಾಡಿದರೆ ಶುಭ ಫಲಗಳು ದೊರೆಯುತ್ತವೆ. ಹೀಗೆ ಮಾಡುವುದರಿಂದ ಗಂಡನ ಆಯುಷ್ಯ ದೀರ್ಘವಾಗುತ್ತದೆ.
ಜನಕ ರಾಜನು ಮಗುವನ್ನು ಹೊಂದಲು ಯಾಗವನ್ನು ಮಾಡಿದನು ಮತ್ತು ನೆಲವನ್ನು ಅಗೆದ ನಂತರ ಅವನಿಗೆ ಹೆಣ್ಣು ಮಗು ಸಿಕ್ಕಿತು. ಜನಕನಿಗೆ ಸೀತಾದೇವಿ ದೈವಿಕ ಮಗುವೆಂದು ತಿಳಿದುಬಂತು. ಸೀತೆ ತನ್ನ ಬಾಲ್ಯದಲ್ಲಿ ಆಟವಾಡುವಾಗ ಶಿವನ ಧನುಸ್ಸನ್ನು ಎತ್ತಿದ್ದಳು, ಅದು ತುಂಬಾ ಭಾರವಾಗಿತ್ತು. ಆದುದರಿಂದಲೇ ರಾಜ ಜನಕನು ತನ್ನ ಮಗಳು ಸೀತೆಯ ಸ್ವಯಂವರದ ಸಮಯದಲ್ಲಿ ಭಗವಾನ್ ಶಿವ ಧನಸ್ಸು ಮುರಿಯಲು ಷರತ್ತು ವಿಧಿಸಿದ್ದನು. ಆಗ ರಾಜ ಜನಕನಿಗೆ ಸೀತಾಮಾತೆ ದೈವಿಕ ಮಗಳು ಎಂದು ತಿಳಿಯಿತು. ನಂತರ ಸೀತೆಗೆ ಆಯೋಜಿಸಿದ್ದ ಸ್ವಯಂವರದಲ್ಲಿ ಶ್ರೀರಾಮನು ಶಿವ ಧನಸ್ಸನ್ನು ಮುರಿದು ವಿಜಯವನ್ನು ಸಾಧಿಸುತ್ತಾನೆ. ಬಳಿಕ ಸೀತಾಮಾತೆಯನ್ನು ಮದುವೆಯಾದನು.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.)