ದಿಪಾವಳಿಗೆ ಡಬಲ್‌ ಧಮಾಕ..! ಅಯ್ಯೋ.. ಯಾರನ್ನ ನೋಡೋದು ಯಾರನ್ನ ಬಿಡೋದು ಎಂದ ಫ್ಯಾನ್ಸ್‌..

Wed, 23 Oct 2024-7:28 pm,

ಮನೀಶ್ ಮಲ್ಹೋತ್ರಾ ಮಂಗಳವಾರ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ವೇಳೆ ಬಾಲಿವುಡ್ ಸೆಲೆಬ್ರಿಟಿಗಳ ಸೌಂದರ್ಯ ಪ್ರದರ್ಶನವೂ ನಡೆಯಿತು.   

ರೇಖಾ, ರವೀನಾ ಟಂಡನ್, ಶಿಲ್ಪಾ ಶೆಟ್ಟಿ, ನೀಲಂ ಕೊಠಾರಿ, ಮಹೀಪ್ ಕಪೂರ್, ಶಾಲಿನಿ, ಖುಷಿ ಕಪೂರ್, ಅನನ್ಯಾ ಪಾಂಡೆ, ಸುಹಾನಾ ಖಾನ್, ಗೌರಿ ಖಾನ್ ಮುಂತಾದ ತಾರೆಗಳು ಈ ಶೋನಲ್ಲಿದ್ದರು.  

ಈ ಎಲ್ಲಾ ಸೆಲೆಬ್ರಿಟಿಗಳು ವಿಭಿನ್ನ ನೋಟವನ್ನು ಹೊಂದಿದ್ದರು. ಆದರೆ ಎಲ್ಲರ ಕಣ್ಣು ನೆಟ್ಟಿದ್ದು ಇಬ್ಬರು ಸುಂದರಿಯರ ಸೀರೆಯ ಮೇಲೆ.   

ಮನಮೋಹಕ ಶೈಲಿ, ಅದ್ಭುತ ಮೈಕಟ್ಟು, ಕ್ಯೂಟ್‌ ಸ್ಮೈಲ್‌ನಲ್ಲಿ ನೋರಾ ಫತೇಹಿ ಮತ್ತು ಜಾನ್ವಿ ಕಪೂರ್ ನೋಟ ಅದ್ಭುತವಾಗಿತ್ತು. ಇಬ್ಬರೂ ಒಬ್ಬರಿಗಿಂತ ಒಬ್ಬರು ಸಖತ್ತಾಗಿ ಕಾಣುತ್ತಿದ್ದರು.  

ಜಾನ್ವಿ ಕಪೂರ್ ನವಿಲು ಬಣ್ಣದ ಸೀಕ್ವೆನ್ಸ್ ಸೀರೆಯನ್ನು ಧರಿಸಿದ್ದರು. ಬ್ಯಾಕ್‌ಲೆಸ್ ಬ್ಲೌಸ್ ಹಾಕಿಕೊಂಡು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು... ಈ ಸೀರೆ ಜಾನ್ವಿಗೆ ಹೇಳಿ ಮಾಡಿಸಿದಂತಿತ್ತು..   

ನೋರಾ ಫತೇಹಿ ಸಹ ಜಾನ್ವಿ ಕಪೂರ್ ಸೌಂದರ್ಯಕ್ಕೆ ಸ್ಪರ್ಧೆ ನೀಡುವಂತಿದ್ದರು.. ಹೊಳೆಯುವ ಸೀರೆ ಉಟ್ಟು ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಂಡರು.    

ಈ ಪಾರ್ಟಿಗೆ ಜಾನ್ವಿ ಕಪೂರ್ ಜೊತೆಗೆ ಅವರ ತಂಗಿ ಖುಷಿ ಕಪೂರ್ ಕೂಡ ಬಂದಿದ್ದರು. ಕಪ್ಪು ಬಣ್ಣದ ಸೀರೆಯಲ್ಲಿಯೂ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.   

ಒಟ್ಟಿನಲ್ಲಿ ಬಾಲಿವುಡ್‌ ಮಂದಿ ತುಂಬಿದ್ದ ಕಾರ್ಯಕ್ರಮದಲ್ಲಿ ಜಾನ್ವಿ ಮತ್ತು ನೋರಾ ಶೋನ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದು, ಎಲ್ಲರ ಕಣ್ಣು ಈ ಸುಂದರಿಯರ ಮೇಲಿತ್ತು..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link