ಶೈನಿಂಗ್‌ ಡ್ರೇಸ್‌ನಲ್ಲಿ ಜಾನ್ವಿ ಮಿಂಚಿಂಗ್‌..! ಅಬ್ಬಬ್ಬಾ.. ಎಷ್ಟು ಕ್ಯೂಟ್‌ ಅಲ್ವಾ..?

Fri, 13 Oct 2023-9:19 pm,

ಜಾನ್ವಿ ಕಪೂರ್ ಬಹುಭಾಷಾ ನಟಿ ಶ್ರೀದೇವಿ ಮಗಳು ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಅಮ್ಮನಂತೆ ಜಾನ್ವಿ ಕೂಡ ಅತಿಲೋಕ ಸುಂದರಿ.  

ಜಾನ್ವಿ ‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು. ಸಧ್ಯ ಸೌತ್‌ ಸಿನಿರಂಗಕ್ಕೂ ಕಾಲಿಟ್ಟಿದ್ದಾರೆ.  

ಜಾನ್ವಿ ತೆಲುಗಿನಲ್ಲಿ ಎನ್‌ಟಿಆರ್ ಜೊತೆ ದೇವರ ಸಿನಿಮಾ ಮೂಲಕ ಸೌತ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.   

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್‌ಗಳ ಮೂಲಕ ಗಮನಸೆಳೆಯುತ್ತಿತ್ತಾರೆ.  

ಸಧ್ಯ ಝಗಮಗಿಸುವ ಡ್ರೇಸ್‌ನಲ್ಲಿ ದೇವಲೋಕದ ಅಪ್ಸರೆಯಂತೆ ಕಂಗೊಳಿಸುತ್ತಿರುವ ಜಾನ್ವಿ ಫೋಟೋಸ್‌ ಪ್ಯಾನ್ಸ್‌ಗೆ ಸಖತ್‌ ಇಷ್ಟವಾಗಿವೆ.  

ʼದೇವರʼ ಸಿನಿಮಾ ನಂತರ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸಲು ಜಾನ್ವಿಗೆ ಅವಕಾಶ ಸಿಕ್ಕಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್‌ನ ಸಿನಿಮಾದಲ್ಲಿ ನಟಿಸಲಿದ್ದಾರೆ.  

ಅಲ್ಲದೆ, ಮೆಗಾಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಮುಂಬರುವ ಸಿನಿಮಾದಲ್ಲಿ ಜಾನ್ವಿ ನಟಿಸಲಿದ್ದಾರೆ ಎನ್ನಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link