Janhvi Kapoor: ಸೀರೆಯಲ್ಲಿ ತಾಯಿ ಶ್ರೀದೇವಿಯಂತೆ ಗಮನ ಸೆಳೆದ ಜಾನ್ವಿ!

Sat, 09 Mar 2024-2:43 pm,

ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ವೈಟ್ ಮೇಲೆ ಆರೆಂಜ್ ಕಲರ್ ದೊಡ್ಡ ಫ್ಲವರ್‌ ಪ್ರಿಂಟ್‌ ಸ್ಯಾರಿ ಹಾಗೂ ಆರೆಂಜ್ ಸ್ಲೀವ್ಲೆಸ್ ಬ್ಲೌಸ್ ಧರಿಸಿ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ನಟಿ ಜಾನ್ವಿ ಕಪೂರ್‌ ತಮ್ಮ ಕಿವಿಗೆ ಸ್ಟೆಡ್‌ ಧರಿಸುವುದರ ಜೊತೆಗೆ ಆಕರ್ಷಕವಾದ ನೆಕ್ಲೆಸ್ ಹಾಕಿಕೊಂಡಿದ್ದರು. ಹಾಗೆಯೇ ಈ ನಟಿ ಹಣೆಗೆ ಪುಟ್ಟದೊಂದು ಕೆಂಪು ಬಿಂದೆಯನ್ನು ಸಹ ಇಟ್ಟುಕೊಂಡಿದ್ದರು.

ಜಾನ್ವಿ ಕಪೂರ್ ಸೀರೆಯಲ್ಲಿ ಸೇಮ್‌ ತಾಯಿ ಶ್ರೀದೇವಿಯಂತೆ ರೆಟ್ರೋ ಲುಕ್‌ನಲ್ಲಿ ಸುಂದವಾಗಿ ಕಾಣುತ್ತಿದ್ದು, ಈ ಫೋಟೋಗಳ್ನು ಸೋಶಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಜಾನ್ವಿ ಸೀರೆಗೆ ಹೋಲುವಂತೆ ನ್ಯೂಡ್‌ ಮೇಕಪ್‌ ಮಾಡಿಕೊಂಡು ಲಿಪ್ಸ್ಟಕ್‌ ಸಹ ಹಚ್ಚಿಕೊಂಡು ಎಲ್ಲರ ಕಣ್ಮನ ಸೆಳೆಯುವಂತೆ ರೆಡಿಯಾಗಿದ್ದರು.

ಶ್ರೀದೇವಿ ಪುತ್ರಿ ಜಾನ್ವಿ ಪೋಸ್ಟ್‌ಗೆ ಈಗಾಗಲೇ ಏಳು ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಪಡೆದುಕೊಳ್ಳುವುದರ ಜೊತೆಗೆ ರಾಶಿ ರಾಶಿ ಕಮೆಂಟ್‌ಗಳ ಸುರಿಮಳೆಯೇ ಹರಿದು ಬಂದಿದೆ.

ನಟಿ ಜಾನ್ವಿ ಕಪೂರ್‌ ಅನ್ನು ಸೀರೆಯಲ್ಲಿ ನೋಡಿದ ಅಭಿಮಾನಿಗಳು ಅಮ್ಮ ಶ್ರೀದೇವಿಯನ್ನೇ ತುಂಬಾ ಹೋಲುತ್ತಿದ್ದಾರೆ ಎಂದು ಕಮೆಂಟ್‌ ಬರೆದು ಹಾಕಿದ್ದಾರೆ.

ಜಾನ್ವಿ ಕಪೂರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳೊಂದಿಗೆ ಫ್ಯಾನ್ಸ್‌ನ ಎಂಟ್ರಟೇನ್‌ ಮಾಡುವುದರ ಜೊತೆಗ  ವೆಬ್ ಸೀರೀಸ್, ಕಮರ್ಷಿಯಲ್ ಜಾಹೀರಾತುಗಳು ಮತ್ತು ಪ್ರೊಮೋಷನ್‌ಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link