Janhvi Kapoor: 13 ವರ್ಷದವಳಿದ್ದಾಗಲೇ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ ಎಂದ ನಟಿ ಜಾನ್ವಿ ಕಪೂರ್ !

Sun, 19 May 2024-2:13 pm,

ನಟಿ ಜಾನ್ವಿ ಕಪೂರ್ ಚಿಕ್ಕ ವಯಸ್ಸಿನಲ್ಲೇ ತಾನು ಅನುಭವಿಸಿದ ಕಿರುಕುಳದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಹಲವು ವರ್ಷಗಳ ಹಿಂದೆ ನಡೆದ ಕೆಟ್ಟ ಘಟನೆಯನ್ನು ನೆನೆದು ಭಾವುಕರಾಗಿದ್ದಾರೆ.

ನನಗೆ 12-13 ವರ್ಷ. ಆಗಲೇ ನನ್ನ ಫೋಟೋ ಅಶ್ಲೀಲ ವೆಬ್​ಸೈಟ್‌ಗಳಲ್ಲಿ ಹರಿದಾಡಿತ್ತು. ಪಾಪಾರಾಜಿಗಳು ತೆಗೆದ ಫೋಟೋ ನೋಡಿ ಕಣ್ಣೀರು ಹಾಕಿದ್ದೆ ಎಂದು ನಟಿ ಜಾನ್ವಿ ಕಪೂರ್ ಹೇಳಿದ್ದಾರೆ.

ವಯಸ್ಕರ ವೆಬ್ ಸೈಟ್ ಗಳಲ್ಲಿ ನನ್ನ ಫೋಟೋ ನೋಡಿ ದಂಗಾಗಿದ್ದೆ. ಆ ಫೋಟೋಗಳನ್ನು ನೋಡಿದ ಬಳಿಕ ನಮ್ಮ ಶಾಲೆಯಲ್ಲಿ ಹುಡುಗರು ಕೂಡ ನನ್ನನ್ನು ಗೇಲಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ನಟಿಯರು ಮತ್ತು ಅವರ ಕುಟುಂಬ ಇಂಡಸ್ಟ್ರಿಯಲ್ಲಿ ಹಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಜಾನ್ವಿ ಕಪೂರ್ ಮಿಸ್ಟರ್ ಅಂಡ್ ಮಿಸಸ್ ಮಹಿ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಜಾನ್ವಿ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link