Janhvi Kapoor: ಸೌತ್‌ ಸಿನಿಮಾಗೆ ಜಾನ್ವಿ ಪಡೆದ ಸಂಭಾವನೆ ಎಷ್ಟು ಗೊತ್ತೇ.. ರಶ್ಮಿಕಾ, ಶ್ರೀಲೀಲಾ ಕೂಡ ಹಿಂದೆಬಿದ್ರಾ?

Sat, 10 Feb 2024-11:27 am,

ಶ್ರೀದೇವಿಯ ಮಗಳು ಜಾನ್ವಿ ಕಪೂರ್ ಧಡಕ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು. ಆ ಸಿನಿಮಾ ಹಿಟ್ ಆದ ನಂತರ ಹಲವು ಹಿಂದಿ ಸಿನಿಮಾಗಳನ್ನು ಮಾಡಿದರು.

ಜಾನ್ವಿ ಸದ್ಯ ತೆಲುಗಿನಲ್ಲಿ ಜೂನಿಯರ್ ಎನ್ ಟಿಆರ್ ಅಭಿನಯದ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಮೀನುಗಾರನ ಮಗಳಾಗಿ ನಟಿಸುತ್ತಿದ್ದಾರೆ. 

ಕಲ್ಯಾಣ್ ರಾಮ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಬುಚ್ಚಿಬಾಬು ಸನಾ ನಿರ್ದೇಶನದಲ್ಲಿ ದೇವರ ಸಿನಿಮಾ ರೆಡಿಯಾಗುತ್ತಿದೆ. ಈ ಚಿತ್ರಕ್ಕೆ ಜಾನ್ವಿ ಕಪೂರ್ ಪಡೆದ ಸಂಭಾವನೆ ಹೆಚ್ಚು ಚರ್ಚೆಯಾಗುತ್ತಿದೆ.

ಜಾನ್ವಿ ಕಪೂರ್‌ ದೇವರ ಚಿತ್ರಕ್ಕೆ 6 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ತೆಲುಗಿನ ಸ್ಟಾರ್ ಹೀರೋಯಿನ್ ಶ್ರೀಲೀಲಾ ಹಾಗೂ ರಶ್ಮಿಕಾ ಮಂದಣ್ಣ ಅವರನ್ನು ಮೀರಿಸಿದ್ದಾರೆ.

ಶ್ರೀಲೀಲಾ1.5 ರಿಂದ 2 ಕೋಟಿ  ಸಂಭಾವನೆ ಪಡೆಯುತ್ತಾರೆ. ಹಾಗೂ ಬಾಲಿವುಡ್ ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ 4 ರಿಂದ 5 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ. ಜಾನ್ವಿ ಕಪೂರ್‌ ಈಗ ಅವರನ್ನೂ ಹಿಂದಿಕ್ಕಿದ್ದಾರೆ ಎನ್ನಲಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link