Janhvi Kapoor : ಸಾಮಿ.. ಸಾಮಿ.. ಹಾಡಿಗೆ ಸೊಂಟ ಬಳುಕಿಸಿದ ಜಾನ್ವಿ..!

Wed, 23 Nov 2022-1:10 pm,

ದುಬೈನಲ್ಲಿ ನಡೆದ ಫಿಲ್ಮ್‌ಫೇರ್ ಮಿಡಲ್ ಈಸ್ಟ್ ಅವಾರ್ಡ್ಸ್ 2022ನಲ್ಲಿ (Filmfare Middle East Achievers Night) ಹಿಂದಿ ಹಾಡುಗಳಿಗೆ ಮೈಬಳುಕಿಸಿದ ಜಾನ್ವಿ ಈ ವರ್ಷದ ಮೋಸ್ಟ್‌ ಹಿಟ್‌ ಸಾಂಗ್‌ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 

ಈ ಕುರಿತ ಫೋಟೋಗಳನ್ನು ಜಾನ್ವಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾರ್ಯಕ್ರಮದ ವೇದಿಕೆಯ ಮೇಲೆ ಹಸಿರು ಮತ್ತು ಕೆಂಪು ಬಣ್ಣದ ಉಡುಗೆಯಲ್ಲಿ ಮಿಂಚಿರುವ ಹಾಟ್‌ ಡಾಲ್‌ ಫೋಟೋಸ್‌ ನೋಡಿದ ಅವರ ಫ್ಯಾನ್ಸ್‌ ಸೂಪರ್‌ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಸದಾ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ದಢಕ್‌ ಬೆಡಗಿ, ಇತ್ತೀಚಿಗೆ ನೈಟ್‌ ಫನ್‌ ಅಟ್‌ ದುಬೈ ಅಂತ ಶಿರ್ಷಿಕೆ ಕೊಟ್ಟು ಕೆಲ ಹಾಟ್‌ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದರು. ಫೋಟೋಸ್‌ ನೋಡಿದ ಅವರ ಅಭಿಮಾನಿಗಳು ಕಿಲ್ಲಿಂಗ್‌, ಫೈರ್‌, ಸೂಪರ್‌, ಸೇರಿದಂತೆ ಹಾರ್ಟ್‌ ಇಮೋಜಿಯನ್ನು ಕೊಟ್ಟಿದ್ದಾರೆ. 

ಸದ್ಯ ಸಾಮಿ ಸಾಮಿ ವಿಡಿಯೋ ಯಾವಾಗ ರಿಲೀಸ್‌ ಆಗುತ್ತೆ ಅಂತ ಕಾಯುತ್ತಿದ್ದಾರೆ. ಆದ್ರೆ ಜಾನ್ವಿ ಪ್ರದರ್ಶನ ವಿಡಿಯೋ ಈಗಾಗಲೇ ಯೂಟ್ಯೂಬ್‌ಗಳಲ್ಲಿ ಲೀಕ್‌ ಆಗಿ ವೈರಲ್‌ ಆಗುತ್ತಿದೆ.

ಸದ್ಯ ಜಾನ್ವಿ ʼಮಿಲಿʼ ಚಿತ್ರದ ಯಶಸ್ಸನ್ನು ಅನುಭವಿಸುತ್ತಿದ್ದಾರೆ. ಇದು 2019 ರ ಮಲಯಾಳಂ ಹಿಟ್ 'ಹೆಲೆನ್' ನ ಹಿಂದಿ ರಿಮೇಕ್ ಆಗಿದೆ. ಮಿಲಿಯನ್ನು ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಮಿಸ್ಟರ್' ಚಿತ್ರದಲ್ಲಿ ಜಾನ್ವಿ ನಟಿಸಿದ್ದಾರೆ ಮತ್ತು ಮಿಸೆಸ್ ಮಾಹಿ', ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ಜೊತೆಗೆ ಜಾನ್ವಿ ಕಪೂರ್‌ ಕೂಡ ಅಭಿನಯಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link