Janmashtami 2022 In August: ಜನ್ಮಾಷ್ಟಮಿಯಂದು ತನ್ನ ಕೃಪಾವೃಷ್ಟಿ ಬೀರಲು ಸಿದ್ಧನಾಗಿದ್ದಾನೆ ಶ್ರೀಕೃಷ್ಣ, ಈ ವಸ್ತುಗಳನ್ನು ಖರೀದಿಸುವುದು ಶುಭಕರ
1. ಹಸು ಅಥವಾ ಕರು - ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರೀ ಕೃಷ್ಣನಿಗೆ ಹಸುಗಳು ಮತ್ತು ಕರುಗಳೆಂದರೆ ತುಂಬಾ ಇಷ್ಟ ಎನ್ನಲಾಗುತ್ತದೆ. ಇದೇ ಕಾರಣದಿಂದ 'ಗೌ ವಿಶ್ವಸ್ಯ ಮಾತರಃ' ಎಂದು ಹೇಳಲಾಗುತ್ತದೆ. ಹೀಗಾಗಿ ಜನ್ಮಾಷ್ಟಮಿಯ ದಿನ ಹಸು ಅಥವಾ ಕರುವಿನ ಚಿತ್ರವನ್ನು ಖರೀದಿಸಿ ದೇವಸ್ಥಾನದಲ್ಲಿ ಇಡುವುದರಿಂದ ಸಂತಾನ ಸುಖ ಪ್ರಾಪ್ತಿಯಾಗುತ್ತದೆ.
2. ಕೊಳಲು - ಶ್ರೀಕೃಷ್ಣ ಮತ್ತು ಕೊಳಲಿನ ನಡುವೆ ಆಳವಾದ ಸಂಭಂಧವಿದೆ. ಜನ್ಮಾಷ್ಟಮಿಯ ದಿನ ಕೃಷ್ಣನಿಗೆ ಬೆಳ್ಳಿಯ ಕೊಳಲು ಅರ್ಪಿಸುವುದರಿಂದ ವ್ಯಕ್ತಿಯ ಮನೆಗೆ ಬಡತನ ಬರುವುದಿಲ್ಲ ಎನ್ನಲಾಗುತ್ತದೆ. ಈ ಕೊಳಲನ್ನು ತಿಜೋರಿಯಲ್ಲಿ ಅಥವಾ ಹಣ ಇದುವ ಜಾಗದಲ್ಲಿ ಇರಿಸಿದರೆ ಹೆಚ್ಚು ಪ್ರಯೋಜನಕಾರಿ ಎಂದು ನಂಬಲಾಗಿದೆ.
3. ಶಂಖ - ಪೌರಾಣಿಕ ಗ್ರಂಥಗಳ ಪ್ರಕಾರ, ಶಂಖವನ್ನು ತಾಯಿ ಲಕ್ಷ್ಮಿಯ ವಾಸಸ್ಥಾನವೆಂದು ನಂಬಲಾಗಿದೆ. ಇನ್ನೊಂದೆಡೆ ಶ್ರೀ ಕೃಷ್ಣ ವಿಷ್ಣುವಿನ ಅವತಾರನಾಗಿದ್ದಾನೆ ಎಂದು ಹೇಳಲಾಗುತ್ತದೆ. ಈ ದಿನ ಶಂಖದಿಂದ ಬಾಲಗೋಪಾಲನಿಗೆ ಅಭಿಷೇಕ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶಂಖದಿಂದ ಹೊರಹೊಮ್ಮುವ ನಾದ ಮನೆಯ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ ಎಂದು ನಂಬಲಾಗಿದೆ.
4. ನವಿಲುಗರಿ - ಸಾಮಾನ್ಯವಾಗಿ ಜನ್ಮಾಷ್ಟಮಿಯ ದಿನ ಶ್ರೀಕೃಷ್ಣನಿಗೆ ಇಷ್ಟವಾಗುವ ವಸ್ತುಗಳನ್ನು ಮನೆಗೆ ತರುವುದು ಶ್ರೇಯಸ್ಕರ ಎನ್ನಲಾಗುತ್ತದೆ. ಹೀಗಾಗಿ ಶ್ರೀಕೃಷ್ಣನಿಗೆ ಇಷ್ಟವಾಗುವ ವಸ್ತುಗಳಲ್ಲಿ ನವಿಲು ಗರಿ ಕೂಡ ಒಂದು. ಈ ದಿನ ನವಿಲು ಗರಿಗಳನ್ನು ಖರೀದಿಸಿ ಮನೆಗೆ ತಂದರೆ ದುಷ್ಟ ಶಕ್ತಿಗಳು ನಾಶವಾಗುತ್ತವೆ ಅಥವಾ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ. ಮನೆಯ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಹಾಗೆಯೇ ಮನೆಯಲ್ಲಿ ನವಿಲು ಗರಿಗಳಿದ್ದರೆ ಕಾಲ ಸರಪದೋಷ ಕೂಡ ನಿವಾರಣೆಯಾಗುತ್ತದೆ.
5. ವೈಜಯಂತಿ ಮಾಲೆ - ಶಾಸ್ತ್ರಗಳ ಪ್ರಕಾರ, ಶ್ರೀ ಕೃಷ್ಣನು ಯಾವಾಗಲೂ ತನ್ನ ಕೊರಳಲ್ಲಿ ವೈಜಯಂತಿ ಮಾಲೆಯನ್ನು ಧರಿಸುತ್ತಾನೆ ಎಂದು ಹೇಳಲಾಗುತ್ತದೆ. ಹೀಗಾಗಿ ವೈಜಯಂತಿ ಮಾಲೆಯನ್ನು ಮನೆಗೆ ತರುವುದು ಶ್ರೇಯಸ್ಕರ, ಇದನ್ನು ತಾಯಿ ಲಕ್ಷ್ಮಿಯ ವಾಸಸ್ಥಾನ ಎಂದೂ ಕೂಡ ಹೇಳಲಾಗುತ್ತದೆ. ಇದನ್ನು ಧರಿಸಿದರೆ ಬಾಲಗೋಪಾಲನ ಕೃಪೆಯಿಂದ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ.