ʻಈʼ ಒಂದು ಮಸಾಲೆ ಪದಾರ್ಥ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ..!
Spice For weightloss: ಇತ್ತೀಚೆಗೆ ಆಹಾರ ಕ್ರಮ ಹಾಗೂ ಜೀವನಶೈಲಿಯ ಕಾರಣದಿಂದಾಗಿ ಅನೇಕರು ತೂಕ ಏರಿಕೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಮ್ಮ ಆಹಾರ ಕ್ರಮದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳುವ ಮೂಲಕ ನೀವು ನಿಮ್ಮ ತೂಕವನ್ನು ಕರಗಿಸಬಹುದು.
ಮಸಾಲೆ ಪದಾರ್ಥಗಳು ನಿಮ್ಮ ಆಹಾರವನ್ನು ರುಚಿಯಾಗಿಸಲು ಅಷ್ಟೆ ಅಲ್ಲ ಅದಕ್ಕೆ ಘಮ ನೀಡುವಲ್ಲಿ ಪ್ರಾಮುಖ್ಯತೆ ವಹಿಸುತ್ತದೆ. ಆದರೆ, ಇದೇ ಮಸಾಲೆ ಪದಾರ್ಥಗಳು ನಿಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಾ?
ಬಿರಿಯಾನಿಯನ್ನು ರುಚಿಯಾಗಿಸುವಲ್ಲಿ ಜಾಪತ್ರೆ ಎಲೆ ಎಷ್ಟು ಮುಖ್ಯ ಪಾತ್ರ ವಹಿಸುತ್ತದೆಯೋ ಅಷ್ಟೆ ಮುಖ್ಯ ಪಾತ್ರವನ್ನು ನಿಮ್ಮ ತೂಕ ಇಳಿಸಿಕೊಳ್ಳುವಲ್ಲಿಯೂ ನಿರ್ವಹಿಸುತ್ತದೆ.
ಸಾಮಾನ್ಯವಾಗಿ ಈ ಜಾವಿತ್ರಿ ಮಸಾಲೆಯಲ್ಲಿ ಚಿನ್ನದಂತಹ ಆರೋಗ್ಯ ಗುಣಗಳಿದೆ, ಇದು ಔಷಧೀಯ ಗುಣಗಳಿಂದ ಕೂಡಿದ್ದು, ಅನೇಕ ರೋಗಗಳಿಗೆ ಇದು ರಾಮಬಾನವಾಗಿ ಕೆಲಸ ಮಾಡುತ್ತದೆ.
ದಿನನಿತ್ಯ ನೀವು ನಿಮ್ಮ ಆಹಾರದಲ್ಲಿ ಜಾವಿತ್ರಿಯನ್ನು ಬಳಸುವುದರಿಂದ ಅನೇಕ ಆರೋಗ್ಯ ಪ್ರಯೋಜನೆಗಳು ನಿಮ್ಮದಾಗುತ್ತದೆ.
ಸಾಮಾನ್ಯವಾಗಿ ಜಾಪತ್ರೆ ಅಥವಾ ಜಾವಿತ್ರಿ, ಜೀರ್ಣಕಾರಿ ಸಮಸ್ಯೆ, ಕಿಡ್ಡಿ ಸ್ಟೋನ್ಸ್, ಸಂಧಿವಾತ, ತೂಕ ಇಳಿಕೆ, ಚರ್ಮದ ಕಾಂತಿಯಂತಹ ಹಲವಾರು ಸಮಸ್ಯೆಗಳಿಗೆ ರಾಮಬಾಣ.
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಜಾವಿತ್ರಿ ಉತ್ತಮ ಮದ್ದಾಗಿ ಕಾರ್ಯ ನಿರ್ವಹಿಸುತ್ತದೆ.
ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಜಾವಿತ್ರಿಯನ್ನು ಸೇವಿಸಿ ಆಹಾರ ಸೇವಿಸುವುದರಿಂದ, ನಿಮ್ಮ ತೂಕ ಇಳಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.
ಜಾವಿತ್ರಿಯಲ್ಲಿ ಹಸಿವನ್ನು ಕಡಿಮೆ ಮಾಡುವ ಗುಣವಿದೆ, ಆದ್ದರಿಂದ ನಿವೂ ಹತೋಟಿಯಲ್ಲಿ ಆಹಾರವನ್ನು ಸೇವನೆ ಮಾಡಬಹುದು, ಇದರಿಂದ ನಿಮ್ಮ ತೂಕ ಇಳಿಕೆಯಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ, ಸಾಮಾನ್ಯ ಜ್ಞಾನವನ್ನು ಒಳಗೊಂಡಿದೆ. ಇದನ್ನು ZEE NEW KANNADA ಖಚಿತ ಪಡುಸುವುದಿಲ್ಲ.