ಬೊಜ್ಜು ಸಮಸ್ಯೆಗೆ ರಾಮಬಾಣ ಈ ಕಾಳು.. ಎದ್ದೇಳುತ್ತಲೇ ಒಂದು ಗ್ಲಾಸ್‌ ನೀರಿನೊಂದಿಗೆ ಬೆರೆಸಿ ಕುಡಿದರೆ ಕೊಲೆಸ್ಟ್ರಾಲ್‌ ಕಡಿಮೆಯಾಗಿ ಹೃದಯದ ಆರೋಗ್ಯ ಸುಧಾರಿಸುವುದು!

Fri, 08 Nov 2024-7:29 am,

ಹೊಟ್ಟೆಯ ಬೊಜ್ಜು ಸಮಸ್ಯೆ ಅನೇಕ ಜನರನ್ನು ಕಾಡುತ್ತಿದೆ. ಹೆಚ್ಚು ಗಂಟೆಗಳ ಕಾಲ ಕುಳಿತು ಕೆಲಸ ಮಾಡುವುದು ಮತ್ತು ಸರಿಯಾದ ವ್ಯಾಯಾಮದ ಕೊರತೆ ಬೊಜ್ಜು ಸಮಸ್ಯೆಗೆ ಮುಖ್ಯ ಕಾರಣವಾಗಿದೆ.

ಈ ಹೊಟ್ಟೆಯ ಕೊಬ್ಬು ಹಠಮಾರಿ. ಅದು ಅಷ್ಟು ಸುಲಭವಾಗಿ ಇಳಿಯುವುದಿಲ್ಲ. ಹೊಟ್ಟೆಯ ಸುತ್ತ ಕೊಬ್ಬನ್ನು ಕಡಿಮೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಪ್ರತಿನಿತ್ಯ ಈ ಕಾಳಿನ ನೀರು ಕುಡಿದರೆ ಹೊಟ್ಟೆಯ ಕೊಬ್ಬು ಕರಗುತ್ತದೆ.

ಕೆಲವರು ಚಿಕ್ಕ ವಯಸ್ಸಿನಿಂದಲೇ ಬೆಲ್ಲಿಫ್ಯಾಟ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಹೊಟ್ಟೆಯ ಕೊಬ್ಬು ಕರಗುವುದಿಲ್ಲ. ಬೊಜ್ಜು ಸಮಸ್ಯೆ ನಿವಾರಿಸಲು ಜೀರಿಗೆ ಪ್ರಮುಖ ಪಾತ್ರ ವಹಿಸುತ್ತದೆ. 

ಪ್ರಾಚೀನ ಕಾಲದಿಂದಲೂ ಜೀರಿಗೆಯನ್ನು ವಿವಿಧ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಜೀರಿಗೆಯನ್ನು ಆಹಾರದಲ್ಲಿ ಸೇರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

ಜೀರಿಗೆಯನ್ನು ತಿನ್ನುವುದರಿಂದ ಹೊಟ್ಟೆಯ ಕೊಬ್ಬಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಅಂದರೆ ಬೆಳಿಗ್ಗೆ ಮೊದಲು ಈ ನೀರನ್ನು ಕುಡಿಯಿರಿ. ಜೀರಿಗೆ ಪುಡಿಯನ್ನು ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನೀರನ್ನು ಅರ್ಧದಷ್ಟು ಕುದಿಸಿ.  

ಜೀರಿಗೆ ನೀರಿಗೆ ಲಿಂಬೆ ಹಣ್ಣು ಒಂದೆರಡು ಹನಿ ಮತ್ತು ಅರ್ಧ ಚಮಚ ಜೇನುತುಪ್ಪ ಬೆರೆಸಿ ಚೆನ್ನಾಗಿ ಮಿಕ್ಸ್‌ ಮಾಡಿ. ಈ ನೀರನ್ನು ಕುಡಿಯಿರಿ. ಅರ್ಧ ಗಂಟೆವರೆಗೂ ಏನನ್ನೂ ಸೇವಿಸಬೇಡಿ. 

ಜೀರಿಗೆ ನೀರು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸಬಹುದು. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಜೀರಿಗೆ ಪರಿಣಾಮಕಾರಿ ಪರಿಹಾರವಾಗಿದೆ.

ಕೊಬ್ಬನ್ನು ನಿಯಂತ್ರಿಸಲು ಜೀರಿಗೆಯನ್ನು ಆಹಾರದಲ್ಲಿ ಬಳಸಲಾಗುತ್ತದೆ. ಜೀರಿಗೆಯನ್ನು ಮಜ್ಜಿಗೆಯ ಜೊತೆಗೂ ಬೆರೆಸಿ ತೆಗೆದುಕೊಳ್ಳಬಹುದು. ಇದು ಕೂಡ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. 

ಕೆಲವರಿಗೆ ಊಟದ ನಂತರ ಮಜ್ಜಿಗೆ ಸೇವಿಸುವ ಅಭ್ಯಾಸವಿರುತ್ತದೆ. ಇದಕ್ಕೆ ಜೀರಿಗೆ ಪುಡಿ ಹಾಕಿ ಕುಡಿದರೆ, ಹಲವು ವರ್ಷಗಳಿಂದ ಕಾಡುತ್ತಿರುವ ಹೊಟ್ಟೆಯ ಬೊಜ್ಜು ಸುಲಭವಾಗಿ ಕಡಿಮೆಯಾಗುತ್ತದೆ. ಇದು ನೈಸರ್ಗಿಕ ಪರಿಹಾರವಾಗಿದೆ. ಯಾವುದೇ ಅಡ್ಡ ಪರಿಣಾಮಗಳಿಲ್ಲ.

ಮಧುಮೇಹಿಗಳಿಗೂ ಜೀರಿಗೆ ನೀರು ಪರಿಣಾಮಕಾರಿಯಾಗಿದೆ. ಇದನ್ನು ಬೆಳಿಗ್ಗೆ ಸೇವಿಸುವುದರಿಂದ ತೂಕ ಕಡಿಮೆಯಾಗುವುದಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link