ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಆಲಿಯಾ ಭಟ್..! ನಟಿಗೆ ಇರುವ ಆರೋಗ್ಯ ಸಮಸ್ಯೆ ಕೇಳಿದ್ರೆ ಕಣ್ಣೀರು ಬರುತ್ತೆ..
ಆಲಿಯಾ ನಟನೆಯ ಜಿಗ್ರಾ ಚಿತ್ರ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಇತ್ತೀಚೆಗಷ್ಟೇ ತೆರೆಕಂಡ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.. ಆದ್ರೆ.. ಜಿಗ್ರಾ ಸಿನಿಮಾ ಥ್ರಿಲ್ಲರ್ ಸಿನಿಮಾ ಆಗಿದ್ದು, ಆಲಿಯಾ ಭಟ್ ಇದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ಅಕ್ಟೋಬರ್ 11ಕ್ಕೆ ಪ್ರೇಕ್ಷಕರ ಮುಂದೆ ಬಂದ ಈ ಸಿನಿಮಾವನ್ನು ವಾಸನ್ ನಿರ್ದೇಶಿಸಿದ್ದಾರೆ. ಅಕ್ಕ ತನ್ನ ತಂಗಿಯ ಹುಡುಕಾಟದಲ್ಲಿ ಎನೇಲ್ಲಾ ಸಾಹಸ ಮತ್ತು ಹೇಗೆ ಅನ್ವೇಷಣೆ ಮಾಡುತ್ತಾಳೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಜಿಗ್ರಾ ಚಿತ್ರವನ್ನು ಪ್ರೇಕ್ಷಕರು ಇಷ್ಟಪಡುತ್ತಿಲ್ಲ ಎನ್ನುವ ಕೆಲವು ವಂದತಿಗಳು ಹಬ್ಬಿದ್ದವು, ಇದಕ್ಕೆ ಟಿ-ಸರಣಿ ನಿರ್ಮಾಪಕ ಭೂಷಣ್ ಕುಮಾರ್ ಅವರ ಪತ್ನಿ ದಿವ್ಯಾ ಖೋಸ್ಲಾ ಅನೇಕರು ನಕಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.. ಈ ಕಾಮೆಂಟ್‌ಗಳು ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದವು..
ಇನ್ನು ಅಲಿಯಾ ಭಟ್ ಇತ್ತೀಚೆಗೆ ತಾನು ಅಪರೂಪದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕರೀನಾ ಕಪೂರ್ ಜೊತೆ ಪಾಡ್‌ಕಾಸ್ಟ್‌ನಲ್ಲಿ ಆಲಿಯಾ ಭಟ್ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಯಾವುದರ ಬಗ್ಗೆಯೂ ಅತಿಯಾಗಿ ಯೋಚಿಸುತ್ತೇನೆ.. ನನಗೆ ಆತಂಕ (alia bhatt clonical anxiety) ಹೆಚ್ಚಿದೆ ಎಂದಿದ್ದಾರೆ..
ಎಲ್ಲರಿಗೂ ಆತಂಕ ಇರುವುದು ಸಾಮಾನ್ಯ... ನನಗೆ ಅದು ತುಂಬಾ ಹೆಚ್ಚಿದೆ... ಪ್ರತಿಯೊಂದು ವಿಚಾರದಲ್ಲಿ, ಎಲ್ಲದರಲ್ಲೂ ಆಂತಕ (clonical anxiety) ಪಡುತ್ತೇನೆ.. ಎಂದರು. ಪತಿ ರಣಬೀರ್ ಕಪೂರ್ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದು ಆಲಿಯಾ ಹೇಳಿದ್ದಾರೆ. ಇದರ ನಡುವೆ ಭಟ್ ಪ್ರಸ್ತುತ ಆಲ್ಫಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಜಿಗ್ರಾ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನಡೆಯಿತು. ವಿಶೇಷ ಅತಿಥಿಯಾಗಿ ಸಮಂತಾ ಉಪಸ್ಥಿತರಿದ್ದರು. ಅದೇ ರೀತಿ.. ರಾಜಮೌಳಿ, ದಗ್ಗುಬಾಟಿ ರಾಣಾ ಕೂಡ ಇದ್ದರು. ಈ ಸಿನಿಮಾ ರಿಲೀಸ್ ನಂತರ ಮಹೇಶ್ ಬಾಬು ಪ್ರತಿಕ್ರಿಯಿಸಿ ಸಿನಿಮಾದ ಬಗ್ಗೆ ಪೋಸ್ಟ್ ಮಾಡಿದ್ದಾರೆ.