Jio 200 ರೂ.ಗಿಂತ ಕಡಿಮೆ ಬೆಲೆಯ ಬೊಂಬಾಟ್ ರಿಚಾರ್ಜ್ ಪ್ಲಾನ್
ಭಾರತೀಯ ಟೆಲಿಕಾಂ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿರುವ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಇದೀಗ ಹೊಸ ವರ್ಷದ ಸಂದರ್ಭದಲ್ಲಿ ತನ್ನ ಗ್ರಾಹಕರಿಗಾಗಿ ಬೊಂಬಾಟ್ ಯೋಜನೆಗಳನ್ನು ಪರಿಚಯಿಸಿದೆ.
ಜಿಯೋ 200 ರೂ.ಗಿಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಅಗ್ಗದ ದರದಲ್ಲಿ ಲಭ್ಯವಿರುವ ಈ ರಿಚಾರ್ಜ್ ಪ್ಲಾನ್ ಗಳಲ್ಲಿ ಗ್ರಾಹಕರಿಗೆ ಹಲವು ಪ್ರಯೋಜನಗಳು ಲಭ್ಯವಿವೆ.
ಜಿಯೋ 189 ರೂ. ಪ್ರಿಪೇಯ್ಡ್ ಪ್ಲಾನ್ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಗ್ರಾಹಕರು ಅನಿಯಮಿತ ಕರೆ, 300 ಎಸ್ಎಂಎಸ್ ಸೌಲಭ್ಯ ಮತ್ತು 2 ಜಿಬಿ ಡೇಟಾವನ್ನು ಮಾತ್ರ ಪಡೆಯುತ್ತಾರೆ.
ಜಿಯೋ 198ರೂ. ಪ್ರಿಪೇಯ್ಡ್ ಪ್ಲಾನ್ 14 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ, ದೈನಂದಿನ 100 ಎಸ್ಎಂಎಸ್ ಜೊತೆಗೆ ಪ್ರತಿ ದಿನ 2 ಜಿಬಿ ಡೇಟಾ ಕೂಡ ಸಿಗುತತ್ತದೆ. ಅಷ್ಟೇಯಲ್ಲ ಇದರಲ್ಲಿ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ನಂತರ ಹಲವು ಸೇವೆಗಳು ಕೂಡ ಲಭ್ಯವಾಗುತ್ತವೆ.
ಜಿಯೋ 199ರೂ. ಪ್ರಿಪೇಯ್ಡ್ ಪ್ಲಾನ್ 18 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ಕರೆ, ನಿತ್ಯ 100 ಎಸ್ಎಂಎಸ್, ಪ್ರತಿದಿನ 1.5 ಜಿಬಿ ಡೇಟಾ ದೊರೆಯಲಿದೆ. ಅಷ್ಟೇ ಅಲ್ಲ, ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರು ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ನಂತರ ಹಲವು ಸೇವೆಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ.