Amazonನಲ್ಲಿ ಕೇವಲ 4 ಗಂಟೆ ಕೆಲಸ ಮಾಡಿದರೆ ಸಾಕು ತಿಂಗಳಿಗೆ ಸಿಗಲಿದೆ 70,000 ರೂ. ವೇತನ
ಅಮೆಜಾನ್ ದೇಶದ ಹೆಚ್ಚಿನ ನಗರಗಳಲ್ಲಿ ಕೇಂದ್ರಗಳನ್ನು ಹೊಂದಿದೆ. ಎಲ್ಲಾ ಪ್ಯಾಕೇಜುಗಳನ್ನು ಗ್ರಾಹಕರ ವಿಳಾಸಕ್ಕೆ ತಲುಪಿಸಲಾಗುತ್ತದೆ. ಪ್ಯಾಕೇಜ್‌ಗಳನ್ನು ಅಮೆಜಾನ್ ಸೆಂಟರ್‌ನಿಂದ ಸುಮಾರು 10-15 ಕಿಮೀ ಪ್ರದೇಶದಲ್ಲಿ ತಲುಪಿಸಲಾಗುತ್ತದೆ.
ಡೆಲಿವರಿ ಬಾಯ್ ಇಡೀ ದಿನ ಕೆಲಸ ಮಾಡಬೇಕಾಗಿಲ್ಲ. ಕೆಲವೇ ಪ್ಯಾಕೇಜುಗಳು ಮಾತ್ರ ಅವನ ಪ್ರದೇಶದ ಡೆಲಿವರಿ ಭಾಗದಲ್ಲಿ ಬರುತ್ತದೆ. ಅಮೆಜಾನ್ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ವಿತರಣೆ ನೀಡುತ್ತದೆ. ಒಂದು ದಿನದಲ್ಲಿ 100-150 ಪ್ಯಾಕೇಜ್‌ಗಳನ್ನು ಸುಮಾರು 4 ಗಂಟೆಗಳಲ್ಲಿ ತಲುಪಿಸುತ್ತಾರೆ ಎಂದು ಡೆಲಿವೆರಿ ಬಾಯ್ ಒಬ್ಬರು ಹೇಳುತ್ತಾರೆ.
ಡೆಲಿವರಿ ಬಾಯ್ ಆಗಲು, ನೀವು ಪದವಿ ಹೊಂದಿರಬೇಕು. ಒಂದು ವೇಳೆ ಶಾಲೆ ಅಥವಾ ಕಾಲೇಜು ಪಾಸಾಗಿದ್ದರೆ ಉತ್ತೀರ್ಣ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಸ್ವಂತ ಬೈಕ್ ಅಥವಾ ಸ್ಕೂಟರ್ ಹೊಂದಿರಬೇಕು. ಬೈಕ್ ಅಥವಾ ಸ್ಕೂಟರ್ ವಿಮೆ, ಆರ್‌ಸಿ ಮಾನ್ಯವಾಗಿರಬೇಕು. ಅಲ್ಲದೆ, ಚಾಲನಾ ಪರವಾನಗಿ ಹೊಂದಿರಬೇಕು.
ಡೆಲಿವರಿ ಬಾಯ್ ಜಾಬ್ಸ್ ಗಾಗಿ ನೀವು ನೇರವಾಗಿ ಅಮೆಜಾನ್ ಸೈಟ್ https://logistics.amazon.in/applynow ನಲ್ಲಿ ಅರ್ಜಿ ಸಲ್ಲಿಸಬಹುದು. ಇದಲ್ಲದೇ, ಕೆಲಸಕ್ಕೆ ಅರ್ಜಿ ಹಾಕುವುದನ್ನು ಅಮೆಜಾನ್‌ನ ಯಾವುದೇ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಮಾಡಬಹುದು.
ಅಮೆಜಾನ್ ಡೆಲಿವರಿ ಬಾಯ್ ಪ್ರತಿ ತಿಂಗಳು ನಿಯಮಿತ ವೇತನ ಪಡೆಯುತ್ತಾರೆ. ಅಮೆಜಾನ್‌ನಲ್ಲಿ, ಡೆಲಿವರಿ ಹುಡುಗರು 12 ರಿಂದ 15 ಸಾವಿರ ರೂಪಾಯಿಗಳ ಸ್ಥಿರ ವೇತನವನ್ನು ಪಡೆಯುತ್ತಾರೆ. ಪೆಟ್ರೋಲ್ ಬೆಲೆ ನಿಮ್ಮದು. ಆದರೆ, ಉತ್ಪನ್ನ ಅಥವಾ ಪ್ಯಾಕೇಜ್ ತಲುಪಿಸಲು 15 ರಿಂದ 20 ರೂಪಾಯಿಗಳು ಸಿಗುತ್ತದೆ. ವಿತರಣಾ ಸೇವಾ ಪೂರೈಕೆದಾರರ ಪ್ರಕಾರ, ಯಾರಾದರೂ ಒಂದು ತಿಂಗಳು ಕೆಲಸ ಮಾಡಿದರೆ ಮತ್ತು ಪ್ರತಿದಿನ 100 ಪ್ಯಾಕೇಜ್‌ಗಳನ್ನು ತಲುಪಿಸಿದರೆ, ಒಬ್ಬರು ತಿಂಗಳಿಗೆ 60000-70000 ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು.
ಅಮೆಜಾನ್‌ನಲ್ಲಿ ಡೆಲಿವರಿ ಬಾಯ್ ಕೆಲಸ ಮಾಡಲು, ನೀವು ನಿಮ್ಮ ಇಮೇಲ್ ಐಡಿ ಮೂಲಕ ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ, ಸಂಪೂರ್ಣ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ, ಯಾವುದೇ ಮಾಹಿತಿಯನ್ನು ಬಿಡಬೇಡಿ. ಸೇವಾ ನಿಯಮಗಳನ್ನು ಸಹ ಎಚ್ಚರಿಕೆಯಿಂದ ಓದಿ. ಕಂಪನಿಯು ನಿಮ್ಮನ್ನು ಹಿನ್ನೆಲೆ ಪರಿಶೀಲನೆಗಾಗಿ ಕೇಳುತ್ತದೆ, ಅದನ್ನು ನಿರಾಕರಿಸಬೇಡಿ.